ಯೋಗಿ ನಾಡಲ್ಲಿ ಲವ್ ಜಿಹಾದ್ ಆಂಡ್ ಮರ್ಡರ್ | ಮೊಹಮ್ಮದ್ ಸೂಫಿಯಾನ್ ಮೇಲೆ ಎನ್ ಕೌಂಟರ್!

ಯೋಗಿ ಆದಿತ್ಯನಾಥ್ ಆಡಳಿತದ ನಾಡಲ್ಲಿ ಬಂದೂಕು ಮೊಳಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ 17 ವರ್ಷದ ಹಿಂದೂ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರ ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಕೊಂದು ಹಾಕಿದ ಘಟನೆಯ ಹಿನ್ನೆಲೆ ಆರೋಪಿ ಮೊಹಮ್ಮದ್ ಸೂಫಿಯಾನ್ ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ.

ಮೊಹಮ್ಮದ್ ಸುಫಿಯಾನ್ ಎಂಬಾತ ನಿಧಿ ಗುಪ್ತಾಳನ್ನು ಮದುವೆಗಾಗಿ ಮತಾಂತರಗೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ, ಆಕೆ ನಿರಾಕರಿಸಿದ ಕಾರಣ ಸಾವಿನ ಬಾಗಿಲಿಗೆ ನೂಕಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಕೆಯ ಸಾವಿನ ನಂತರ ತಲೆಮರೆಸಿಕೊಂಡಿದ್ದ ಸುಫಿಯಾನ್, ಎನ್‌ಕೌಂಟರ್ ವೇಳೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಪೊಲೀಸರು ಆತನಿಗೊಂದು ಬದುಕಲು ಅವಕಾಶ ಕೊಟ್ಟಿದ್ದಾರೆ: ಅದರಿಂದಾಗಿ, ಹಕಾಲಿಗೆ ಗುಂಡು ಹಾಕಿದ್ದಾರೆ. ಆತ ಬದುಕುಳಿದು ಈಗ ಆಸ್ಪತ್ರೆ ಸೇರಿದ್ದಾನೆ.

ಇದೀಗ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಒಂಬತ್ತು ಮಂದಿಯ ವಿಶೇಷ ತಂಡವನ್ನು ರಚಿಸಿದ್ದರು ಮತ್ತು ಸುಫಿಯಾನ್ ಬಗ್ಗೆ ಮಾಹಿತಿ ನೀಡಿದವರಿಗೆ ವಿಶೇಷ ಆಫರ್ ನೀಡಿದ್ದು, ಬರೋಬ್ಬರಿ 25,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದರು. ಸುಫಿಯಾನ್ ವಿರುದ್ಧ ಕೊಲೆ ಆರೋಪ ಮಾತ್ರವಲ್ಲದೆ ‘ಕಾನೂನುಬಾಹಿರ ಧಾರ್ಮಿಕ ಮತಾಂತರ’ ಪ್ರಕರಣವನ್ನೂ ದಾಖಲಿಸಲಾಗಿದೆ.

ಜಂಟಿ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ, ಪಿಯೂಷ್ ಮೊರ್ಡಿಯಾ ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದು, ಸೂಫಿಯಾನ್ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದು, ಇವರಿಬ್ಬರು ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದರು. ಈತ ಪ್ರೇಯಸಿಗೆ ಮೊಬೈಲ್ ಫೋನ್ ಕೂಡ ಉಡುಗೊರೆಯಾಗಿ ನೀಡಿದ್ದನು.

ಮಂಗಳವಾರ ಹುಡುಗಿಯ ಮನೆಯವರು ಸುಫಿಯಾನ್ ಮನೆಗೆ ಭೇಟಿ ನೀಡಿದಾಗ ಸಂಬಂಧದ ಬಗ್ಗೆ ತಿಳಿದುಬಂದಿದೆ. ನಂತರ ತೀವ್ರ ವಾಗ್ವಾದ ನಡೆದು, ಹುಡುಗಿ ನಾಲ್ಕನೇ ಮಹಡಿಗೆ ಓಡಿಹೋಗಿದ್ದಾಳೆ. ಈ ವೇಳೆ ಸೂಫಿಯಾನ್ ಅವಳನ್ನು ಹಿಂಬಾಲಿಸಿದ್ದಾನೆ. ಸ್ವಲ್ಪ ಸಮಯದ ನಂತರ, ಕುಟುಂಬ ಸದಸ್ಯರಿಗೆ ಕಿರುಚಾಟ ಕೇಳಿದೆ. ನೋಡಿದರೆ ಆಕೆಯನ್ನು ಮಹಡಿಯಿಂದ ನೂಕಿದ್ದ, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ. ಬಾಲಕಿ ಮೃತಪಟ್ಟ ಸುದ್ದಿ ತಿಳಿದ ಸುಫಿಯಾನ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದೀಗ ಪೋಲಿಸರು ಆತನ ಜಾಡು ಹಿಡಿದು ಕೊನೆಗೂ ಎನ್ಕೌಂಟರ್ ಮಾಡಿ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ.

Leave A Reply

Your email address will not be published.