ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು!!!
ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗಳನ್ನು ಕೇಳಿರುತ್ತೇವೆ. ಆದರೆ ಹೈದರಾಬಾದ್ ನ ಜವಾಹರ್ ನಗರದಲ್ಲಿ , ಈಜಲು ಹೋಗಿದ್ದ ಒಬ್ಬರಲ್ಲ, ಇಬ್ಬರಲ್ಲ ಒಟ್ಟಾಗಿ 5 ಮಂದಿ ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತಪಟ್ಟ ಮಕ್ಕಳು ಸಿಪಿಎಲ್ ಅಂಬರ್‌ಪೇಟೆಯ ಮಸೀದಿ-ಎ ಹನೀಫ್‌ನಲ್ಲಿರುವ ಮದರಸಾದ ವಿದ್ಯಾರ್ಥಿಗಳಾದ ಸೋಹೈಲ್ (12), ಜಾಫರ್ (12), ಮೊಹಮ್ಮದ್ ರೆಹಾನ್ (14), ಸೈಯದ್ ಇಸ್ಮಾಯಿಲ್ (12) ಮತ್ತು ಮೊಹಮ್ಮದ್ ಅಯಾನ್ (10) ಎನ್ನಲಾಗಿದೆ.
ಘಟನೆ ಹೇಗೆ ನಡೆಯಿತೆಂದರೆ, ಈ ಐವರು ಮಕ್ಕಳು ತಮ್ಮ ಶಿಕ್ಷಕ ಯಾಹಿಯ ಶಾಹಿದ್ ಅವರೊಂದಿಗೆ ಮಸೀದಿ -ಎ ಹನೀಫ್ ಮದರಸಾದ ವ್ಯವಸ್ಥಾಪಕರಾದ ಅಬ್ದುಲ್ ರಹಿಮಾನ್ ಜಾವೆದ್ ಅವರ ಗ್ರಾಮಕ್ಕೆ ಹೋಗಿದ್ದಾರೆ. ನಂತರ ಮಕ್ಕಳು ಯಹಿಯಾ ಅವರೊಂದಿಗೆ ಮಲ್ಕರಂ ಕೆರೆಗೆ ಸ್ನಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗಿದ್ದರಿಂದ ನೀರಿನ ರಭಸಕ್ಕೆ ಹಾಗೂ ಯಾರಿಗೂ ಈಜಲೂ ಬಾರದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಜವಾಹರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದಿಂದ ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಗಾಂಧಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.