Lunar Eclipse 2022 : ನಾಳೆ ಚಂದ್ರಗ್ರಹಣ ; ಯಾವೆಲ್ಲ ದೇಗುಲ ರಾಜ್ಯದಲ್ಲಿ ಬಂದ್? ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಹಣ ಸಮಯದಲ್ಲಿ ದೇವರ ಪೂಜೆಗೆ ಮತ್ತು ದೇವಸ್ಥಾನದ ಪ್ರವೇಶ ಸೂಕ್ತವಲ್ಲ ಎಂದು ಹಲವಾರು ಸದ್ಗುರುಗಳು, ಪಂಡಿತರು, ಹಿರಿಯರು ಮತ್ತು ನಾನಾ ಅನುಭವಿಗಳ ಅಭಿಪ್ರಾಯ ಆಗಿದೆ.

ಚಂದ್ರ ಗ್ರಹಣ ಎಂದೂ ಕರೆಯಲ್ಪಡುವ ಚಂದ್ರಗ್ರಹಣವು ಸೂರ್ಯ, ಭೂಮಿ ಮತ್ತು ಚಂದ್ರನ ಇಂದೇ ಸಾಲಿನಲ್ಲಿ ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ, ಚಂದ್ರನು ಅಂಬ್ರಾ ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಗಾಢವಾದ ಭಾಗದಲ್ಲಿ ಬೀಳುತ್ತಾನೆ. ಹೀಗೆ ಸಂಭವಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಹಾಗೆಯೇ 2022 ರ ಕೊನೆಯ ಸಂಪೂರ್ಣ ಚಂದ್ರಗ್ರಹಣ ನವೆಂಬರ್ 8 ರಂದು ಮಂಗಳವಾರ ಸಂಭವಿಸಲಿದ್ದು, ರಾಜ್ಯದ ಹಲವು ದೇವಸ್ಥಾನಗಳು ನಾಳೆ ಬಂದ್ ಆಗಲಿವೆ.

ಅದಲ್ಲದೆ ಸುತಕ ಅವಧಿಯನ್ನು ಮರೆಯಬೇಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಸಮಯವನ್ನು ಅಶುಭ ಅವಧಿ ಎಂದು ಪರಿಗಣಿಸಲಾಗಿದೆ. ಗ್ರಹಣದ ಸಮಯದಲ್ಲಿ ಮನೆಯೊಳಗೆ ಇರಲು ಮತ್ತು ಯಾವುದೇ ಹೊಸ ಕೆಲಸವನ್ನು ಮಾಡುವುದನ್ನು ತಪ್ಪಿಸಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಚಂದ್ರ ಗ್ರಹಣ ಸೂತಕವು ಬೆಳಿಗ್ಗೆ 9:21 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:18 ಕ್ಕೆ ಕೊನೆಗೊಳ್ಳುತ್ತದೆ ಎಂಬ ಮಾಹಿತಿ ಇದೆ.

ದೇವಸ್ಥಾನಗಳಲ್ಲಿ ಪೂಜಾ ನಿಯಮ ಮತ್ತು ಕ್ರಮಗಳ ತಾತ್ಕಾಲಿಕ ಬದಲಾವಣೆಗಳು :
ಪ್ರಸ್ತುತ ನಾಳೆ ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ, ಚಂದ್ರ ಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಚಂದ್ರ ಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ, ಗ್ರಹಣದ ನಂತರ ನಡೆಯುವ ಅಭಿಷೇಕ ಮತ್ತು ಮಹಾ ಮಂಗಳಾರತಿ ಹಿನ್ನೆಲೆಯಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಹಣ ಸ್ಪರ್ಶ ಸಮಯವಾದ 2:39ರಿಂದ ಗ್ರಹಣ ಮೋಕ್ಷ ಸಮಯ 6:19ರತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಹಾಗೂ ಮಂಗಳವಾರ ಧರ್ಮಸ್ಥಳದಲ್ಲೂ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ. ಮಧ್ಯಾಹ್ನ 1:30ರಿಂದ ರಾತ್ರಿ 7ರತನಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 1:30ರ ವರೆಗೆ ಮಾತ್ರ ಭೋಜನ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7 ಗಂಟೆಯ ನಂತರ ಭೋಜನ ವ್ಯವಸ್ಥೆ ಮುಂದುವರಿಯಲಿದೆ.

ಕಟೀಲು ದೇವಸ್ಥಾನದಲ್ಲೂ ಗ್ರಹಣದ ದಿನ ದೇವರ ಪೂಜೆಯ ಸಮಯ ಬದಲಾವಣೆ ಆಗಲಿದೆ. ನಾಳೆ ಬೆಳಗ್ಗೆ 9:30ಕ್ಕೆ ದೇವರಿಗೆ ಪೂಜೆ ನಡೆಯುತ್ತದೆ. ಮಧ್ಯಾಹ್ನ ಭೋಜನ ಇರುವುದಿಲ್ಲ.

ಚಂದ್ರಗ್ರಹಣ ಗೋಚರ ಸ್ಥಳ :
ದೆಹಲಿಯಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದ್ದು, ಸಂಜೆ 5:32ಕ್ಕೆ ಚಂದ್ರೋದಯದಿಂದ ಆರಂಭವಾಗಿ ಸಂಜೆ 6:18ಕ್ಕೆ ಕೊನೆಗೊಳ್ಳಲಿದೆ. ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿ ಸೇರಿದಂತೆ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ದೊರೆತಿದೆ.

Please follow and like us:
Leave A Reply

Your email address will not be published.

Social media & sharing icons powered by UltimatelySocial
WhatsApp