ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗನಿಗೆ ವಿಧಿ ಶಿಕ್ಷೆ !!!
ಬೆಂಗಳೂರು ನಗರದ ಹೆಗ್ಗನಹಳ್ಳಿಯಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಯುವತಿ ಮೇಲೆ ಆಯಸಿಡ್(Acid Attack) ಎರಚಿದ್ದ ಆರೋಪಿ ನಾಗೇಶ್‌ನಿಗೆ ವಿಧಿ ಶಿಕ್ಷೆ ನೀಡಿದೆ. ನಾಗೇಶ್ ನನ್ನು ಪೊಲೀಸರು ಹಿಡಿದು ಕರೆದುಕೊಂಡು ಬರುವ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಆತನ ಕಾಲಿಗೆ ಗುಂಡೇಟು ಹೊಡೆಯಲಾಗಿತ್ತು. ಹಾಗಾಗಿ ನಾಗೇಶ್ ಅಲಿಯಾಸ್ ನಾಗ ಕಳೆದ 6 ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು ಗ್ಯಾಂಗ್ರೀನ್ ಲಕ್ಷಣಗಳು(Gangrene Disease Symptoms) ಕಂಡು ಬಂದಿವೆ.
ಆರೋಪಿ ನಾಗೇಶ್ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂದು ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಇದಾದ ಬಳಿಕ ಸನ್ಯಾಸಿ ವೇಶ ಧರಿಸಿ ಆಶ್ರಮದಲ್ಲಿ ತಲೆ ಮರೆಸಿಕೊಂಡಿದ್ದ. ಆರೋಪಿ ಪತ್ತೆ ವೇಳೆ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದರು. ಆದರೆ ಈಗ ಆರೋಪಿ ನಾಗೇಶ್ ಗುಂಡೇಟು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ರೂ ನೋವು ಹೆಚ್ಚಾಗಿದೆ. ಚಿಕಿತ್ಸೆ ಕೊಡಿಸುತ್ತಿದ್ದರೂ ಗಾಯದ ತೀವ್ರತೆ ಕಡಿಮೆಯಾಗಿಲ್ಲ. ನಡೆದಾಡಲು ಆಗದೆ ವಿಕ್ಟೋರಿಯಾ ಆಸ್ಪತ್ರೆಗೆ ಜೈಲಿನ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದೆ. ಸದ್ಯ ನಾಗನ ಕಾಲಲ್ಲಿ ಗ್ಯಾಂಗ್ರಿನ್ ಲಕ್ಷಣ ಕಾಣಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
2022ರ ಏಪ್ರಿಲ್ 28ರಂದು ಮುತ್ತೂಟ್ ಫೈನಾನ್ಸ್ ಕಚೇರಿ ಬಳಿ ಯುವತಿ ಮೇಲೆ ಆ್ಯಸಿಡ್ ಹಾಕಿ ನಾಗೇಶ್ ಪರಾರಿಯಾಗಿದ್ದು, ಸತತ ತನಿಖೆಯ ಬಳಿಕ ನಾಗೇಶ್ ನನ್ನು ಬೆಂಗಳೂರು ಪೊಲೀಸರು ತಮಿಳುನಾಡಿನ ಆಶ್ರಮದಲ್ಲಿ ಬಂಧಿಸಿದ್ದರು. ಆ್ಯಸಿಡ್ ನಾಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುಂತೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.