Actress Meena : ಬಟ್ಟಲು ಕಂಗಳ ಚೆಲುವೆ 2ನೇ ಮದುವೆಗೆ ರೆಡಿ?! ಮೀನಾ ಕೈ ಹಿಡಿಯೋ ವ್ಯಕ್ತಿ ಇವರೇನಾ?

Share the Article

ದಕ್ಷಿಣ ಚಿತ್ರರಂಗದ ಮೇರು ನಟಿ ಮೀನಾ ಯಾರಿಗೆ ತಾನೇ ಗೊತ್ತಿಲ್ಲ. ಬಟ್ಟಲು ಕಣ್ಣುಗಳ ಈ ಚೆಲುವೆ ಆ್ಯಕ್ಟಿಂಗ್ ನಲ್ಲೂ ಎಲ್ಲರ ಮನ ಮನಸ್ಸಲ್ಲೂ ನೆಲೆಸಿರುವ ನಟಿ ಎಂದೇ ಹೇಳಬಹುದು. ಮದುವೆಯಾಗಿ, ಅವರಷ್ಟೇ ಮುದ್ದು ಮಗುವಿನ ತಾಯಾಗಿರುವ ಮೀನಾ ಬಾಳಲ್ಲಿ ಒಂದು ದುರಂತ ಘಟನೆ ನಡೆಯುತ್ತೆ. ಅದುವೇ ಅವರ ಪತಿಯ ನಿಧನ.

ಬಹುಭಾಷ ನಟಿ ಮೀನಾರವರ ಪತಿಯು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. ಮೀನಾ ಅವರ ಪತಿ ವಿದ್ಯಾ ಸಾಗರ್ ಅವರು ಈ ವರ್ಷ ಜೂನ್ 28 ರಂದು ನಿಧನರಾದರು.2009ರಲ್ಲಿ ಮೀನಾ ಅವರು ವೃತ್ತಿಯಲ್ಲಿ ಸಾಫ್ಟ್ ಎಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು.

ಮೀನಾಗೆ 6 ವರ್ಷದ ಮಗಳಿದ್ದಾಳೆ. ಗಂಡನ ಸಾವಿನ ನಂತರ ಮೀನಾ ಒಂಟಿಯಾಗಿದ್ದು. ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಗಂಡನನ್ನು ಕಳೆದುಕೊಂಡಿರುವುದರಿಂದ ಮೀನಾ ಅವರು ಖಿನ್ನತೆಗೊಳಪಟ್ಟಿದ್ದರು. ಇದರಿಂದಾಗಿ ಹಲವು ದಿನಗಳ ಕಾಲ ಶೂಟಿಂಗೂ ಬರದೇ ಒಂಟಿಯಾಗಿಯೇ ಇದ್ದರು.

ಪತಿಯ ಸಾವಿನಿಂದ ಕಂಗೆಟ್ಟಿದ್ದ ಮೀನಾ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಹಲವಾರು ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಚಿತ್ರದ ಶೂಟಿಂಗೂ ಹಾಜರಾಗಿದ್ದರು. ಇದೀಗ ಜೀವನದ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ ನಟಿ ಮೀನಾ!

ಹೌದು, ಮೀನಾಗೆ ಸದ್ಯ 46 ವರ್ಷ ವಯಸ್ಸಾಗಿದೆ. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದು ಕೊಂಡಿದ್ದಾರೆ. ಮಗಳ ಭವಿಷ್ಯ ಚೆನ್ನಾಗಿರಬೇಕೆಂದು, 2ನೇ ಮದುವೆಯಾಗುವಂತೆ ಆಕೆಯ ಪೋಷಕರು ಸಲಹೆ ನೀಡಿದ್ದಾರಂತೆ.

ಮೀನಾ ಕುಟುಂಬದ ಸ್ನೇಹಿತನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಆ ವ್ಯಕ್ತಿಗೆ ಮೀನಾ ಕುಟುಂಬದೊಂದಿಗೆ ಬಹಳ ಹಿಂದಿನಿಂದಲೂ ಒಳ್ಳೆಯ ಒಡನಾಟವಿದೆ ಎಂದು ವರದಿಯಾಗಿದೆ.ಅಲ್ಲದೇ ಮೀನಾ ಮೇಲೆ ಕುಟುಂಬಸ್ಥರು ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿಜಾಂಶ ಏನೆಂದು ಇನ್ನು ತಿಳಿಯಬೇಕಷ್ಟೆ.

Leave A Reply