Food For diabetics : ಶುಗರ್ ಇದೆ ಎಂಬ ಭಯವೇ? ಹೊಟ್ಟೆಗೆ ಏನೂ ಕಡಿಮೆ ಮಾಡಬೇಡಿ…ಈ ಆಹಾರ ತಿಂದು ನೋಡಿ!!!
ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯನ್ನು ಬಹಳ ಎಚ್ಚರಿಕೆಯಿಂದ ಪಾಲಿಸಬೇಕು. ಆಹಾರದ ಕಾರಣದಿಂದಲೇ ಅವರ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳು ಉಂಟಾಗಬಹುದು. ಯಾವ ರೀತಿಯ ಆಹಾರ ಸೇವಿಸಿದರೆ ಉತ್ತಮ? ಹೇಗೆ ಆಹಾರ ಸೇವನೆ ಮಾಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು, ಎನ್ನುವುದರ ಬಗ್ಗೆ ಸಾಮಾನ್ಯವಾಗಿ ಎಲ್ಲ ಮಧುಮೇಹಿಗಳೂ ಒಂದು ವಿಚಾರವನ್ನಿಟ್ಟುಕೊಂಡೇ ಇರುತ್ತಾರೆ.
ಸಕ್ಕರೆಯ ಅಂಶ ಕಡಿಮೆ ಇರುವ, ನಾರಿನಂಶ ಹೆಚ್ಚಿರುವ, ಖನಿಜ, ವಿಟಮಿನ್ ಗಳು ಹೆಚ್ಚಾಗಿರುವ, ಉತ್ತಮ ಕೊಬ್ಬಿರುವ ಆಹಾರವನ್ನು ಸೇವಿಸಬೇಕೆನ್ನುವುದು ಅವರ ಗುರಿಯಾಗಿರುತ್ತದೆ. ಆದರೆ, ಸಾಮಾನ್ಯವಾಗಿ ಸಮತೋಲಿತ ಆಹಾರ ಕಷ್ಟವಾಗುತ್ತದೆ. ಬೇಳೆ-ಕಾಳುಗಳು ದೈನಂದಿನ ಆಹಾರದಲ್ಲಿ ಇರಬೇಕೇ ಬೇಡವೇ ಎನ್ನುವುದೊಂದು ಪ್ರಶ್ನೆ ಬಹುತೇಕ ಮಧುಮೇಹಿಗಳಲ್ಲಿ ಕಾಡುತ್ತದೆ. ಪ್ರೊಟೀನ್ ಸೇರಿದಂತೆ ವಿವಿಧ ರೀತಿಯ ಪೌಷ್ಟಿಕಾಂಶ ಹೊಂದಿರುವ ಬೇಳೆಕಾಳುಗಳು ಆರೋಗ್ಯಕ್ಕೆ ಒಳ್ಳೆಯವೇ, ಬೇಳೆಕಾಳುಗಳನ್ನು ಎಲ್ಲರೂ ಸೇವಿಸಬೇಕು. ಹೀಗಾಗಿ, ಕೆಲವು ರೀತಿಯ ಬೇಳೆಕಾಳುಗಳನ್ನು ಮಧುಮೇಹಿಗಳು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ.
ಅಲ್ಲದೆ ಉತ್ತಮ ನಾರಿನಂಶ ಮತ್ತು ಕಾಂಪ್ಲೆಕ್ಸ್ ಕಾರ್ಬೋಹೈಡೇಟ್ ಹೊಂದಿರುವ ಧಾನ್ಯಗಳು ಮಧುಮೇಹಿಗಳ ಆಹಾರದಲ್ಲಿ ಪ್ರಮುಖ ಪಾತ್ರವಾಗಿದೆ. ಇವುಗಳಲ್ಲಿರುವ ಕಾರ್ಬೋಹೈಡ್ರೆಟ್ ನಿಧಾನವಾಗಿ ಜೀರ್ಣವಾಗುವಂಥದ್ದು. ಹೀಗಾಗಿ, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಇವುಗಳನ್ನು ತಿಂದ ತಕ್ಷಣ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ವಿಟಮಿನ್, ಮಿನರಲ್, ಕಬ್ಬಿಣ, ಫಾಸಿಕ್ ಆಸಿಡ್, ಝಿಂಕ್ ಮುಂತಾದ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಇವು ದೇಹಾರೋಗ್ಯಕ್ಕೆ ಅತ್ಯುತ್ತಮ. ಕೆಲವು ಧಾನ್ಯಗಳು ಮಧುಮೇಹಿಗಳಿಗೆ ಮತ್ತಷ್ಟು ಉತ್ತಮ ಅವು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
ಹುರುಳಿ: ಹುರುಳಿ ಕಾಳುಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಕೊಬ್ಬನ್ನು ಕರಗಿಸುವುದರಿಂದ, ತೂಕ ಇಳಿಸಲು ಸಹಕಾರಿ.
