ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

Share the Article

ಪುತ್ತೂರು : ಪ್ರತಿಷ್ಠಿತ ವಸತಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

ನ.7 ರ ಸಂಜೆಯಿಂದ,10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ತಿಪ್ಪೇಶ್ (15) ಮತ್ತು ಅಭಿಷೇಕ್ (15) ನಾಪತ್ತೆಯಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

ಈ ಇಬ್ಬರು ವಿದ್ಯಾರ್ಥಿಗಳು ಮೈಸೂರು ಮೂಲದವರಾಗಿದ್ದು, ಸಂಜೆ ಹೊತ್ತು ಶಾಲೆಯಲ್ಲಿದ್ದರು. ನಂತರ ತಮ್ಮ ವಸತಿ ನಿಲಯಕ್ಕೆ ಹೋಗದೆ ಶಾಲೆ ಬಿಡುವ ಸಂದರ್ಭ ಪುತ್ತೂರು ಪೇಟೆಗೆ ಬಂದು ರೈಲು ನಿಲ್ದಾಣಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.

ಕೂಡಲೇ ಶಾಲಾ ಆಡಳಿತ ಮಂಡಳಿಯವರು ಮಕ್ಕಳ ಮನೆಯವರಿಗೆ ಕರೆ ಮಾಡಿ ಕೇಳಿದಾಗ, ಅವರು ಮನೆಗೂ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Leave A Reply