ಪುರುಷರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಏನು?
ಕಾಮಾಸಕ್ತಿ ಎನ್ನುವುದು ಗಂಡು ಹೆಣ್ಣಿನ ಮಧ್ಯೆ ಎಷ್ಟಿದೆ ಎಷ್ಟಿರಬಹುದು ಎನ್ನುವುದು ಲೆಕ್ಕ ಹಾಕೋದು ಕಷ್ಟ. ಆದರೆ ಇದ್ದ ಕಾಮಾಸಕ್ತಿಯನ್ನು ಕಡಿಮೆ ಆಗದೇ ಇರೋ ಹಾಗೆ ಯಾವ ರೀತಿಯಲ್ಲಿ ಸುಧಾರಿಸಬಹುದು ಎಂಬುದರ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಪುರುಷರಲ್ಲಿ ಕಾಮಾಸಕ್ತಿ ಕಡಿಮೆಯಾಗಲು ಹಲವಾರು ಕಾರಣಗಳಿರುತ್ತದೆ. ಈ ಸಮಸ್ಯೆಯನ್ನು ಸುಧಾರಿಸಲು ಅರಿಶಿನ ಸಹಕಾರಿ ಎನ್ನುತ್ತಾರೆ ಆಯುರ್ವೇದ ತಜ್ಞರ ಮಾತು.
ಅರಿಶಿನವು ಒಂದು ಔಷಧೀಯ ಗುಣವುಳ್ಳ ಮಸಾಲೆ ಪದಾರ್ಥ. ಈ ಅರಿಶಿಣಕ್ಕೆ ಅದರದ್ದೇ ಆದ ಔಷಧೀಯ ಗುಣಗಳಿದ್ದು, ಅನೇಕ ರೋಗಗಳಿಂದ ಮನುಷ್ಯನನ್ನು ಸಂರಕ್ಷಿಸುತ್ತದೆ. ಇದನ್ನು ತಿನ್ನುವುದರಿಂದ ಉರಿಯೂತದ ಗುಣಲಕ್ಷಣಗಳು, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಫೈಬರ್, ಪ್ರೋಟೀನ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ದೊರೆಯುತ್ತದೆ.
ಇದರ ಬಳಕೆಯಿಂದ ಪುರುಷರ ಲೈಂಗಿಕ ಜೀವನವನ್ನು ಆರೋಗ್ಯದಾಯಕವಾಗಿರುವುದು ಮಾತ್ರವಲ್ಲದೇ, ಮತ್ತು ಚರ್ಮಕ್ಕೂ ಇದು ಪ್ರಯೋಜನ. ಅರಿಶಿನವನ್ನು ಸರಿಯಾಗಿ,ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.
ಒಂದು ಅಂದಾಜಿನ ಪ್ರಕಾರ, 15 ಪ್ರತಿಶತ ಪುರುಷರು ಕಡಿಮೆ ಲೈಂಗಿಕಾಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ಹೆಚ್ಚುತ್ತಿರುವ ವಯಸ್ಸು ಮತ್ತು ಒತ್ತಡವೇ ಈ ಸಮಸ್ಯೆಗೆ ಕಾರಣ. ಅರಿಶಿನದಲ್ಲಿರುವ ಅಂಶಗಳು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಯಸ್ಸಾದಂತೆ, ಪುರುಷರು ಆಯಾಸವನ್ನು ಹೊಂದುತ್ತಾರೆ. ಆದರೆ, ರಕ್ತದ ಹರಿವು ಸುಧಾರಿಸಿದ ನಂತರ, ದೇಹದ ಅಂಗಾಂಶಗಳು ಸಾಕಷ್ಟು ಶಕ್ತಿಯನ್ನು ಪಡೆಯುತ್ತವೆ. ಈ ಕಾರಣದಿಂದಾಗಿ, ಪುರುಷರ ಆಯಾಸದ ದೂರುಗಳು ಕಡಿಮೆಯಾಗುತ್ತವೆ.
ಹಾಗಾಗಿಯೇ ಇಲ್ಲಿ ಅರಿಶಿನವನ್ನು ತಿಂದರೆ ಪರೋಕ್ಷವಾಗಿ ಇದು ಕಾಮವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಯಾವಾಗ ಕಾಮಾಸಕ್ತಿ ಹೆಚ್ಚಾಗುತ್ತೋ ಆವಾಗ ಪುರುಷರ ಕಾರ್ಯಕ್ಷಮತೆಯಲ್ಲಿ ತನ್ನಿಂತಾನೇ ಏರಿಕೆ ಹೆಚ್ಚಾಗುತ್ತದೆ.
ತಜ್ಞರೋರ್ವರ ಪ್ರಕಾರ, ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರಕ್ತನಾಳಗಳಲ್ಲಿ ಊತವನ್ನು ಅನುಮತಿಸುವುದಿಲ್ಲ. ಈ ಕಾರಣದಿಂದಾಗಿ, ರಕ್ತದ ಹರಿವು ಉತ್ತಮಗೊಳ್ಳುತ್ತದೆ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ಗುಣಪಡಿಸಲು ಇದು ಅತ್ಯಂತ ಪರಿಣಾಮಕಾರಿಯಾಗಿದೆ.
ಅರಿಶಿನವು ಪುರುಷರ ಚರ್ಮ ಮತ್ತು ಮುಖಕ್ಕೂ ಸಹ ಉತ್ತಮ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಅರಿಶಿನದ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತತೆ, ಮೊಡವೆಗಳು, ಕಪ್ಪುಕಲೆ ಮತ್ತು ಮುಖದ ಮೇಲಿನ ಕಲೆಗಳನ್ನು ಪುರುಷರು ಹೋಗಲಾಡಿಸಬಹುದು. ಹಾಗಾಗಿ ಇದನ್ನು ವಾರಕ್ಕೊಮ್ಮೆ ಬಳಸಿ ಪ್ರಯೋಜನ ಪಡೆಯಬಹುದು.