ಉದ್ದು : ಇದು ದೇಹಕ್ಕೆ ಶಕ್ತಿ ನೀಡುವ ಜೊತೆಗೆ, ಇದರಲ್ಲಿರುವ ನಾರಿನ ಅಂಶವು ಕೊಬ್ಬನ್ನು ಕರಗಿಸುತ್ತದೆ. ಇದು ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಇಡಿಯಾಗಿಯು ಬಳಸಬಹುದು ಅಥವಾ ಉದ್ದಿನ ಬೇಳೆಯನ್ನು ಬಳಸಿದರೂ ಆರೋಗ್ಯಕ್ಕೆ ಉತ್ತಮ.
ಹೆಸರುಬೇಳೆ: ನಾರು, ಪ್ರೊಟೀನ್ ಮಟ್ಟ ಹೆಚ್ಚಿರುತ್ತದೆ. ಕ್ಯಾಲರಿ ಕಡಿಮೆ ಹೊಂದಿದ್ದು, ಅತ್ಯುತ್ತಮ ಪೌಷ್ಟಿಕಾಂಶ ಹೊಂದಿದೆ. ಹಸಿರು ಹೆಸರುಕಾಳು ಜೀರ್ಣಶಕ್ತಿಯನ್ನು ಉತ್ತಮಪಡಿಸುತ್ತದೆ.
ಕಡಲೆಕಾಳು :ಇದು ಮಧುಮೇಹಿಗಳಿಗೆ ಅತ್ಯುತ್ತಮವಾದ ಬೇಳೆಕಾಳು, ಗೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು, ಇದನ್ನು ತಿಂದ ಬಳಿಕ ಸಕ್ಕರೆ ಮಟ್ಟ ಸ್ವಲ್ಪವೂ ಹೆಚ್ಚುವುದಿಲ್ಲ. ಪ್ರೊಟೀನ್, ನಾರು ಅಂಶಗಳು ಹೆಚ್ಚಾಗಿದ್ದು, ವಿಟಮಿನ್, ಖನಿಜಭರಿತವಾಗಿದೆ. ರೊಟ್ಟಿ ಮಾಡಲು ಗೋಧಿ ಹಿಟ್ಟಿನ ಜತೆ ಕಡಲೆ ಹಿಟ್ಟನ್ನು ಸಹ ಬಳಕೆ ಮಾಡಬಹುದು.
ಕಿಡ್ನಿ ಬೀನ್ಸ್ : ಕೇವಲ 19ರಷ್ಟು ಗೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಿಡ್ನಿ ಬೀನ್ಸ್ ನಲ್ಲಿ ನಾರಿನ ಅಂಶ ಹೇರಳ. ಇದರಲ್ಲಿರುವ ಸ್ಟಾರ್ಚ್ ಅಂಶವು ನಿಧಾನವಾಗಿ ಜೀರ್ಣಗೊಂಡು ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ.
ಕಡಲೆ ಬೇಳೆ: ಫಾಲಿಕ್ ಆಸಿಡ್, ಕಬ್ಬಿಣಾಂಶ, ನಾರಿನಾಂಶ ಚೆನ್ನಾಗಿರುತ್ತದೆ. ಕೇವಲ 8 ಗೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಡಲೆ ಬೇಳೆ ಮಧುಮೇಹಿಗಳಿ ಅತ್ಯುತ್ತಮ. . ಕೆಂಪು ರಕ್ತ ಕಣಗಳನ್ನು ದೇಹದಲ್ಲಿ ಉತ್ಪಾದಿಸಲು ಸಹಾಯಮಾಡುತ್ತದೆ.
ಇವಿಷ್ಟೇ ತಿಂದ್ರೆ ಸಾಕು, ಶುಗರ್ ಲೆವೆಲ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಂತಲೇ ಇಲ್ಲಾ.