ಟ್ವಿಟರ್ ಅಕ್ಷರ ಮಿತಿ ರದ್ದು, ಭಾರತದಲ್ಲಿ ಬ್ಲೂ ಟಿಕ್ ಗೆ 200 ರೂಪಾಯಿ – ಬಾಸ್ ಎಲಾನ್ ಮಸ್ಕ್ ಘೋಷಣೆ
ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಸುಧಾರಣೆಗೆ ಕಂಪನಿ ಮಾಲೀಕ ಎಲಾನ್ ಮಸ್ಕ್ ಇಳಿದಿದ್ದು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಒಂದು ಪೋಸ್ಟ್‌ಗೆ ಗರಿಷ್ಠ 280 ಕ್ಯಾರೆಕ್ಟರ್ ಗಳ ಮಿತಿಯನ್ನೂ ಅವರು ತೆಗೆದು ಹಾಕಿದ್ದಾರೆ. ಉದ್ದದ ಬರಹಗಳನ್ನು ಬರೆಯಲು ಸಹಾಯವಾಗುವ ಹಾಗೆ ಎಲಾನ್ ಮಸ್ಕ್ ಈ ಮಿತಿಯನ್ನು ಹಿಗ್ಗಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟ ಅವರು ನೋಟ್ ಪ್ಯಾಡ್ ಸ್ಕ್ರೀನ್‌ಶಾಟ್‌ಗಳ ಅಸಂಬದ್ಧತೆಗಳಿಗೆ ಅವರು ಅಂತ್ಯ ಹಾಡಲಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟ್ವಿಟರ್ ಕಂಪನಿ ತನ್ನ ಶೇ.50ರಷ್ಟು ಉದ್ಯೋಗಿಗಳನ್ನು ಈಗಾಗಲೇ ವಜಾಗೊಳಿಸಿದೆ. ಒಟ್ಟಾರೆ 2000 ಉದ್ಯೋಗಿಗಳು ಈಗ ಟ್ವಿಟ್ಟರ್ ನಿಂದ ಹೊರಕ್ಕೆ ಬಂದಿದ್ದಾರೆ. ಇದರಿಂದ ಈಗಾಗಲೇ ಅಮೆರಿಕದಲ್ಲಿ ಎಚ್-1ಬಿ ವೀಸಾ ಹೊಂದಿರುವ ಟ್ವಿಟರ್‌ನ ವಜಾಗೊಂಡ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅವರಿಗೆ 60 ದಿನಗಳ ಗಡುವು ಮಾತ್ರ ಇದೆ. ಇಷ್ಟರಲ್ಲಿ ಅವರು ಹೊಸ ಉದ್ಯೋಗ ಹುಡುಕಿಕೊಳ್ಳಬೇಕು. ತಪ್ಪಿದ್ದಲ್ಲಿ ಅವರ ಎಚ್-1ಬಿ ವೀಸಾ ರದ್ದಾಗಲಿದೆ. ಇದು ಅಮೆರಿಕದ ಸದ್ಯದ ಕಾನೂನು.
ಅಲ್ಲದೆ ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ಹೊಂದುವುದಕ್ಕೆ ಮೊದಲು ಅವರವರ ಖಾತೆ ದೃಢಪಡಿಸಬೇಕಾಗುತ್ತದೆ. ಅದಕ್ಕೆ ಪಾಸ್‌ಪೋರ್ಟ್, ಆಧಾರ್ ಸೇರಿದಂತೆ ಯಾವುದಾದರೂ ಒಂದು ಪೋಟೋ ಇರುವ ಗುರುತಿನ ಚೀಟಿ ಸಲ್ಲಿಸಬೇಕಾಗುತ್ತದೆ. ಆಗ ಮಾತ್ರ ನೀವು ಸ್ಕ್ಯಾಮ್‌ನಲ್ಲಿ ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆ ಮೂಲಕ ಈ ಖಾತೆ ನಿಮ್ಮದೇ ಎಂಬುದನ್ನು ದೃಢಪಡಿಸಲಾಗುತ್ತದೆ.
ಭಾರತದಲ್ಲಿ ಬ್ಲೂ ಟಿಕ್ ಗೆ 200 ರೂಪಾಯಿ ತೆರಬೇಕಾಗುತ್ತದೆ. ಎಡಪಂಥೀಯ ಚಿಂತನೆಗಳ ಟ್ವಿಟರ್ ಅನ್ನು ಮಸ್ಕ್ ವಶಕ್ಕೆ ಪಡೆದ ನಂತರ ಬಲಪಂಥೀಯ ಮತ್ತು ಫ್ರೀ ಟಾಕ್ ಗೆ ಬಳ ಬಂದಿತ್ತು. ಮಸ್ಕ್ ನಿರ್ಧಾರವನ್ನು ಕಂಗನಾ ಸಮರ್ಥಿಸಿ ಕೊಂಡಿದ್ದಾರೆ. ಭಾರತದ ಸರಕಾರಕ್ಕೆ ಮಸ್ಕ್ ನ ನೇತೃತ್ವದ ಟ್ವಿಟ್ಟರ್ ನಿಂದ ಸಹಾಯ ಆಗಲಿದೆ.