SSLC ಮುಖ್ಯ ಪರೀಕ್ಷೆ ನೋಂದಣಿ ದಿನಾಂಕ ಮತ್ತೆ ವಿಸ್ತರಣೆ !
ಎಸೆಸೆಲ್ಸಿ ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯವಾದ ಮಾಹಿತಿ ಇದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2023ರ ಮಾರ್ಚ್ ತಿಂಗಳಿನಲ್ಲಿ ಎಸ್ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ, ಕಾಲೇಜುಗಳಿಂದ ಹಾಜರಾಗುವ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ದಿನಾಂಕವನ್ನು ಮುಂದೂಡಲಾಗಿದೆ.
2023 ಮಾರ್ಚ್ / ಏಪ್ರಿಲ್ ತಿಂಗಳಿನಲ್ಲಿ ನಡೆಯುವ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ನೋಂದಾವಣಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಹಿಂದೆ ದಿನಾಂಕವನ್ನು 25-11-2022 ರವರೆಗೆ ಅವಧಿ ನೀಡಲಾಗಿತ್ತು.
ಆದರೆ , ರಾಜ್ಯದ ಕೆಲವು ಶಾಲೆಗಳ ಜೊತೆಗೆ ಪೋಷಕರಿಂದ ಶಿಕ್ಷಣ ಮಂಡಳಿಗೆ ದೂರವಾಣಿ ಮುಖೇನ ವಿದ್ಯಾರ್ಥಿಗಳ ನೋಂದಣಿ ಮಾಡಲು ದಿನಾಂಕವನ್ನು ವಿಸ್ತರಣೆ ಮಾಡುವ ಕುರಿತಾಗಿ ಮನವಿ ಬಂದ ಕಾರಣದಿಂದ, ವಿದ್ಯಾರ್ಥಿಗಳ ನೋಂದಣಿಗಾಗಿ ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಪರೀಕ್ಷೆ ನೋಂದಣಿಗೆ 03-12-2022 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಿಂದ 2023ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ ( CCRPR, CCEPR, NSR,NSPR) ಕುರಿತ ವಿವರಗಳನ್ನು ಮಂಡಳಿಯ https://sslc.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್‌ಲೋಡ್ ಮಾಡಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ ಶಾಲೆಯ ಮುಖ್ಯೋಪಾಧ್ಯಯರು ಈ ಮಾರ್ಗಸೂಚಿಯನ್ವಯ ವಿದ್ಯಾರ್ಥಿಗಳ ನೋಂದಣಿ ಮಾಡಲು ಸೂಚನೆ ನೀಡಲಾಗಿದೆ.
ಪರೀಕ್ಷಾ ಮಂಡಳಿ ನಿಗದಿಪಡಿಸಿದ ಶುಲ್ಕ ವಿವರಗಳನ್ನು ನೋಡುವುದಾದರೆ:
ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಶಾಲಾ ಅಭ್ಯರ್ಥಿಗಳ (CCERF) ಪರೀಕ್ಷಾ ಶುಲ್ಕ- ಪರೀಕ್ಷಾ ಶುಲ್ಕ ರೂ. 585 ಆಗಿದ್ದು, ಇದರ ಜೊತೆಗೆ ಲ್ಯಾಮಿನೇಷನ್ ಶುಲ್ಕ ರೂ.22 ಸೇರಿ ಒಟ್ಟು ರೂ.607 ಆಗಲಿದೆ.
ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳಿಗೆ (CCEPF) ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ ಪ್ರತಿ ವಿದ್ಯಾರ್ಥಿಗೆ 205 ರೂಪಾಯಿ ಆಗಿದೆ.
ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳ (CCEPF) ಪರೀಕ್ಷಾ ಶುಲ್ಕ- ಪರೀಕ್ಷಾ ಶುಲ್ಕ ರೂ. 585 ಮತ್ತು ಲ್ಯಾಮಿನೇಷನ್ ಶುಲ್ಕ ರೂ.22 ಸೇರಿ ಒಟ್ಟು ರೂ.607ಆಗಲಿದೆ.
ಎಲ್ಲ ವಿಧದ ಪುನರಾವರ್ತಿತ ಅಭ್ಯರ್ಥಿಗಳು ( CCRPR, CCEPR, NSR,NSPR)ಎಲ್ಲ ವಿಧದ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಒಂದು ವಿಷಯಕ್ಕೆ- 370 ರೂಪಾಯಿ ಆಗಿದ್ದು, ಅದೇ ಎರಡು ವಿಷಯಗಳಿಗಾದರೆ, 461 ರೂಪಾಯಿ. ಆಗಲಿದೆ. ಇದರ ಜೊತೆಗೆ ಮೂರು ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ – 620 ರೂಪಾಯಿ ವೆಚ್ಚ ವಾಗಲಿದೆ.