ಅಕ್ಕನ ಮೊಬೈಲ್ ಗೆ ಪಾಸ್ ವರ್ಡ್ ಇಟ್ಟ ತಮ್ಮ | ತಾರಕಕ್ಕೇರಿದ ಜಗಳ, ನಂತರ…

ಸಹೋದರ ಸಹೋದರಿಯರಿಗೆ ಪರಸ್ಪರ ಜಗಳ ಕಿತ್ತಾಟಗಳು ನಡೆಯುವುದು ಸಹಜ ಆದುದು. ಒಡಹುಟ್ಟಿದವರ ಜಗಳಗಳು ಕ್ಷಣಿಕ ಮಾತ್ರ ಆಗಿರುತ್ತದೆ. ಆದರೆ ಇಲ್ಲಿ ಇಬ್ಬರು ಒಡಹುಟ್ಟಿದವರು ಕೇವಲ ಮೊಬೈಲ್ ಪಾಸ್ವರ್ಡ್ ವಿಚಾರದಲ್ಲಿ ಜಗಳ ಮಾಡಿಕೊಂಡು ಒಂದು ಜೀವವೇ ಬಲಿಯಾಗಿದೆ.

 

ಕಾರಣ ಸಣ್ಣದಾಗಿ ಇದ್ದರೂ ಈಗಿನ ಮಕ್ಕಳಿಗೆ ಕಷ್ಟ ನೋವು, ಭಾವನೆ, ತಾಳ್ಮೆ, ಇವುಗಳ ಯಾವುದೇ ಅರಿವು ಇರುವುದಿಲ್ಲ ಈ ಕಾರಣದಿಂದ ಇಂದಿನ ಯುವ ಪೀಳಿಗೆ ಮಕ್ಕಳು ಯಾವ ರೀತಿ ಯಾವ ಕಾರಣಕ್ಕೆ ಯಾವ ನಿರ್ಧಾರ ಮಾಡಬಲ್ಲರು ಅನ್ನೋದನ್ನು ನಮಗೆ ಊಹಿಸಲು ಸಹ ಸಾಧ್ಯ ಇಲ್ಲದ ಪರಿಸ್ಥಿತಿ ಆಗಿದೆ.

ಪಿಯುಸಿ ಓದುತ್ತಿದ್ದ19 ವರ್ಷ ದ ರುಚಿತಾ ಎಂಬುವರು ಮನೆಯಲ್ಲಿ ಅತಿ ಹೆಚ್ಚು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರಂತೆ. ಮೊಬೈಲ್ ಬಳಕೆಯಿಂದ ದೂರ ಮಾಡುವ ಉದ್ದೇಶದಿಂದ ಅವರ ಸಹೋದರ ಪಾಸ್‌ವರ್ಡ್ ಸೆಟ್ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಬಳಿಕ ಘಟನೆಯಿಂದ ಬೇಸತ್ತ ಯುವತಿ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ ಈ ಘಟನೆ ನಡೆದಿದ್ದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave A Reply

Your email address will not be published.