ಊಟ ತಿನ್ನುವಾಗ ನೀರು ಕುಡಿಯಬೇಕೆ?

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ.
ನಮ್ಮ ಆರೋಗ್ಯ ಉತ್ತಮವಾಗಿ ಇದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ಅದಲ್ಲದೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಾಗ ನೀರು ಕುಡಿಯುವುದು ಅತ್ಯಗತ್ಯ. ಹಾಗಂತ ನೀರನ್ನು ಯರ್ರಾಬಿರ್ರಿ ಕುಡಿದರೆ ಉಪಯೋಗವಿಲ್ಲ ಅದಲ್ಲದೆ ಊಟದ ಮೊದಲು ಅಥವಾ ನಂತರ ನೀರಿನ ಸೇವನೆಯ ಬಗ್ಗೆ ಕೆಲವರಿಗೆ ಅಸ್ಪಷ್ಟತೆ ಇರುತ್ತದೆ.

ಹೌದು ತಜ್ಞರ ಪ್ರಕಾರ ಜನರು ಊಟದ ಸಮಯದಲ್ಲಿ ನೀರನ್ನು ಸೇವಿಸಬಾರದು ಎಂದು ಸೂಚಿಸುತ್ತಾರೆ. ಊಟದ ಸಮಯದಲ್ಲಿ ನೀರು ಕುಡಿದರೆ ನೀರು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸುತ್ತದೆ ಮತ್ತು ಊಟದೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಆಯುರ್ವೇದ ತಜ್ಞೆ ಡಾ.ರೇಖಾ ರಾಧಾಮೋನಿ ಪ್ರಕಾರ :
ನೀರನ್ನು ಸೇವಿಸಲು ಒಂದು ನಿರ್ದಿಷ್ಟ ಸಮಯವಿದೆ ಮತ್ತು ಆ ಸಮಯವು ಊಟಕ್ಕೆ 30 ನಿಮಿಷಗಳ ಮೊದಲು ಮತ್ತು ನಂತರ ಕುಡಿಯಬೇಕೆಂದು ತಿಳಿಸಿದ್ದಾರೆ. ಬೊಜ್ಜು ಮತ್ತು ತೆಳ್ಳಗಿನ ಜನರಿಗೆ ಸರಿಯಾದ ಸಮಯವನ್ನು ಅವರು ಹೈಲೈಟ್ ಮಾಡಿದ್ದಾರೆ.

ವೈದ್ಯರ ಪ್ರಕಾರ:
“ಒಬ್ಬ ವ್ಯಕ್ತಿಯು ಸಣಕಲು, ದಣಿದ, ದುರ್ಬಲ, ತೂಕವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಮತ್ತು ಒಟ್ಟಾರೆಯಾಗಿ ತುಂಬಾ ತೆಳ್ಳಗೆ ಕಾಣುತ್ತಿದ್ದರೆ, ಅವರು ಊಟದ 30 ನಿಮಿಷಗಳ ನಂತರ ನೀರನ್ನು ಸೇವಿಸಬೇಕು”. ಆದಾಗ್ಯೂ, ಬೊಜ್ಜು ಹೊಂದಿರುವವರಿಗೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ, “ವ್ಯಕ್ತಿಗೆ ದೇಹದಲ್ಲಿ ಬೊಜ್ಜು ಅಧಿಕವಾಗಿದ್ದರೆ, ಹಾರ್ಮೋನುಗಳ ಅಸಮತೋಲನವನ್ನು ಹೊಂದಿದ್ದರೆ ಅಥವಾ ದೇಹದಲ್ಲಿ ಸಾಕಷ್ಟು ಕೊಬ್ಬನ್ನು ಹೊಂದಿದ್ದರೆ ಊಟಕ್ಕೆ 30 ನಿಮಿಷಗಳ ಮೊದಲು ನೀರನ್ನು ಕುಡಿಯಬೇಕು” ಎಂದು ಅವರು ತಿಳಿಸುತ್ತಾರೆ.

ಒಟ್ಟಾರೆಯಾಗಿ ನೀರು ಕುಡಿಯುವುದು ಉತ್ತಮ ಆರೋಗ್ಯಕ್ಕೆ ರಾಮಬಾಣ ಆಗಿದೆ.

Leave A Reply

Your email address will not be published.