ಚಂದ್ರಶೇಖರ ಪೂಜಾರಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿಗಳಿಗೆ ಹರೀಶ್ ಪೂಂಜಾ ಬೆಂಬಲ ಉಂಟಾ ?!

ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ಚಂದ್ರಶೇಖರ ಪೂಜಾರಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ರವರುಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ನ.07 ರಂದು ಸೋಮವಾರ ಧರ್ಮಸ್ಥಳ ಠಾಣೆಯ ಮುಂಭಾಗ ಅಮರಣಾಂತ ಧರಣಿ ಮಾಡುವುದಾಗಿ ಚಂದ್ರಶೇಖರ್ ತಂದೆ ಆನಂದ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.

 

ದೂರಿನಲ್ಲಿ ಏನಿದೆ ?
ಚಂದ್ರಶೇಖರನು ಅಣಿಯೂರಿನ ಶಬರಿ ಸ್ವ ಸಹಾಯ ಸಂಘದ ಸದಸ್ಯನಾಗಿದ್ದು, ಸದ್ರಿ ಸಂಘದಲ್ಲಿ 8 ಜನ ಸದಸ್ಯರಿದ್ದು, ಕಳೆದ ವರ್ಷ ಸಂಘಕ್ಕೆ ಉಜಿರೆ ವಿಶ್ವಕರ್ಮ ಬ್ಯಾಂಕಿನಿಂದ ರೂ. 4,೦೦,೦೦೦/- ರೂ. ನಾಲ್ಕು ಲಕ್ಷ ಸಾಲವನ್ನು ನೀಡಿದ್ದ.
ಸದ್ರಿ ಹಣವನ್ನು 8 ಜನ ಸದಸ್ಯರುಗಳು ಹಂಚಿಕೊಂಡಿದ್ದರು. ಅದರಲ್ಲಿ ಚಂದ್ರಶೇಖರನ ಹೆಸರಿನಲ್ಲಿ ಯೋಗೀಶ ಎಂಬವನು ಹಣ ಪಡೆದುಕೊಂಡು ನಂತರ ಕಂತು ಹಣವನ್ನು ತುಂಬದೆ ಬಿಟ್ಟಿದ್ದ. ಕಂತು ಕಟ್ಟಲು ಬಂದಾಗ ಯೋಗೀಶ ಹಣ ಕಟ್ಟದೆ ನನ್ನ ಮಗ ಚಂದ್ರಶೇಖರನೇ ಹಣ ಕಟ್ಟುವಂತೆ ಮಾಡಿದ್ದಾನೆ.
ಎಂದು ಈಗ ಮೃತ ಚಂದ್ರಶೇಖರನ ಅಪ್ಪ ದೂರಿದ್ದಾರೆ.

ಅಲ್ಲದೆ ಸ್ವ ಸಹಾಯ ಸಂಘದ ಸದಸ್ಯರುಗಳಾದ ನೆರಿಯ ಗ್ರಾಮ ಪಂಚಾಯತ್ ಸದಸ್ಯ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರುಗಳು ಎಲ್ಲಾ ಹಣವನ್ನು ನೀನೇ ಕಟ್ಟಬೇಕು ಎಂದು ಚಂದ್ರ ಶೇಖರನಿಗೆ ಒತ್ತಾಯ ಮಾಡಿದ್ದರು. ಹಾಗೆಂದು ಮಗ ಮನೆಯಲ್ಲಿ ಅಲವತ್ತು ಕೊಳ್ಳುತ್ತಿದ್ದ.

ಈ ಮಧ್ಯೆ ದಿನಾಂಕ: 23.08.2022 ರಂದು ಸಂಜೆ 05.30 ಗಂಟೆಗೆ ನನ್ನ ಮಗ ಚಂದ್ರಶೇಖರನು ಮನೆಯ ಕಡೆ ಬರುವಾಗ ನೆರಿಯ ಗ್ರಾಮದ ಬಸ್ಸು ನಿಲ್ದಾಣದ ಬಳಿ ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ ಮತ್ತು ಸುದರ್ಶನ್ ರವರುಗಳು ಚಂದ್ರ ಶೇಖರನನ್ನ ತಡೆದು ನಿಲ್ಲಿಸಿ ನಾವು ಸಂಘದ ಸಾಲ ಕಟ್ಟುವುದಿಲ್ಲ. ಬೇಕಿದ್ದರೆ ನೀನೇ ಕಟ್ಟು ಎಂದು ಪೆದಂಬು ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನುವುದು ಮೃತ ಚಂದ್ರಶೇಖರನ ದೂರು.

ಇದೆಲ್ಲದರಿಂದ ಮನನೊಂದ ಮಗ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಚಂದ್ರಶೇಖರ್ ತಂದೆ ಆರೋಪಿಸಿದ್ದಾರೆ. ಆರೋಪಿಗಳ ಪೈಕಿ ಸಚಿನ್ ಎಂಬಾತನು ” ನಮಗೆ ಶಾಸಕರಾದ ಹರೀಶ್ ಪೂಂಜಾ ಬೆಂಬಲ ಇದೆ, ನಮ್ಮನ್ನು ಯಾರಿಂದಲು ಏನು ಮಾಡೋದಕ್ಕೂ ಆಗಲ್ಲ ಎಂದು ಹೇಳಿಕೊಂಡು ರಾಜಾರೋಷವಾಗಿ ತಿರುಗಾಡಿಕೊಂಡಿರುತ್ತಾರೆ. ಇದರಿಂದಾಗಿ ನಮಗೆ ಭಯ ಉಂಟಾಗಿರುತ್ತದೆ ” ಎಂದೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

Leave A Reply

Your email address will not be published.