7th Pay Commission : ಸರಕಾರದಿಂದ 7 ನೇ ವೇತನ ಆಯೋಗ ರಚನೆಯ ನಂತರ ಸರಕಾರಿ ನೌಕರರ ನಿರೀಕ್ಷೆ ಏನಿದೆ?
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದೆ. ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ತುಟ್ಟಿ ಭತ್ಯೆ ಅಥವಾ ಡಿಎ (DA) ಅನ್ನು ಸರ್ಕಾರಿ ನೌಕರರಿಗೆ ನೀಡಿ ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ (Pensioners) ನೀಡಲಾಗುತ್ತದೆ .
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಸುಧಾರಣೆಗಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಇದರ ಬೆನ್ನಲ್ಲೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ್‌ರಾವ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸುವಂತೆ ಸಂಘವು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರ ನೀಡುವಾಗ ಕಾರ್ಯಕ್ರಮದ ವೇದಿಕೆಯಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಅಧಿಕಾರಿಯನ್ನು ನೇಮಿಸಿದ್ದಾರೆ.
ವೇತನ ಆಯೋಗದಿಂದ ನಿರೀಕ್ಷೆಗಳನ್ನು ಗಮನಿಸುವುದಾದರೆ:
ಹಾಲಿ ಇರುವ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿದ ನಂತರ ನಿಗದಿಯಾಗುವ ಮೂಲ ವೇತನಕ್ಕೆ ಶೇ. 40 ಫಿಟ್‌ಮೆಂಟ್ ಸೌಲಭ್ಯವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ದಿನಾಂಕ 01/07/2022 ರಿಂದ ಕಾಲ್ಪನಿಕವಾಗಿ ವೇತನ ಸೌಲಭ್ಯಗಳನ್ನು ಹಾಗೂ ದಿನಾಂಕ 01/01/2023 ರಿಂದ ಆರ್ಥಿಕ ಸೌಲಭ್ಯವನ್ನು ಪಡೆಯುವ ಜೊತೆಗೆ ಕೇಂದ್ರ ಸರ್ಕಾರಿ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆಗಳ ಪರಿಷ್ಕರಣೆ ಮಾಡಬಹುದು ಎಂಬ ನಿರೀಕ್ಷೆಯಿದೆ.
ಆರ್ಥಿಕ ಸೌಲಭ್ಯಗಳ ನಿರೀಕ್ಷೆಗಳನ್ನು ಗಮನಿಸುವುದಾದರೆ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ರಚನೆ ಸಂಬಂಧ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಆರ್ಥಿಕ ಸೌಲಭ್ಯಗಳ ನಿರೀಕ್ಷೆಗಳನ್ನು ಸಹ ಹೇಳಿದೆ.
ಪ್ರಸ್ತುತ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ ರೂ. 23,908. ಪ್ರಸ್ತುತ ತುಟ್ಟಿಭತ್ಯೆ ದರ ಶೇ 31. ರೂ 7,411.48 ಕೋಟಿ.
ಪ್ರಸ್ತುತ ಮೂಲ ವೇತನ + 31 % ತುಟ್ಟಿಭತ್ಯೆ ವಿಲೀನ ಸೇರಿ ಒಟ್ಟು ರೂ. 31.319 ಕೋಟಿ ಯಾಗಿದೆ.ಪ್ರಸ್ತುತ ಮೂಲ ವೇತನ + 31 % ತುಟ್ಟಿಭತ್ಯೆ ವಿಲೀನದ ನಂತರ ನಿಗದಿಯಾಗುವ ವೇತನಕ್ಕೆ ಶೇ 40 % ಫಿಟ್‌ಮೆಂಟ್ ನೀಡಿದಲ್ಲಿ ಆಗುವ ಹೆಚ್ಚುವರಿ ಹೊರೆ ಆರ್ಥಿಕ ವೆಚ್ಚ ರೂ. 12,527.79 ಕೋಟಿ ಯಾಗಿದೆ.
ಆಯೋಗ ರಚನೆಯಾದ ಬಳಿಕ 7ನೇ ವೇತನ ಆಯೋಗದ ಜವಾಬ್ದಾರಿಗಳು ಹೀಗಿವೆ:
ಆಯೋಗ ರಚನೆಯಾದ ಬಳಿಕ ಆಡಳಿತಾತ್ಮಕ ಸುಧಾರಣೆ ಮಾಡಬೇಕಾಗಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ನೇಮಕಾತಿ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಶಿಫಾರಸು ಮಾಡಬೇಕಾಗಿದೆ. ಜೊತೆಗೆ ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕಿ ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳ ಸುಧಾರಣೆ ಮಾಡಬೇಕಾಗಿದೆ.