Home Interesting ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ | ಜೀವನಪರ್ಯಂತ ನೀನೇ ನನ್ನ ಹೆಂಡತಿ ಎಂದ ಪ್ರಿಯಕರ...

ಗೆಳತಿಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ | ಜೀವನಪರ್ಯಂತ ನೀನೇ ನನ್ನ ಹೆಂಡತಿ ಎಂದ ಪ್ರಿಯಕರ | ಇದೇ ನಿಜವಾದ ಪ್ರೀತಿ ಅಲ್ಲವೇ?

Hindu neighbor gifts plot of land

Hindu neighbour gifts land to Muslim journalist

ಯಾರಿಗೇ ಆದರೂ ನಿಜವಾದ ಪ್ರೀತಿ ದೊರೆಯುವುದು ಕಡಿಮೇನೇ ಅಂತಾ ಹೇಳಬಹುದು. ಆದರೆ ಯಾವುದೇ ವ್ಯಕ್ತಿಗೆ ಜೀವನದಲ್ಲಿ ನಿಜವಾದ ಪ್ರೀತಿ ಏನಾದರೂ ಸಿಕ್ಕರೆ ನಿಜಕ್ಕೂ ಅವರೇ ಅದೃಷ್ಟವಂತರು ಬಿಡಿ. ಏಕೆಂದರೆ ಪ್ರೀತಿಯ ಮೋಹ ಅಂತಹುದು. ಒಂದೊತ್ತಿನ ಗಂಜಿ ಕುಡಿದು ಬದುಕುವ ಶಕ್ತಿಯನ್ನು ಕೂಡಾ ನೀಡುತ್ತೇ ಈ ಪ್ರೀತಿ, ಹಾಗೆನೇ ಯಾವುದೇ ಕಷ್ಟ ಬಂದರೂ ಎದುರು ನಿಲ್ಲೋ, ಸಾಧಿಸಿ ತೋರಿಸೋ ಛಲ ಎಲ್ಲವನ್ನೂ ನೀಡುತ್ತೇ ಈ ಪ್ರೀತಿ. ಅಂತಹುದೇ ಒಂದು ಪ್ರೀತಿಯ ಅಮೂಲ್ಯ ಕಥೆ ಒಂದು ಘಟನೆಯ ಬಗ್ಗೆ ನಾವು ಇಂದು ನಿಮಗಿಲ್ಲಿ ಹೇಳಲೊರಟಿದ್ದೇವೆ. ಅದೇನೆಂದರೆ ಇಲ್ಲಿ ಪ್ರಿಯಕರ ತನ್ನ ಪ್ರೇಯಸಿ ನಿಧನದ ನಂತರ ಆಕೆಯನ್ನೇ ಮದುವೆಯಾಗಿ ನೀನೇ ನನ್ನ ಹೆಂಡತಿ ಜೀವನಪರ್ಯಂತ ಎಂದು ಹೇಳಿದ್ದಾನೆ. ಹೌದು ಮೈ ರೋಮಾಂಚನ ಗೊಳ್ಳುತ್ತದೆ ಅಲ್ಲವೇ. ಬನ್ನಿ ಈ ಘಟನೆ ಏನೆಂದು ಸವಿವರವಾಗಿ ತಿಳಿಯೋಣ.

ತನ್ನ ಬಹುಕಾಲದ ಗೆಳತಿ ಅನಾರೋಗ್ಯದಿಂದ ಮೃತಪಟ್ಟ ನಂತರ ಪ್ರೇಮಿಯೊಬ್ಬ ಮೃತದೇಹಕ್ಕೆ ತಾಳಿ ಕಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಂತ್ಯಸಂಸ್ಕಾರದ ವೇಳೆ ತನ್ನ ಗೆಳತಿಯ ಮೃತದೇಹಕ್ಕೆ ತಾಳಿಕಟ್ಟಿ ಆಕೆಯ ಕೊನೆಯ ಆಸೆ ನೆರವೇರಿಸಿದ್ದಾನೆ. ಅಸ್ಸಾಂ ಗುವಾಹಟಿಯಲ್ಲಿ ಈ ಮನಕಲುಕುವ ಘಟನೆ ನಡೆದಿದೆ. ಮದುವೆ ಬಳಿಕ ಮತ್ತೆ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಆಣೆ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಲ್ಲಿನ ಮೊಯಿರ್‌ಗಾಂವ್ ನಿವಾಸಿ ಬಿಟುಪಾನ್ ತಮುಲಿ ಮತ್ತು ಕೊಸುವಾ ಗ್ರಾಮ ನಿವಾಸಿ ಪ್ರಾರ್ಥನಾ ಬೋರಾ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎಷ್ಟೆಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು. ಅಷ್ಟು ಮಾತ್ರವಲ್ಲ ಈ ಬಗ್ಗೆ ಅವರ ಕುಟುಂಬದವರಿಗೂ ಈ ವಿಷಯ ತಿಳಿದಿತ್ತು. ಹಾಗಾಗಿ ಮದುವೆಗೂ ಒಪ್ಪಿಗೆ ದೊರಕಿತ್ತು. ಆದರೆ ಒಂದು ದಿನ ಪ್ರಾರ್ಥನಾ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಖಾಸಗಿ ಆಸ್ಪತ್ರೆಯಲ್ಲಿ ಆಕೆಯನ್ನು ಅಡ್ಮಿಟ್‌ ಮಾಡಲಾಗುತ್ತೆ. ಆದರೆ ಬದುಕಿಸಲು ಎಷ್ಟೇ ಪ್ರಯತ್ನಿಸಿದರೂ ಆಕೆಯ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಇತ್ತ ಕಡೆ ಗೆಳತಿಯ ಸಾವಿನ ಸುದ್ದಿ ತಿಳಿದ ಬಿಟುಪಾನ್‌ ಮಾತ್ರ ಚೂರು ಚೂರಾಗಿ ಹೋಗುತ್ತಾನೆ. ದುಃಖ ತಡೆಯಲಾರದೆ ಮದುವೆಯ ಸಾಮಾಗ್ರಿಗಳೊಂದಿಗೆನೇ ಮೃತ ಗೆಳತಿಯ ಅಂತ್ಯಸಂಸ್ಕಾರಕ್ಕೆ ಬಂದು ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ನಂತರ ಆಕೆಯ ಹಣೆಗೆ ಸಿಂಧೂರ ಇಡುತ್ತಾನೆ.

ಇದನ್ನೆಲ್ಲಾ ನೋಡಿದಾಗ ಈತನಿಗೆ ಆಕೆಯ ಮೇಲೆ ಆತನ ಪ್ರೀತಿ ಎಷ್ಟೊಂದು ಅಚಲ, ನಿರ್ಮಲವೆಂದು ನಿಮಗನಿಸುತ್ತಿಲ್ಲವೇ. ಇಂತಹ ಪ್ರೀತಿ ಎಲ್ಲರಿಗೂ ಸಿಗಲಿ.