Home Latest Sports News Karnataka ಕಾಂಡೋಂ ಬಳಸದೆ ಸಂಭೋಗಕ್ಕೆ ಒಪ್ಪದ ಕ್ರಿಕೆಟಿಗ | ಆಟಗಾರನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ!!!

ಕಾಂಡೋಂ ಬಳಸದೆ ಸಂಭೋಗಕ್ಕೆ ಒಪ್ಪದ ಕ್ರಿಕೆಟಿಗ | ಆಟಗಾರನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ!!!

Hindu neighbor gifts plot of land

Hindu neighbour gifts land to Muslim journalist

ಆಟಗಾರರೆಂದರೆ ಕೆಲವರಿಗೆ ಗೌರವ ಭಾವನೆ ಇದೆ. ಹಾಗಾಗಿ ಅವರನ್ನು ಬಹಳ ಧನ್ಯತಾ ಭಾವದಿಂದ ಕಾಣುತ್ತಾರೆ ಜನ. ಆದರೆ ಕೆಲವು ಆಟಗಾರರು ತಮ್ಮ ನಡವಳಿಕೆಯಿಂದ ಖಾಸಗಿ ಬದುಕಿನಲ್ಲಿ ಮಾಡೋ ಎಡವಟ್ಟು ನಿಜಕ್ಕೂ ದಿಗ್ಭ್ರಮೆ ಗೊಳಿಸುತ್ತದೆ. ಅಂಥಹುದೇ ಒಂದು ಆರೋಪ ಓರ್ವ ಕ್ರಿಕೆಟಿಗನ ಮೇಲೆ ಈಗ ಕೇಳಿ ಬಂದಿದೆ. ಶ್ರೀಲಂಕಾ ಕ್ರಿಕೆಟಿಗ ಗುಣತಿಲಕ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವನ್ನು ಸಂತ್ರಸ್ತೆಯೋರ್ವಳು ಆರೋಪ ಮಾಡಿದ್ದು, ಕ್ರಿಕೆಟಿಗನ ಬಂಧನವಾಗಿದೆ.

ಈ ಘಟನೆಯು ನವೆಂಬರ್ 2 ರಂದು ನಡೆದಿದೆ ಎಂದು ಆರೋಪಿಸಲಾಗಿದೆ. ಸಿಡ್ನಿಯ ಒಪೇರಾ ಹೌಸ್ ಬಳಿಯ ಜನಪ್ರಿಯ ಬಾರ್‌ನಲ್ಲಿ ಇವರಿಬ್ಬರು ಭೇಟಿಯಾಗಿದ್ದು, ಮೊದಲೇ ಇವರಿಬ್ಬರು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ನಂತರ ಬಾರ್‌ನಲ್ಲಿ ಭೇಟಿಯಾಗಿ, ಗುಣತಿಲಕ ದೋಣಿಯಲ್ಲಿ ಸಂತ್ರಸ್ತೆಯ ಮನೆಗೆ ಒಟ್ಟಿಗೆ ಪ್ರಯಾಣ ಮಾಡಿದ್ದಾಗಿಯೂ, ಇಬ್ಬರು ಸಾಕಷ್ಟು ಮದ್ಯ ಸೇವಿಸಿದ ನಂತರ ಗುಣತಿಲಕ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಕಾಂಡೋಮ್ ಅನ್ನು ಧರಿಸಲು ಹೇಳಿದರೂ ಅದನ್ನು ವಿರೋಧಿಸಿ ಬಲವಂತಾಗಿ ಲೈಂಗಿಕ ಕ್ರಿಯೆ ನಡೆಸಿದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.

ಹೌದು ಟಿ 20 ವಿಶ್ವಕಪ್ ಆಡಲು ಆಸ್ಟ್ರೇಲಿಯಾದಲ್ಲಿ ಇರುವಾಗ ಮಹಿಳೆಯೊಬ್ಬಳ ಮೇಲೆ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡುವ ಯತ್ನವು ನಡೆದಿದ್ದು, ಮೆದುಳಿನಲ್ಲಿ ಗಾಯವಾಗಿದೆಯೇ ಎಂಬುದನ್ನು ತಿಳಿಯಲು ಸಂತ್ರಸ್ತೆಗೆ ಸ್ಕ್ಯಾನ ಮಾಡಿಸುವ ಅವಶ್ಯಕತೆ ಇದೆ ಎಂದು ಸಿಡ್ನಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ.

ನವೆಂಬರ್ 2ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ಭಾನುವಾರ (ನ.06) ನಸುಕಿನ ಜಾವ ಸಿಡ್ನಿ ನಗರ ಪೊಲೀಸರು ಬಂಧನ ಮಾಡಿದ್ದಾರೆ. ಕೋರ್ಟ್ ಮುಂದೆ ಗುಣತಿಲಕ ಅವರನ್ನು ಹಾಜರುಪಡಿಸಲಾಗಿದೆ.

ಪ್ರಕರಣ ಗಂಭೀರ ಸ್ವರೂಪ ಆಗಿರುವುದರಿಂದ ಜಾಮೀನು ನಿರಾಕರಣೆ ಮಾಡಲಾಗಿದೆ. ಅಲ್ಲದೆ ಎಲ್ಲ ಆರೋಪ ಆಧಾರದಿಂದ ಮಾದರಿಯ ಪಂದ್ಯದಿಂದ ಗುಣತಿಲಕರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಿದೆ. ಸದ್ಯ ತನಿಖೆ ಮುಂದುವರಿದಿದ್ದು, ಗುಣತಿಲಕ ಸಿಡ್ನಿ ಪೊಲೀಸರ ಬಂಧನದಲ್ಲಿದ್ದಾರೆ. ಜೊತೆಗೆ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.