ಮಂಗಳೂರು : ರಿಕ್ಷಾದಲ್ಲಿ ನಿಗೂಢ ಸ್ಫೋಟ | ಸ್ಥಳಕ್ಕೆ ಪೊಲೀಸರ ದೌಡು, ಜನರಲ್ಲಿ ಆತಂಕ

Share the Article

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಹಠಾತ್ ಸ್ಫೋಟವೊಂದು ನಡೆದಿದ್ದು, ಅದೃಷ್ಟವಶಾತ್ ಆಟೋದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಾಗುರಿಯಲ್ಲಿ ನಡೆದಿದೆ.

ಮಂಗಳೂರಿನ ನಾಗುರಿಯಲ್ಲಿ ಸಂಜೆ 5.30 ರ ಸುಮಾರಿಗೆ ಆಟೋದಲ್ಲಿ ಸ್ಫೋಟ ಉಂಟಾಗಿದ್ದು, ಪ್ರಯಾಣಿಕ ಮತ್ತು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ನಡೆದ ವಿಷಯ ತಿಳಿದ ಕೂಡಲೇ, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಲಿದ್ದಾರೆ.

ಆಟೋದಲ್ಲಿ ಕುಕ್ಕರ್ ಕಂಡು ಬಂದಿದೆ. ತನಿಖೆ ನಂತರ ನಿಗೂಢ ಸ್ಫೋಟದ ಹಿಂದಿನ ರಹಸ್ಯವೇನೆಂಬುದು ಗೊತ್ತಾಗಲಿದೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply