Home Interesting ವೈದ್ಯ ಲೋಕಕ್ಕೇ ಅಚ್ಚರಿ | 21 ದಿನದ ಹಸುಗೂಸಿನ ಹೊಟ್ಟೆಯಲ್ಲಿತ್ತು 8 ಭ್ರೂಣ !!!

ವೈದ್ಯ ಲೋಕಕ್ಕೇ ಅಚ್ಚರಿ | 21 ದಿನದ ಹಸುಗೂಸಿನ ಹೊಟ್ಟೆಯಲ್ಲಿತ್ತು 8 ಭ್ರೂಣ !!!

Hindu neighbor gifts plot of land

Hindu neighbour gifts land to Muslim journalist

21 ದಿನಗಳ ಹಸುಗೂಸಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗುವ ಮೂಲಕ ಒಂದು ಅಚ್ಚರಿ ಘಟನೆ ನಡೆದಿದೆ. ಅ.10 ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು.ವೈದ್ಯರು ಮಗುವಿನ ಹೊಟ್ಟೆಯಲ್ಲಿ ಗೆಡ್ಡೆಯಿರುವುದನ್ನು ಪತ್ತೆ ಮಾಡಿದ್ದಾರೆ.ಮಗುವಿಗೆ 21 ದಿನ ತುಂಬಿದಾಗ ಆಸ್ಪತ್ರೆಗೆ‌ ದಾಖಲಿಸಲಾಯಿತು. ಆರಂಭದಲ್ಲಿ ಚೀಲ ಅಥವಾ ಗೆಡ್ಡೆಯಂತಹ ವಸ್ತುವು ಕಂಡುಬಂದಿದೆ. ಆದರೆ ಶಿಶುವನ್ನು ನವೆಂಬರ್ 1ರಂದು ಮತ್ತೊಮ್ಮೆ ಪರೀಕ್ಷಿಸಿದಾಗ ಒಂದರ ನಂತರ ಒಂದರಂತೆ ಎಂಟು ಭ್ರೂಣಗಳು ಪತ್ತೆಯಾಗಿವೆ.

ಹೊಟ್ಟೆಯಲ್ಲಿನ ಚೀಲದೊಳಗೆ ಭ್ರೂಣಗಳಿದ್ದವು.ಇದು ಐದು ಸೆಂಟಿಮೀಟರ್ ಮತ್ತು ಮೂರು ಸೆಂಟಿಮೀ ಗಾತ್ರವಿದ್ದೂ, ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗಿದೆ. ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ.ಎಂ.ಡಿ.ಇಮ್ರಾನ್ ಮಾಹಿತಿ ನೀಡಿದ್ದಾರೆ.

ಈ ಮೊದಲು ಒಂದು ಭ್ರೂಣ ಕೆಲ ಮಕ್ಕಳಲ್ಲಿ ಕಂಡು ಬಂದಿತ್ತು.ಆದರೆ ಶಿಶುವಿನ ಹೊಟ್ಟೆಯಲ್ಲಿ ಎಂಟು ಭ್ರೂಣ ಪತ್ತೆಯಾಗಿರೋದು ಇದೇ ಮೊದಲು ಎಂದು ಹೇಳಿದ್ದಾರೆ. ಇದು ಅಚ್ಚರಿಯಾಗಿದ್ದು ಐದು ಲಕ್ಷ ಮಂದಿಯ ಪೈಕಿ ಒಬ್ಬರಲ್ಲಿ ಮಾತ್ರ ಇಂತಹ ಬೆಳವಣಿಗೆ ಕಂಡು ಬರುತ್ತದೆ. ಎಂದು ವೈದ್ಯರಾದ ಡಾ.ಇಮ್ರಾನ್‌ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಪರಿಭಾಷೆಯಲ್ಲಿ,ಇದನ್ನು ಫೋಯೆಟಸ್‌-ಇನ್-ಫೆಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ.ಇದು ಅಪರೂಪವಾಗಿದ್ದು,ಅದರಲ್ಲಿ ಒಂದು ದೋಷಪೂರಿತ ಕಶೇರುಕ ಭ್ರೂಣವು ಅವಳಿ ದೇಹದೊಳಗೆ ಸುತ್ತುವರಿಯಲ್ಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಈಗ ಮಗುವಿನ ಶಸ್ತ್ರಕ್ರಿಯೆ ನಡೆದಿದ್ದು,ಮಗು ಆರೋಗ್ಯವಾಗಿದೆ.