Phonepe,GPay,Paytm ಇನ್ಮುಂದೆ ಈ ಭಾಷೆಗಳಲ್ಲಿ ಲಭ್ಯ |

ಈಗಂತೂ ಎಲ್ಲಾ ಕಡೆ ಆನ್ಲೈನ್ ನಲ್ಲೇ ಹಣದ ವ್ಯವಹಾರಗಳನ್ನು ಮುಗಿಸುತ್ತಾರೆ. ಇದಕ್ಕಾಗಿ ಹಲವು ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಕೇವಲ ನಗರಗಳಲ್ಲಿ ಅಲ್ಲದೆ ಹಳ್ಳಿ ಹಳ್ಳಿಗಳಲ್ಲೂ ಆನ್ಲೈನ್ ಅಪ್ಲಿಕೇಶನ್ ಗಳಾದ ಪೋನ್ ಪೇ (PhonePe), ಗೂಗಲ್ ಪೇ (Google Pay) ಹಾಗೂ ಪೇಟಿಯಂ (Paytm ) ಬಳಕೆಯಾಗುತ್ತಿದೆ. ಈ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ಬಳಸಲು ಸುಲಭ ಮತ್ತು ನಗದುರಹಿತ ಪಾವತಿಗಳನ್ನು ಮಾಡಲು ಸಹಾಯಕವಾಗಿವೆ.

ಇಷ್ಟು ದಿನ ಕೇವಲ ಇಂಗ್ಲೀಷ್ ಭಾಷೆಯ ಬಳಕೆಗೆ ಅವಕಾಶವಿತ್ತು. ಇನ್ನೂ ಮುಂದೆ ನಮ್ಮದೇ ಭಾಷೆಯಲ್ಲಿ ಈ ಅಪ್ಲಿಕೇಶನ್‌ ಗಳನ್ನು ಬಳಸಬಹುದಾಗಿದೆ. ಹಿಂದಿ, ಬಾಂಗ್ಲಾ ತೆಲುಗು, ಗುಜರಾತಿ, ಮರಾಠಿ ಮತ್ತು ಇತರ ಹಲವು ಸ್ಥಳೀಯ ಭಾಷೆಗಳಲ್ಲಿ ಗೂಗಲ್ ಪೇ, ಪೇಟಿಎಂ ಮತ್ತು ಫೋನ್‌ಪೇ ಬಳಸಬಹುದು. ಹಾಗಾದ್ರೆ ಈ ಅಪ್ಲಿಕೇಶನ್ ಗಳಲ್ಲಿ ಭಾಷೆಯನ್ನು ಬದಲಾಯಿಸುವುದು ಅನ್ನೋ ಕಂಪ್ಲಿಟ್ ಮಾಹಿತಿ ಇಲ್ಲಿದೆ.

Google Pay ನಲ್ಲಿ ಭಾಷೆ ಬದಲಾಯಿಸುವುದು ಹೇಗೆ?
ನಿಮ್ಮ ಫೋನ್‌ನಲ್ಲಿ Google Pay ಯನ್ನು ತೆರೆಯಿರಿ. ನಂತರ ಪರದೆಯ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ Google ಖಾತೆ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಪ್ರೊಫೈಲ್‌ಗೆ ಹೋಗಿ. ಅಲ್ಲಿ ಸೆಟ್ಟಿಂಗ್‌ಗಳ ಟ್ಯಾಬ್‌ಗೆ ಹೋಗಿ, ವೈಯಕ್ತಿಕ ಮಾಹಿತಿ ಆಯ್ಕೆಯನ್ನು ಟ್ಯಾಪ್ ಮಾಡಿ. ಅದರಲ್ಲಿ ಭಾಷೆ ಆಯ್ಕೆಯ ಪಕ್ಕದಲ್ಲಿ ರುವ ಬದಲಾವಣೆ ಬಟನ್ ಮೇಲೆ ಟ್ಯಾಪ್ ಮಾಡಿ. ನೀವು ಅಪ್ಲಿಕೇಶನ್ ಅನ್ನು ಬಳಸಲು ಬಯಸುವ ಭಾಷೆಯನ್ನು ಆಯ್ಕೆಮಾಡಿ.

paytm ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ. ಪರದೆಯ ಮೇಲಿನ ಎಡ ಮೂಲೆಯಿಂದ ಪ್ರೊಫೈಲ್‌ಗೆ ಹೋಗಿ. ಕೆಳಗೆ ಸ್ಕ್ರಾಲ್ ಮಾಡುತ್ತಾ ಬನ್ನಿ, ಅಲ್ಲಿ ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್‌ಗೆ ಹೋಗಿ. ಚೇಂಜ್ ಲಾಂಗ್ವೇಜ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ನಿಮ್ಮ ಆಯ್ಕೆಯ ಭಾಷೆಯನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಬಟನ್ ಒತ್ತಿರಿ.

phonepe ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?
ಸ್ಮಾರ್ಟ್‌ಫೋನ್‌ನಲ್ಲಿ ಫೋನ್‌ ಪೇ ಅಪ್ಲಿಕೇಶನ್ ತೆರೆಯಿರಿ. ಎಡ ಫಲಕದಿಂದ PhonePe ಪ್ರೊಫೈಲ್‌ಗೆ ಹೋಗಿ. ಸೆಟ್ಟಿಂಗ್‌ಗಳು ಮತ್ತು ಪ್ರಾಶಸ್ತ್ರಗಳ ಟ್ಯಾಬ್‌ಗೆ ಕೆಳಗೆ ಸ್ಕ್ರಾಲ್ ಮಾಡಿದಾಗ, ಅಲ್ಲಿ ಭಾಷಾ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಬಟನ್ ಒತ್ತಿರಿ.

Leave A Reply

Your email address will not be published.