ಶಾರುಖ್‌ ಖಾನ್‌ಗೆ ಬೆವರಿಳಿಸಿದ ಮುಂಬೈ ಏರ್‌ಪೋರ್ಟ್‌!

Share the Article

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸದ್ಯಕ್ಕೆ ಸ್ವಲ್ಪ ಕೂಲ್ ಆಗಿದ್ದಾರೆ. ಹಿಟ್ ಸಿನಿಮಾಗಳ ಮೇಲೊಂದು ಕೊಡ್ತಾ ಈಗ ಆರಾಮ್ ಇದ್ದಾರೆ. ಇದರ ನಡುವೆ ಒಂದು ಘಟನೆಯು ಆಗಿ ಹೋಯ್ತು.

ವಿಮಾನ ಇಲಾಖೆಯಲ್ಲಿ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ಘಟನೆಯು ನಡೆದಿದೆ. ಇದಕ್ಕೆ ಕಾರಣ ಅವರ ದುಬಾರಿ ವಾಚ್.

ಎಸ್, ಸೂಪರ್ ಸ್ಟಾರ್ ಕಸ್ಟಮ್ ಡ್ಯೂಟಿಯಲ್ಲಿ 6.83 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾದ ಸಂದರ್ಭ ಬಂತು. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಾಲ್ಗೊಂಡಿದ್ದ ನಟ ಶಾರ್ಜಾದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಮುಂಬೈನಲ್ಲಿ ಅಧಿಕಾರಿಗಳು ತಡೆದಿದ್ದಾರೆ.

ಮಾಹಿತಿಯ ಪ್ರಕಾರ ಶಾರುಖ್ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅವರು ಖಾಸಗಿ ಜೆಟ್ನಲ್ಲಿ ಪ್ರಯಾಣಿಸುತ್ತಿದ್ದರು. ಎಸ್ಆರ್ಕೆ ಮತ್ತು ಅವರ ಪರಿವಾರದವರು ಟರ್ಮಿನಲ್ನಿಂದ ನಿರ್ಗಮಿಸುವಾಗ ಬ್ಯಾಗ್ಗಳಲ್ಲಿ ದುಬಾರಿ ವಾಚ್ಗಳು ಸಿಕ್ಕಿವೆ.

ಶಾರುಖ್ ಖಾನ್ ಹಲವಾರು ದಶಕಗಳಿಂದ ವಾಚ್ ಕಲೆಕ್ಟರ್ ಆಗಿದ್ದಾರೆ. ಅವರ ಸಂಗ್ರಹದಲ್ಲಿ ಪಾಟೆಕ್ ಫಿಲಿಪ್ ಅಕ್ವಾನಾಟ್, ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ಮತ್ತು TAG ಹ್ಯೂಯರ್ ಮೊನಾಕೊ ಸಿಕ್ಸ್ಟಿ ನೈನ್, ಇತರ ವಾಚ್‌ಗಳು ಇತ್ತು ಅಂತೆ. ಇದರ ಜೊತೆಗೆ ಅವರ ಬಾಡಿ ಗಾರ್ಡ್ ಹಾಗೂ ಅವರ ತಂಡದ ಇತರ ಕೆಲವು ಸದಸ್ಯರನ್ನು ವಿಚಾರಣೆ ಮಾಡಲಾಯಿತು.

ಅದೆಂತಾ ಹೀರೋ ಅಥವಾ ಹೀರೋಯಿನ್ ಆದ್ರೂ ರೂಲ್ಸ್ ಅಂದಮೇಲೆ ರೂಲ್ಸ್ ಅಲ್ವಾ? ನೀವೇನು ಹೇಳ್ತೀರಾ?

Leave A Reply