ಶೂಟಿಂಗ್ ಸಂದರ್ಭ ಕುಸಿದು ಬಿದ್ದ ಟಾಲಿವುಡ್ ನಾಯಕ ನಟ ನಾಗಶೌರ್ಯ | ಆಸ್ಪತ್ರೆಗೆ ದಾಖಲು

Share the Article

ಟಾಲಿವುಡ್‌ ನಟ ನಾಗ ಶೌರ್ಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ನಡೆದಿದೆ.

ನಾಗ ಶೌರ್ಯ ಚಲೋ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನಟನಾಗಿ ಉತ್ತಮ ಹೆಸರು ಪಡೆದ ನಟ. ತನ್ನ ನಟನಾ ಕೌಶಲ್ಯದಿಂದ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದ ನಟ ದಿಢೀರನೆ ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಶೂಟಿಂಗ್ ವೇಳೆ ನಾಗಶೌರ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದು, ಹಾಗಾಗಿ ಕೂಡಲೇ ಅವರನ್ನ ಚಿಕಿತ್ಸೆಗಾಗಿ ಗಚಿಬೌಲಿ ಎಐಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟ ನಾಗಶೌರ್ಯ ಆರು ತಿಂಗಳಿನಿಂದ ಸಿಕ್ಸ್ ಪ್ಯಾಕ್ ಡಯಟ್ ಮಾಡುತ್ತಿದ್ದು, ಸರಿಯಾಗಿ ಆಹಾರ ತೆಗೆದುಕೊಳ್ಳದಿರುವುದೇ ಈ ಘಟನೆಗೆ ಕಾರಣವೆನ್ನಲಾಗಿದೆ.

Leave A Reply