ರೈಲ್ವೇ ಸಿಬ್ಬಂದಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ | ವೇತನ ಏರಿಕೆ!!

ದೀಪಾವಳಿಯ ಬಳಿಕ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಯೋಜನೆಯ ಮೂಲಕ ಸಿಹಿ ಸುದ್ದಿ ನೀಡುತ್ತಿದೆ. ಈ ಬಾರಿ ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ನೀಡಿದೆ.

ಹೌದು!!..ಸುಮಾರು 80,000 ರೈಲ್ವೆ ಇಲಾಖೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರಕಾರ ಶೀಘ್ರವೇ ನೌಕರರ ವೇತನವನ್ನು 2,500 ರೂ.ನಿಂದ 4000 ರೂ.ವರೆಗೆ ಏರಿಕೆ ಮಾಡುವುದಾಗಿ ತಿಳಿಸಿದ್ದು, ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ತ್ರಿಪಾಠಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸುಮಾರು 80 ಸಾವಿರ ರೈಲ್ವೆ ಇಲಾಖೆ ಸಿಬ್ಬಂದಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ಕೊಟ್ಟಿದ್ದು, ಶೀಘ್ರದಲ್ಲೆ ನೌಕರರ ವೇತನವು 2,500 ರಿಂದ 4000 ರೂ.ವರೆಗೆ ಹೆಚ್ಚಳವಾಗಲಿದೆ.
ಈ ಬಗ್ಗೆ ತಿಳಿಸಿರುವ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ತ್ರಿಪಾಠಿಯವರು, ವಿವಿಧ ಸುಧಾರಣೆ ಕ್ರಮಗಳಿಂದ ಇಲಾಖೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗಿರುವುದರಿಂದ ವೇತನ ಏರಿಕೆಯಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.


ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ವರ್ಗ-7ರ ನೌಕರರ (ಸೂಪರ್‌ವೈಸರ್‌ ಗ್ರೇಡ್‌) ವೇತನ ಸ್ತಬ್ಧವಾಗಿರುವುದನ್ನು ಗಮನಿಸಿ, ಶೀಘ್ರವೇ ಅವರಿಗೆಲ್ಲ ಗ್ರೂಪ್‌-ಎ ಅಧಿಕಾರಿಗಳಂತೆ ವೇತನ ಏರಿಸುವ ಪ್ರಸ್ತಾವನೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಕಳೆದ 16 ವರ್ಷಗಳಿಂದ ಈ ಗ್ರೇಡ್‌ನ ನೌಕರರ ಒತ್ತಾಯ ಈಡೇರಿರಲಿಲ್ಲ, ಎಂದು ಕೂಡ ಅವರು ಹೇಳಿದ್ದಾರೆ.

ಸಂಚರಿಸುವ ರೈಲಿಗೆ, ಜಾನುವಾರುಗಳ ಡಿಕ್ಕಿಯಿಂದ ಸಂಭವನೀಯ ರೈಲು ಅಪಘಾತ ತಡೆಯುವ ನಿಟ್ಟಿನಲ್ಲಿ, ಹಳಿಗಳಿಗೆ ಸಮಾನಂತರವಾಗಿ ತಡೆಗೋಡೆ ನಿರ್ಮಾಣ ಮಾಡಲು ರೈಲ್ವೆ ಸಚಿವಾಲಯ ಮುಂದಾಗಿದೆ.

ದೇಶದ ಹಲವೆಡೆ ಜಾನುವಾರುಗಳು ಹಳಿ ದಾಟುವ ಪ್ರಯತ್ನದಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಇತ್ತೀಚಿಗೆ ಇದೇ ಕಾರಣಕ್ಕೆ ವಂದೇ ಭಾರತ್‌ ರೈಲು ನಾಲ್ಕು ಬಾರಿ ಅಪಘಾತಕ್ಕೀಡಾಗಿದೆ.
ಸಂಭವನೀಯ ರೈಲು ಅಪಘಾತ ತಪ್ಪಿಸಲು ಮುಂದಿನ ಐದಾರು ತಿಂಗಳಲ್ಲಿ 1 ಸಾವಿರ ಕಿಲೋ ಮೀಟರ್‌ ಉದ್ದದ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ.


ಕೇಂದ್ರ ರೈಲ್ವೆ ಇಲಾಖೆ ಶೇ. 50 ರಷ್ಟು ಅನುದಾನ ನೀಡುವುದರೊಂದಿಗೆ ಕ್ರಿಯಾ ಯೋಜನೆ ತಯಾರಿಸಿ ರಾಜ್ಯ ಸರಕಾರದ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಕಳೆದ ಅಕ್ಟೋಬರ್‌ 11ರಂದು ಅವಳಿ ನಗರದ ರೈಲ್ವೆ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರಕಾರದ ಅನುದಾನ ಸಿಗುವವರೆಗೆ ಕಾಯದೇ ಟೆಂಡರ್‌ ಕರೆಯುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಲಾದ ಅನ್ವಯ,ನೈರುತ್ಯ ರೈಲ್ವೆ ಕೂಡ ಟೆಂಡರ್‌ ಆಹ್ವಾನಿಸಲಾಗಿದೆ.


ಧಾರವಾಡ ಕವಿವಿ ಎಲ್‌.ಸಿ. ಗೇಟ್‌ ನಂ. 299ರಲ್ಲಿ ಕೆಳಸೇತುವೆಗೆ ಕೇಂದ್ರ ಸರಕಾರ 41.59 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹಳಿಯಾಳ ರಸ್ತೆಯ ಎಲ್‌.ಸಿ. ಗೇಟ್‌ ನಂ. 300ರ ಸೇತುವೆ ನಿರ್ಮಾಣಕ್ಕೆ 41.64 ಕೋಟಿ ವೆಚ್ಚವಾಗುತ್ತಿದ್ದು, ಇದರಲ್ಲಿ 20.57 ಕೋಟಿ ರೂ. ಒದಗಿಸಲಾಗಿದೆ.

ಈ ಮಧ್ಯೆ ರಾಜ್ಯ ಸರಕಾರ ತನ್ನ ಪಾಲಿಕೆ ಶೇ. 50ರಷ್ಟು ಹಣ ನೀಡಲು ಒಪ್ಪಿಗೆ ಸೂಚಿಸಿರುವುದು ಕಾಮಗಾರಿ ತ್ವರಿತವಾಗಲಿದೆ ಜೊತೆಗೆ ಕೆಳಸೇತುವೆ ನಿರ್ಮಾಣದಿಂದ ದಾಂಡೇಲಿ-ಧಾರವಾಡ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ಕೂಡ ಸಚಿವರಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ .

ಕಳೆದ ಒಂದು ವರ್ಷದಲ್ಲಿ ರೈಲು ಡಿಕ್ಕಿಯಿಂದ 2,650 ಜಾನುವಾರುಗಳ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದು,ಇದರ ಜೊತೆಗೆ ಧಾರವಾಡ ನಗರಕ್ಕೆ ಸಂಪರ್ಕ ಕಲ್ಪಿಸುವ ಹಳಿಯಾಳ ರಸ್ತೆಯ ತಪೋವನ ಹತ್ತಿರದ ರೈಲ್ವೆ ಗೇಟ್‌ ನಂ- 300 ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರದ ಪಾಲಿನ ಅರ್ಧದಷ್ಟು ಅನುದಾನ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು ಬಹುದಿನಗಳ ಬೇಡಿಕೆ ಪೂರೈಸಿದಕ್ಕಾಗಿ ಕೇಂದ್ರ ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.