ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಮಾನ್ಯತೆ -ಅನುರಾಗ್ ಸಿಂಗ್ ಠಾಕೂರ್

ಡಿಜಿಟಲ್ ಮಾಧ್ಯಮಗಳ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು. ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನು ಶೀಘ್ರದಲ್ಲೇ ಬರಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ ಎಂದಿದ್ದಾರೆ.ದೇಶದಲ್ಲಿ ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ. ಅಂತೆಯೇ ಇದರ ಭವಿಷ್ಯ ಉತ್ತಮವಾಗಿದೆ, ತಕ್ಕಂತ ಸವಾಲುಗಳೂ ಇವೆ. ಇವೆಲ್ಲವೂ ಸರಿಹೋಗುವಂತೆ ನೋಡಿಕೊಳ್ಳಲು ನೂತನ ಕಾನೂನು ಬೇಕಿದೆ ಎಂದು ಹೇಳಿದರು. ಪತ್ರಿಕೆಗಳ ನೊಂದಣೀಕರಣ ಸರಳಗೊಳಿಸಲಾಗುವುದು,ಈ ಕುರಿತು ಶೀಘ್ರದಲ್ಲೇ ನೂತನ ಕಾನೂನು ಜಾರಿಗೆ ಬರಲಿದೆ.

ಒಂದು ತಿಂಗಳ ಬದಲು ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು ಎಂದರು.ಜನರಿಗೆ ಸಹಾಯವಾಗುವ ಸರ್ಕಾರದ ಯೋಜನೆಗಳು ಮಾಧ್ಯಮಗಳ ಮೂಲಕ ಜನರನ್ನು ತಲುಪಬೇಕು ಎಂದಿದ್ದಾರೆ.

Leave A Reply

Your email address will not be published.