ಬೇಟಿ ಬಚಾವೋ ಸಭೆಯಲ್ಲಿ ಚಪ್ಪಲಿಯಿಂದ ಹೊಡೆದ ಮಹಿಳೆ| ವೀಡಿಯೋ ವೈರಲ್

Share the Article

ಈಗಾಗಲೇ ದೇಶದ ಜನರು ದೆಹಲಿಯಲ್ಲಿ ನಡೆದ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್ ನ ಭೀಕರ ಹತ್ಯೆ ಪ್ರಕರಣ ನಮಗೆಲ್ಲರಿಗೂ ಗೊತ್ತೇ ಇದೆ. ಸದ್ಯ ಇನ್ನು ಮುಂದೆ ಯಾವ ಹೆಣ್ಣಿಗೂ ಆ ಸ್ಥಿತಿ ಬರಬಾರದು ಎಂಬುದು ಎಲ್ಲರ ಆಶಯ .

ಹೌದು ಭೀಕರ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ನಗರದಲ್ಲಿ ಆಯೋಜಿಸಿದ್ದ ‘ಬೇಟಿ ಬಚಾವೋ ಮಹಾಪಂಚಾಯತ್’ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಹಿಳೆಯೊಬ್ಬರು ವ್ಯಕ್ತಿಯೋರ್ವನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಸುದ್ದಿಯಾಗಿದೆ.

ಶ್ರದ್ಧಾ ವಾಕರ್ ಳನ್ನು ಕತ್ತು ಹಿಸುಕಿ ಕೊಂದಿದ್ದ ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದು ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದ ಮಧ್ಯೆ ವೇದಿಕೆಗೆ ಬಂದ ಮಹಿಳೆ ಮೈಕ್ ನಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಈ ವೇಳೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಈತನ ಮಗ ನನ್ನ ಮಗಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮೈಕ್‌ನಲ್ಲಿ ಆಕೆಯು, ನಾನು ಐದು ದಿನಗಳಿಂದ ದೂರು ಕೊಡಲು ಪೊಲೀಸ್ ಠಾಣೆ ಅಲೆಯುತ್ತಿದ್ದೇನೆ . ಆದರೆ ಪೊಲೀಸರು ನಿಷ್ಕ್ರಿಯತೆ ತೋರುತ್ತಿದ್ದಾರೆ ಎಂದು ಎಕಯೇಕಿ ಆರೋಪಿಸಿದರು.

ಈ ವಿಡಿಯೋದಲ್ಲಿ ಚಪ್ಪಲಿಯಿಂದ ಒದೆ ತಿಂದ ವ್ಯಕ್ತಿ ಮಹಿಳೆಯು ಮೈಕ್ ನಲ್ಲಿ ತನ್ನ ಮಗನ ವಿರುದ್ಧ ಏನು ಹೇಳದಂತೆ ತಡೆಯುತ್ತಿದ್ದುದ್ದನ್ನು ಕಾಣಬಹುದಾಗಿದೆ.

ಒಟ್ಟಿನಲ್ಲಿ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ.

Leave A Reply