World’s expensive Tea | ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ !
ಒಂದು ಕಪ್ ಬೆಚ್ಚಗಿನ ಹಬೆಯಾಡುವ ಚಹಾಕ್ಕೆ ಹತ್ತರಿಂದ ಹದಿನೈದು ರೂಪಾಯಿ ವೆಚ್ಚ ಇರೋದು ಸಾಮಾನ್ಯ. ಛೋಟಾ ಛಾ ಕೇಳಿದ್ರೆ, ಬಾಯಿ ಒದ್ದೆ ಆಗುವಷ್ಟು ಮಾತ್ರ, ಸಣ್ಣ ಕಪ್ ನಲ್ಲಿ, ಕೇವಲ ಐದಾರು ರೂಪಾಯಿಗಳಲ್ಲಿ ಕೂಡಾ ಚಾಯ್ ಈಗ ಲಭ್ಯ.
ಅದೇ ಐಷಾರಾಮಿ ಹೋಟೆಲುಗಳಲ್ಲಿ ಹೆಚ್ಚೆಂದರೆ 100 ರೂಪಾಯಿವರೆಗೂ 5 ಸ್ಟಾರ್ ಹೋಟೆಲ್ ನಲ್ಲಿಯಾದರೆ, ಸಾವಿರಾರೂ ರೂಪಾಯಿ ಇದ್ರೂ ಇದ್ದೀತು. ಆದ್ರೆ ನೀವೆಲ್ಲಾದರೂ ಕೋಟಿ ಮೊತ್ತದ ಚಹಾದ ಬಗ್ಗೆ ಕೇಳಿದ್ದೀರ ? ‘ ಇಲ್ಲ ‘ ಅಂತ ನಿಮ್ಮ ಉತ್ತರ ಬರಬಹುದು ಅಂದ್ಕೊಂಡು ಈ ಪೋಸ್ಟ್ ಬರೆಯಲಾಗಿದೆ.
ಹೌದು ಒಂದು ಚಹಾ ಬೆಲೆ9 ಕೋಟಿ ರೂಪಾಯಿ ! ಈಗ ನಾವು ಹೇಳಲು ಹೊರಟಿರುವುದು ವಿಶ್ವದ ಅತ್ಯಂತ ದುಬಾರಿ ಚಹಾ ಎಂದೇ ಖ್ಯಾತಿ ಗಳಿಸಿರುವ ಡ- ಹಾಂಗ್ ಪಾವೊ ಟಿ ಬಗ್ಗೆ.
(da-hong pao tea) ಇದು ವಿಶ್ವದ ಅತ್ಯಂತ ದುಬಾರಿ ಚಹಾ ಆಗಿದ್ದು, ಇದರ ಎಲೆ ಚೀನಾದಲ್ಲಿ ಮಾತ್ರ ಕಂಡುಬರುತ್ತದೆ.
ಇದು ಅತ್ಯಂತ ದುಬಾರಿ ಆಗಿದ್ದು, da-hong pao tea ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ಕುಡಿಯುವುದರಿಂದ ಗಂಭೀರ ಕಾಯಿಲೆಗಳೂ ಗುಣವಾಗುತ್ತವೆ ಎನ್ನಲಾಗುತ್ತಿದೆ.
ಈ ಚಹಾಕ್ಕೆ ನೀಡುವ ಬೆಲೆಯಲ್ಲಿ ನೀವು ಹಲವು ಐಷಾರಾಮಿ ವಾಹನಗಳನ್ನು, ಫ್ಲಾಟ್‌ಗಳನ್ನೇ ಖರೀದಿಸಬಹುದು. ಹುಡುಕಿದರೆ ಒಂದು ಒಳ್ಳೆಯ ರೆಸಾರ್ಟ್ ಕೂಡಾ ಸಿಗಬಹುದು ಈ ದುಡ್ಡಲ್ಲಿ.
ವಿಶೇಷ ಕಾರಣಕ್ಕಾಗಿ ಈ ಚಹಾ ಎಲೆ ತುಂಬಾ ದುಬಾರಿಯಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಚಹಾ ಎಲೆ
ವಿಶ್ವದ ಅತ್ಯಂತ ದುಬಾರಿ ಚಹಾ ಎಲೆ ಚೀನಾದಲ್ಲಿ ಕಂಡುಬರುತ್ತವೆ. ಇದರ ಹೆಸರು ಡ-ಹಾಂಗ್ ಪಾವೊ ಟೀ. ಈ ಚಹಾ ಎಲೆಯು ಚೀನಾದ ಫುಜಿಯಾನ್‌ನ ವುಯಿಸನ್ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಬಿಟ್ಟರೆ ಈ ಟೀ ಲೀಫ್ ಬೇರೆಲ್ಲೂ ಸಿಗುವುದಿಲ್ಲ. ಚೀನಾದಲ್ಲಿ (chIna) ಕೇವಲ 6 ಸಸ್ಯಗಳನ್ನು ಮಾತ್ರ ಹೊಂದಿದೆ.
ಬರೋಬ್ಬರಿ 9 ಕೋಟಿ ರೂಪಾಯಿಯನ್ನು ನೀಡಿದ್ರೆ ಕೇವಲ ಒಂದು ಕಿಲೋಗ್ರಾಂ ಪಡೆಯುತ್ತೀರಿ. ಇದರಿಂದಾಗಿ ಅದರ ಮೌಲ್ಯ ಕೋಟಿಗಳಲ್ಲಿದೆ. ಕೆಲವೆಡೆ ಈ ಎಲೆಯ 10 ಗ್ರಾಂ ಗೆ 10 ರಿಂದ 20 ಲಕ್ಷ ರೂಪಾಯಿಗೂ ಲಭ್ಯವಿದೆ.
ಅಲ್ಲದೆ, ಈ ಚಹಾ ಎಲೆಯು ವರ್ಷವಿಡೀ ಬಹಳ ಕಡಿಮೆ ಪ್ರಮಾಣದಲ್ಲಿ ಲಭ್ಯವಿದೆ. ಡಾ-ಹಾಂಗ್ ಪಾವೊ ಚಹಾದ ಎಲೆಗಳು ತುಂಬಾ ಚಿಕ್ಕದಾಗಿದೆ. ಇದರ ಎಲೆಗಳನ್ನು ಒಂದು ನಿರ್ದಿಷ್ಟ ಮರದಿಂದ ಮಾತ್ರ ತೆಗೆಯಲಾಗುತ್ತದೆ. ಇದನ್ನು ಸಾಮಾನ್ಯ ಚಹಾ ಎಲೆಗಳಂತೆ ಬೆಳೆಸಲಾಗುವುದಿಲ್ಲ.
ಚೀನಾ ತನ್ನ ಎಲೆಗಳನ್ನು ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭವನ್ನು ಗಳಿಸುತ್ತಾರೆ. ಈ ಚಹಾ ಸೇವಿಸುವುದರಿಂದ ಗಂಭೀರವಾದ ಕಾಯಿಲೆಗಳಿಂದ ಗುಣಮುಖರಾಗಬಹುದು ಎನ್ನಲಾಗಿದೆ.