ಮಂಗಳೂರಿನಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ | ಯುವತಿಯಿಂದ ದೂರು
ಮಂಗಳೂರು: ಮಂಗಳೂರಿನಲ್ಲಿ ಇದೀಗ ಮತ್ತೊಂದು ಮತಾಂತರದ ಪ್ರಕರಣ ಬಯಲಾಗಿದೆ. ಹಿಂದೂ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಖಲೀಲ್ ಎಂಬಾತ ಮನೆ ಕೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನ ಮೇರೆಗೆ ಮಂಗಳೂರಿನ ಪ್ರಸಿದ್ಧ ಹೆರಿಗೆ ತಜ್ಞೆ ಸೇರಿದಂತೆ ಮೂರು ಮಂದಿಯ ವಿರುದ್ಧ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊಬೈಲ್ ರಿಚಾರ್ಜ್‌ಗೆಂದು ಅಂಗಡಿಗೆ ಬರುತ್ತಿದ್ದ ಮಂಗಳೂರು ನಗರದ ಹಿಂದೂ ಯುವತಿಯೊಬ್ಬಳಿಗೆ ಅನ್ಯಕೋಮಿನ ಅಂಗಡಿಯ ಮಾಲೀಕ ಖಲೀಲ್ ಎಂಬಾತ ಕೆಲಸ ನೀಡುತ್ತೇನೆಂದು ಹೇಳಿದ್ದ. ಹಾಗೇ ಕಲ್ಲಾಪಿನ ತನ್ನ ಕುಟುಂಬಸ್ಥರಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದಾನೆ. ಇದು ಕೇವಲ ನೆಪವಾಗಿತ್ತು, ಆಕೆಯನ್ನು ಮತಾಂತರ ಮಾಡಲು ಆತನ ಉಪಾಯವಾಗಿತ್ತು. ನಂತರ ಆಕೆಗೆ ಹಣದ ಆಮಿಷವೊಡ್ಡಿ ಮತಾಂತರ ಮಾಡಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ನೊಂದ 20 ರ ಹರೆಯದ ಯುವತಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಹಿಂದೂ ಯುವತಿ ನೀಡಿದ ದೂರಿನಂತೆ ಐಪಿಸಿ 354, 354(ಎ), 505, 34 ಹಾಗೂ ಕರ್ನಾಟಕ ಮತಾಂತರ ನಿಷೇಧ ಕಾಯಿದೆ 2022ರ ಕಲಂ 3ಮತ್ತು 5 ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.