Home latest ಹುಡುಗನನ್ನೇ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಮಾಡಿದ ನಾಲ್ವರು ಹುಡುಗಿಯರು!

ಹುಡುಗನನ್ನೇ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಮಾಡಿದ ನಾಲ್ವರು ಹುಡುಗಿಯರು!

Hindu neighbor gifts plot of land

Hindu neighbour gifts land to Muslim journalist

ಎಲ್ಲಿ ನೋಡಿದರಲ್ಲಿ ದಿನ ಬೆಳಗಾದರೆ ಸಾಕು ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುವ ಸುದ್ದಿ ನಾವು ಕೇಳ್ತಾ ಇರುತ್ತೇವೆ. ಆದರೆ ಇಲ್ಲೊಂದು ಕಡೆ ನಡೆದ ಸುದ್ದಿ ನಿಜಕ್ಕೂ ನಿಮ್ಮನ್ನು ಬೆಚ್ಚಿಬಿಳಿಸುತ್ತದೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಮನಸ್ಥಿತಿ ಬರುವಷ್ಟರಲ್ಲಿ ಇಲ್ಲಿ ಪುರುಷನೇ ಮಹಿಳೆಯರಿಂದ ಅತ್ಯಾಚಾರಕ್ಕೆ ಒಳಗಾದ ಬೆಚ್ಚಿ ಬೀಳುವ ಸುದ್ದಿ ಹೊರಬಿದ್ದಿದೆ.

ಹೌದು, ಪಂಜಾಬ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಾಲ್ವರು ಹುಡುಗಿಯರು ಯುವಕನನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಸುದ್ದಿ ಕಲಿಗಾಲದಲ್ಲಿ ಗಂಡಸರಿಗೂ ಸುರಕ್ಷತೆ ಇಲ್ಲ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಬಹುದು.

ವಿಷಯ ಏನೆಂದರೆ, ಪಂಜಾಬ್‌ನ ಜಲಂಧರ್‌ನಲ್ಲಿ ನಾಲ್ವರು ಹುಡುಗಿಯರು ಯುವಕನನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತನೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಾನು ಫ್ಯಾಕ್ಟರಿಯಿಂದ ಮನೆಗೆ ಹೋಗುತ್ತಿದ್ದಾಗ 22ರಿಂದ 23 ವರ್ಷದೊಳಗಿನ ನಾಲ್ವರು ಹುಡುಗಿಯರು ಕಾರಿನಲ್ಲಿ ಬಂದು ವಿಳಾಸ ಕೇಳಿದ್ದರು. ವಿಳಾಸ ನೀಡುವಾಗ, ತನ್ನನ್ನು ಅಪಹರಿಸಿ ಕರೆದೊಯ್ದು, ನಂತರ ರಾತ್ರಿಯಿಡೀ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಿದ್ದಾನೆ.

ನಾಲ್ವರು ಹುಡುಗಿಯರು ಕಾಮದಾಹದಿಂದ ಈ ರೀತಿ ಮಾಡಿದರೇ ಎಂಬುದು ತನಿಖೆಯ ನಂತರ ತಿಳಿಯೋಕೆ ಸಾಧ್ಯ. “ತಾನು ಫ್ಯಾಕ್ಟರಿಯಿಂದ ಮನೆಗೆ ಹೋಗುತ್ತಿದ್ದಾಗ 22ರಿಂದ 23 ವರ್ಷದೊಳಗಿನ ನಾಲ್ವರು ಹುಡುಗಿಯರು ಕಾರಿನಲ್ಲಿ ಬಂದು ವಿಳಾಸ ಕೇಳಿದ್ದರು. ವಿಳಾಸ ನೀಡುವಾಗ, ತನ್ನನ್ನು ಅಪಹರಿಸಿ ಕರೆದೊಯ್ದು, ನಂತರ ರಾತ್ರಿಯಿಡೀ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದ್ದಾರೆ, ನಂತರ ಆತನನ್ನು ರಸ್ತೆ ಬದಿಯಲ್ಲಿ ಇಳಿಸಿ ತೆರಳಿದರು” ಎಂದು ಸಂತ್ರಸ್ತನೇ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ.

“ನಾನು ಮನೆಗೆ ನಡೆದುಕೊಂಡು ಹೋಗುತ್ತಿದ್ದೆ. ಅದೇ ಸಮಯಕ್ಕೆ ಒಂದು ಬಿಳಿಯ ಕಾರು ಬಂತು. ಅದರಲ್ಲಿ ನಾಲ್ವರು ಹುಡುಗಿಯರಿದ್ದರು, ಕಾರನ್ನು ಓಡಿಸುವ ಹುಡುಗಿ ನನಗೆ ಒಂದು ಕಾಗದವನ್ನು ಕೊಟ್ಟಳು. ಅದರಲ್ಲಿ ವಿಳಾಸವಿತ್ತು ನಾನು ಆ ಸ್ಲಿಪ್ ಅನ್ನು ನೋಡುತ್ತಿದ್ದೆ, ಅಷ್ಟರಲ್ಲಿ ನನ್ನ ಕಣ್ಣಿಗೆ ಕೆಮಿಕಲ್ ಚಿಮ್ಮಿತು. ಇದರಿಂದ ನನ್ನ ಕಣ್ಣುಗಳು ಕಾಣಲಿಲ್ಲ. ಅದರ ನಂತರ ನಾನು ಕಣ್ಣುಮುಚ್ಚಿದೆ. ಅನಂತರ ನನ್ನ ಕೈಗಳನ್ನು ಕಟ್ಟಲಾಗಿತ್ತು. ನನ್ನನ್ನು ಅಪಹರಿಸಿ ಕಾರಿನಲ್ಲಿ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಎಲ್ಲಾ ಹುಡುಗಿಯರು ಮಾದಕ ದ್ರವ್ಯ ಸೇವಿಸಿದ್ದರು, ನನಗೂ ಕುಡಿಯುವಂತೆ ಒತ್ತಾಯಿಸಿದರು. ನಾನು ಮಾದಕ ದ್ರವ್ಯ ಸೇವಿಸುವಂತೆ ಮಾಡಿದರು, ನಾನು ಪ್ರಜ್ಞೆ ಕಳೆದುಕೊಂಡ ನಂತರ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದರು. ಅದರ ನಂತರ, ಅವರು ನನ್ನನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಒಂದು ಪ್ರದೇಶದಲ್ಲಿ ಡ್ರಾಪ್ ಮಾಡಿದರು, “ಎಂದು ಸಂತ್ರಸ್ತನು ಹೇಳಿಕೆ ನೀಡಿದ್ದಾನೆ.