Home latest ಜಿಯೋ ಧಮಾಕಾ | ಈ ಯೋಜನೆಯಲ್ಲಿ ಸಿಗಲಿದೆ ಹೈ ಸ್ಪೀಡ್ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆ

ಜಿಯೋ ಧಮಾಕಾ | ಈ ಯೋಜನೆಯಲ್ಲಿ ಸಿಗಲಿದೆ ಹೈ ಸ್ಪೀಡ್ ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆ

Hindu neighbor gifts plot of land

Hindu neighbour gifts land to Muslim journalist

ಜಿಯೋ ತನ್ನ ಗ್ರಾಹಕರಿಗೆ ಒತ್ತಮವಾದ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಎಲ್ಲಾ ಭಾರತೀಯ ಟೆಲಿಕಾಂ ಕಂಪನಿಗಳನ್ನು ಹಿಂದಿಕ್ಕಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ನೆಟ್ವರ್ಕ್ ನೊಂದಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಧಮಾಕಾ ಆಫರ್ ರೀಚಾರ್ಜ್ನಲ್ಲಿ, ಉಚಿತ OTT ಚಂದಾದಾರಿಕೆಯನ್ನು ನೀಡುತ್ತಿದೆ.

ಹೌದು. ರಿಲಯನ್ಸ್ ಜಿಯೋ ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳ ಮೇಲೆ ಉಚಿತ OTT ಚಂದಾದಾರಿಕೆಯನ್ನು ನೀಡುತ್ತಿದೆ. ಆ ಯೋಜನೆಗಳನ್ನು ಪರಿಷ್ಕರಿಸಲಾಗಿದ್ದು, ಇನ್ನೂ ಎರಡು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಉಚಿತ OTT ಚಂದಾದಾರಿಕೆಯನ್ನು ನೀಡುತ್ತದೆ. ಹಾಗಿದ್ರೆ ಬನ್ನಿ ಆ ಯೋಜನೆಗಳ ಕುರಿತು ತಿಳಿದುಕೊಳ್ಳೋಣ..

ಜಿಯೋ ರೂ.1,499 ರೀಚಾರ್ಜ್ ಪ್ಲಾನ್ ಖಂಡಿತವಾಗಿಯೂ ಜಿಯೋ ನೀಡುವ ಯೋಜನೆಗಳಲ್ಲಿ ಅತ್ಯುತ್ತಮ ಯೋಜನೆ ಎಂದು ಹೇಳಬಹುದು. ಏಕೆಂದರೆ ಈ ಯೋಜನೆಯು ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಯನ್ನು ನೀಡುತ್ತದೆ. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು ಸಂಪೂರ್ಣ ಮಾನ್ಯತೆಯ ಅವಧಿಗೆ ದಿನಕ್ಕೆ 2GB ಹೈ ಸ್ಪೀಡ್ ಡೇಟಾ ದರದಲ್ಲಿ ನಿಮಗೆ ಒಟ್ಟು 168GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಪ್ರತಿದಿನ 100 ಎಸ್ಎಂಎಸ್ಗಳನ್ನು ನೀಡುತ್ತದೆ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ.

ಅಷ್ಟೇ ಅಲ್ಲದೆ, ಈ ಯೋಜನೆಯೊಂದಿಗೆ ನೀವು ರೂ.1,499 ರೀಚಾರ್ಜ್ ಮೌಲ್ಯದ ಡಿಸ್ನಿ+ ಹಾಟ್ಸ್ಟಾರ್ನ ಒಂದು ವರ್ಷದ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತೀರಿ. ಅಂದರೆ ನಿಮಗೆ 85 ದಿನಗಳ ಜಿಯೋ ರೀಚಾರ್ಜ್ ಪ್ರಯೋಜನಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಈಗಾಗಲೇ Disney+ Hotstar ಪ್ರೀಮಿಯಂ ಚಂದಾದಾರಿಕೆಯನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ.

ಜಿಯೋ ರೂ.4,199 ಯೋಜನೆಯು ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆಯನ್ನು ನೀಡುತ್ತದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು ಸಂಪೂರ್ಣ ಮಾನ್ಯತೆಯ ಅವಧಿಗೆ ದಿನಕ್ಕೆ 3GB ಹೈ ಸ್ಪೀಡ್ ಡೇಟಾ ದರದಲ್ಲಿ ಒಟ್ಟು 1095GB ಹೈ ಸ್ಪೀಡ್ ಡೇಟಾವನ್ನು ತರುತ್ತದೆ. ಈ ಯೋಜನೆಯು ಪ್ರತಿದಿನ 100 ಎಸ್ಎಂಎಸ್ಗಳನ್ನು ನೀಡುತ್ತದೆ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ. ಹೆಚ್ಚುವರಿಯಾಗಿ ಗ್ರಾಹಕರು ರೂ.1,499 ಮೌಲ್ಯದ ಡಿಸ್ನಿ+ ಹಾಟ್ಸ್ಟಾರ್ನ ಉಚಿತ ಒಂದು ವರ್ಷದ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.