ಮದುವೆ ಮಂಟಪಕ್ಕೆ ಬಂತು ಶವ ಪೆಟ್ಟಿಗೆ | ಅದ್ರಲ್ಲಿ ಇದ್ದಿದ್ದು ಮಾತ್ರ ಆ ದಿನದ ಮೈನ್ ಗೆಸ್ಟ್!

Share the Article

ಮೊದಲೆಲ್ಲ ಮದುವೆ ಅಂದ್ರೆ ಸಂಪ್ರದಾಯ, ಶಾಸ್ತ್ರಗಳಿಂದ ಕೂಡಿದ್ದವು. ಆದ್ರೆ, ಇದೀಗ ಮದುವೆ ಕೂಡ ತಮಾಷೆಯ ಕಾರ್ಯಕ್ರಮವಾಗಿದೆ. ಯಾಕಂದ್ರೆ ಇಲ್ಲಿ ಫುಲ್ ಆಫ್ ಎಂಟರ್ಟೈನ್ಮೆಂಟ್ ಆಗಿರುತ್ತದೆ. ವರ-ವಧುಗಿಂತಲೂ ಅವರ ಸ್ನೇಹಿತರಿಗೆ ಹ್ಯಾಪಿ ಡೇ ಆಗಿರುತ್ತದೆ.

ಹೌದು. ವಿಚಿತ್ರವಾದ ಗಿಫ್ಟ್ ಗಳನ್ನು ನೀಡುವ ಮೂಲಕ ಎಲ್ಲರನ್ನೂ ನಗಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ ಸ್ನೇಹಿತರು ಮಾಡಿದ ಪ್ಲಾನ್ ಏನು ಗೊತ್ತ.. ಅಯ್ಯೋ ಶವ ಪೆಟ್ಟಿಗೆಯನ್ನೇ ಮಂಟಪಕ್ಕೆ ಕರೆ ತಂದಿದ್ದಾರೆ. ಅಷ್ಟಕ್ಕೂ ಆ ಪೆಟ್ಟಿಗೆಲಿ ಇರೋರೇ ಈ ಮದುವೆಯ ಮೈನ್ ಗೆಸ್ಟ್. ಅವರೇ ಮದುಮಗ.

ಅಂದಹಾಗೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಈ ಮದುವೆ ನಡೆದಿದ್ದು, ವರನನ್ನು ಶವಪೆಟ್ಟಿಗೆಯಲ್ಲಿ ತುಂಬಿಸಿ ಕರೆತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ. ಇತ್ತ ಮದ್ವೆ ಮನೆಗೆ ಶವಪೆಟ್ಟಿಗೆ ಆಗಮಿಸುತ್ತಿದ್ದಂತೆ ಮದ್ವೆ ಮನೆಯಲ್ಲಿದ್ದವರೆಲ್ಲ ಗಾಬರಿಯಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವರನೋರ್ವ ಶವಪೆಟ್ಟಿಗೆ ಏರಿ ಮದುವೆ ಮನೆಗೆ ಬರುತ್ತಿದ್ದರೇ, ವಧುವಿನ ಸಹಾಯಕರು ಆತನಿಗೆ ಈ ಮೆರವಣಿಗೆಗೆ ಜೊತೆಯಾಗಿದ್ದಾರೆ. ವರನ ಗೆಳೆಯರು ಶವಪೆಟ್ಟಿಗೆಗೆ ಹೆಗಲು ಕೊಟ್ಟು ಒಳಗಿದ್ದ ಮದುಮಗನನ್ನು ಮದುವೆ ಮನೆಗೆ ಕರೆತಂದಿದ್ದಾರೆ. ಆದರೆ ಈ ವಿಡಿಯೋದಲ್ಲಿ ನಾಲ್ವರು ಹುಡುಗರು ಹಾಗೂ ಇಬ್ಬರು ಹುಡುಗಿಯರು ಕಾರಿನಿಂದ ಶವಪೆಟ್ಟಿಗೆಯನ್ನು ಇಳಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಆದರೆ ಎಲ್ಲೂ ವಧುವಾಗಲಿ ವರನಾಗಲಿ ವಿಡಿಯೋದಲ್ಲಿ ಕಾಣಿಸುತ್ತಿಲ್ಲ.

ಆದರೆ ನೆಟ್ಟಿಗರು ಮಾತ್ರ ಫುಲ್ ಗರಂ ಆಗಿದ್ದು,ಮದುವೆಯ ಸಮಯದಲ್ಲಿ ಶವಪೆಟ್ಟಿಗೆ ತಂದಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅಲ್ಲಿ ಇದೇನು ಶವಸಂಸ್ಕಾರವೆಂದು ನೀವು ಭಾವಿಸಿದ್ದೀರಾ? ಅಲ್ಲ ಇದು ನನ್ನ ಸ್ನೇಹಿತ ಹಸೆಮಣೆಯೇರುವ ಮೊದಲು ಮದುವೆ ಮಂಟಪಕ್ಕೆ ಬರಲು ನಿರ್ಧರಿಸಿದ ರೀತಿ ಎಂದು ವಿಡಿಯೋ ಮೇಲೆ ಸಬ್‌ಟೈಟಲ್ ನೀಡಲಾಗಿದೆ. ಆದರೆ ಅನೇಕರು ಇದೊಂದು ಹುಚ್ಚು ನಿರ್ಧಾರ ಎಂದು ಕಾಮೆಂಟ್ ಮಾಡಿದ್ದಾರೆ.

Leave A Reply