ಕುಡಿತದ ಅಮಲಿನಲ್ಲಿ ಮರದ ರೀಪಿನಿಂದ ಹೊಡೆದು ಮಹಿಳೆಯ ಕೊಲೆ | ಪತಿಯೇ ಕೊಲೆಗಾರ !

Share the Article

ಮಂಗಳೂರು :ಕುಡಿತದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮರದ ರೀಪಿನಿಂದ ಹೊಡೆದು ಕೊಲೆಗೈದ ಘಟನೆ ಮಂಗಳೂರು ತಾಲೂಕಿನ ಎಕ್ಕಾರು ಪಲ್ಲದಕೋಡಿ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕೊಲೆಯಾದ ಮಹಿಳೆ ಯನ್ನು ಸರಿತಾ (35)ಎಂದು ಗುರುತಿಸಲಾಗಿದೆ.ಸರಿತಾಳ ಪತಿ ದುರ್ಗೇಶ್ ಎಂಬಾತ ಕೊಲೆ ಆರೋಪಿ.ದುರ್ಗೇಶ್ ಗೆ ವಿಪರೀತ ಕುಡಿತದ ಚಟವಿದ್ದು ,ಕುಡಿದ ಅಮಲಿನಲ್ಲಿ ಪತ್ನಿಗೆ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Leave A Reply