Home ದಕ್ಷಿಣ ಕನ್ನಡ BIGG NEWS : ಮಂಗಳೂರು ಕುಕ್ಕರ್ ಬ್ಲಾಸ್ ಕೇಸ್‌ : ‘ಭಯೋತ್ಪಾದಕ ಕೃತ್ಯ ನಡೆಸುವವರ ಜನ್ಮ...

BIGG NEWS : ಮಂಗಳೂರು ಕುಕ್ಕರ್ ಬ್ಲಾಸ್ ಕೇಸ್‌ : ‘ಭಯೋತ್ಪಾದಕ ಕೃತ್ಯ ನಡೆಸುವವರ ಜನ್ಮ ಜಾಲಾಡುತ್ತೇವೆ’ : ನಳಿನ್ ಕುಮಾರ್ ಕಟೀಲ್ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : “ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.

ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ ಅವರು, “ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ” ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು. ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ. ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಮಂಗಳೂರಿನ ಬಾಂಬ್ ಸ್ಫೋಟದ ತನಿಖೆ ನಡೆಸಲಿದ್ದು, ಇದರ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ನೆರವಾಗಲಿದೆ” ಎಂದು ಟ್ವೀಟಿಸಿದ್ದಾರೆ.

ಬಾಂಬ್ ಸ್ಫೋಟದ ಹಿಂದೆ ಅಂತರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು NIA ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.