Home Breaking Entertainment News Kannada ಕಿರುತೆರೆಯಲ್ಲಿ ಮಿಂಚಲು ರೆಡಿಯಾದ ಬಿಗ್ ಬಾಸ್ ವೈಷ್ಣವಿ!

ಕಿರುತೆರೆಯಲ್ಲಿ ಮಿಂಚಲು ರೆಡಿಯಾದ ಬಿಗ್ ಬಾಸ್ ವೈಷ್ಣವಿ!

Hindu neighbor gifts plot of land

Hindu neighbour gifts land to Muslim journalist

ಅಗ್ನಿಸಾಕ್ಷಿ ಖ್ಯಾತಿಯ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥ ವಿಷಯವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ವೈಷ್ಣವಿ ಅವರು ಉದ್ಯಮಿ ವಿದ್ಯಾಭರಣ್ ಜೊತೆಗಿನ ಮದುವೆ ಮಾತುಕತೆಯ ಫೋಟೋವೊಂದು ವೈರಲ್ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದು ಬಿದ್ದಿದ್ದು, ಸದ್ಯ ವೈಷ್ಣವಿ ತಮ್ಮ ಗಮನವನ್ನು ಕಿರುತೆರೆಯ ಕಡೆಗೆ ಹರಿಸಿದ್ದಾರೆ. ಇದೀಗ ಮತ್ತೆ ಕಿರುತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನೂ ಬಿಗ್ಬಾಸ್ ಮಾಜಿ ಸ್ಪರ್ಧಿ ವೈಷ್ಣವಿ ಗೌಡ ಅವರು ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಇರಲೇಬೇಕು ಅಲ್ವಾ!! ಹಾಗಾದರೆ ಇಲ್ಲಿದೆ ಎಲ್ಲಾ ವಿವರಗಳು.

ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವೈಷ್ಣವಿ ಗೌಡ ಅವರು ತಮ್ಮ ನಟನೆಯ ಮೂಲಕ ಜನರ ಮನಗೆದ್ದಿದ್ದಾರೆ. ಮನೆ ಮನೆಗಳಲ್ಲೂ ಹೆಸರುವಾಸಿಯಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ನಟಿ ವೈಷ್ಣವಿ ಅವರು ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.​ ಹಾಗೇ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದರು. ತಮ್ಮನ್ನು ಎಲ್ಲಾ ರೀತಿಯಲ್ಲೂ ತೊಡಗಿಸಿಕೊಂಡು ಸೀಸನ್ 8ರಲ್ಲಿ ಟಾಪ್​ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಇದಾದ ಹಲವು ದಿನಗಳ ಬಳಿಕ ಕಲರ್ಸ್​​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಅದರ ನಾಯಕ ಭೂಪತಿಯ ಗೆಳತಿಯಾಗಿ ವೈಷ್ಣವಿ ಗೌಡ ಅವರು ಒಂದು ಗೆಸ್ಟ್​ ರೋಲ್ ಅಲ್ಲಿ ಎಂಟ್ರಿ ಕೊಟ್ಟಿದ್ದರು. ಆದರೆ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸೀತಾರಾಮ’ ಧಾರವಾಹಿಯ ಮೂಲಕ ಮತ್ತೆ ಕಿರುತೆರೆಯಲ್ಲಿ ನಟಿಸಲು ವೈಷ್ಣವಿ ಸಜ್ಜಾಗಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ವೈಷ್ಣವಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ಈ ಹೊಸ ಸೀತಾರಾಮ ಧಾರಾವಾಹಿ ಸ್ವಪ್ನ ಕೃಷ್ಣರವರ ನಿರ್ದೇಶನದಲ್ಲಿ ಮೂಡಿಬರಲಿದೆ. ಇದರಲ್ಲಿ ಕಥಾನಾಯಕಿಯಾಗಿ ವೈಷ್ಣವಿಗೌಡ ಅವರು ಕಾಣಿಸಿಕೊಂಡರೆ, ಕಥಾನಾಯಕನಾಗಿ ಮಂಗಳಗೌರಿ ಖ್ಯಾತಿಯ ಗಗನ್ ನಟಿಸಲಿದ್ದಾರೆ. ಇನ್ನೂ ಸೀತಾರಾಮ ಧಾರಾವಾಹಿಯ ಮೂಲಕ ವೈಷ್ಣವಿಗೌಡ ಅವರು ಜನರ ಮನ ಗೆಲ್ಲುತ್ತಾರಾ? ಅಭಿಮಾನಿಗಳ ದಿಲ್ ಕದಿಯುತ್ತಾರಾ? ಎಂದು ಕಾದುನೋಡಬೇಕಿದೆ.