Home News Reliance Jio : ಜಿಯೋ ಪೋಸ್ಟ್ ಪೇಡ್ ಬಳಕೆದಾರರಿಗೆ ಮೋಸ | ಗ್ರಾಹಕರಿಂದ ಭಾರೀ ಆಕ್ರೋಶ!

Reliance Jio : ಜಿಯೋ ಪೋಸ್ಟ್ ಪೇಡ್ ಬಳಕೆದಾರರಿಗೆ ಮೋಸ | ಗ್ರಾಹಕರಿಂದ ಭಾರೀ ಆಕ್ರೋಶ!

Hindu neighbor gifts plot of land

Hindu neighbour gifts land to Muslim journalist

ಜಿಯೋ ಚಂದಾದಾರರು ಇಲ್ಲಿ ಸ್ವಲ್ಪ ಗಮನಿಸಿ. ನೀವು ನಿಮ್ಮ ಆಯ್ಕೆಯಾದ ಜಿಯೋ ಸಿಮ್ ನಲ್ಲಿ ಏನೆಲ್ಲಾ ವ್ಯತ್ಯಾಸ ಆಗುತ್ತಿವೆ ಎಂದು ತಿಳಿದುಕೊಳ್ಳಲೇ ಬೇಕು. ಪ್ರಸ್ತುತ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನಿಲ್ಲಿಸುವ ಮೂಲಕ ಬಿಗ್ ಶಾಕ್ ಜಿಯೋ ನೀಡಿದೆ. ವಿಶ್ವಕಪ್ ಟಿ20 ಕ್ರಿಕೆಟ್ ನಡೆಯುತ್ತಿರುವ ಈ ವೇಳೆಗೆ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನಿಲ್ಲಿಸಲಾಗಿದ್ದು ಮತ್ತು ಹೊಸ ಡೇಟಾ ಪ್ಯಾಕ್ ನ ಸವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ.

ಜಿಯೋವಿನ ಆರಂಭಿಕ ಪೋಸ್ಟ್‌ಪೇಡ್ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ಒಟ್ಟು 75GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಗಳನ್ನು ಜಿಯೋ ಒದಗಿಸುತ್ತಿದೆ. 75GB ಡೇಟಾ ಬಳಕೆಯ ನಂತರ ಬಳಕೆದಾರರು ಪ್ರತಿ 1 ಜಿಬಿ ಡೇಟಾಗೆ 10 ರೂ. ಪಾವತಿಸಬೇಕಾಗುತ್ತದೆ. ಆದರೆ, ದೇಶದ ನಂ.1 ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಗಳಲ್ಲಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ ಒಳಗೊಂಡ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಒದಗಿಸುವ ಮೂಲಕ ಹೆಚ್ಚು ಜನರನ್ನು ಆಕರ್ಷಿಸಿತ್ತು. ಆದರೆ, ಇದೀಗ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನಿಲ್ಲಿಸುವ ಮೂಲಕ ಬಿಗ್ ಶಾಕ್ ನೀಡಿದೆ. ವಿಶ್ವಕಪ್ ಟಿ20 ಕ್ರಿಕೆಟ್ ನಡೆಯುತ್ತಿರುವ ಈ ವೇಳೆಗೆ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ನಿಲ್ಲಿಸಲಾಗಿದ್ದು, ಕ್ರಿಕೆಟ್ ಲೈವ್ ಮ್ಯಾಚ್ ವೀಕ್ಷಿಸುವ ಸಲುವಾಗಿಯೇ ಜಿಯೋ ಪೋಸ್ಟ್‌ಪೇಡ್ ಗ್ರಾಹಕ ಚಂದಾದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ಕಳೆದುಕೊಂಡಿರುವ ಜಿಯೋವಿನ ಪ್ರಮುಖ ಪೋಸ್ಟ್‌ಪೇಯ್ಡ್ ಯೋಜನೆಗಳ ಮಾಹಿತಿ ಈ ಕೆಳಗಿನಂತಿದೆ.

ಜಿಯೋ ಒದಗಿಸುತ್ತಿರುವ ಎರಡನೇ ಪೋಸ್ಟ್‌ಪೇಯ್ಡ್ ಯೋಜನೆಯು 599 ರೂಪಾಯಿಗಳಿಗೆ ಲಭ್ಯವಿದೆ. ಈ 599 ರೂ. ಯೋಜನೆಯಲ್ಲಿ ಬಳಕೆದಾರರು 200GB ರೋಲ್‌ಓವರ್ ಡೇಟಾದೊಂದಿಗೆ ತಿಂಗಳಿಗೆ ಒಟ್ಟು 100GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 SMS ಗಳನ್ನು ಪಡೆಯುತ್ತಾರೆ. 100GB ಡೇಟಾ ಬಳಕೆಯ ನಂತರ, ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಈ ಯೋಜನೆಯು ಒಂದು ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಒದಗಿಸುತ್ತಿರುವುದು ಪ್ರಮುಖ ವಿಶೇಷತೆ ಎಂದು ಹೇಳಬಹುದು. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.

ಜಿಯೋವಿನ ಮೂರನೇ ಹಾಗೂ ಅತ್ಯಂತ ಸಮಂಜಸವಾದ ಯೋಜನೆಯು 799 ರೂ.ಗಳಲ್ಲಿ ಲಭ್ಯವಿದೆ. ಈ 799 ರೂ.ಯೋಜನೆಯು 200GB ಡೇಟಾ ರೋಲ್‌ಓವರ್ ಅನ್ನು ಅನುಮತಿಸುವ ಒಟ್ಟು 150GB ಡೇಟಾವನ್ನು ನೀಡುತ್ತದೆ. 150GB ಡೇಟಾ ಪೂರ್ಣಗೊಂಡ ನಂತರ ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಗಳನ್ನು ನೀಡುವ ಈ ಯೋಜನೆಯೊಂದಿಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.

ಜಿಯೋವಿನ ನಾಲ್ಕನೇ ಹಾಗೂ ಕುಟುಂಬ ಯೋಜನೆಯು 999 ರೂ.ಗಳಲ್ಲಿ ಲಭ್ಯವಿದೆ. ಈ 999 ರೂ.ಯೋಜನೆಯು 500GB ಡೇಟಾ ರೋಲ್‌ಓವರ್ ಅನ್ನು ಅನುಮತಿಸುವ ಒಟ್ಟು 200GB ಡೇಟಾವನ್ನು ನೀಡುತ್ತದೆ. 200GB ಡೇಟಾ ಪೂರ್ಣಗೊಂಡ ನಂತರ ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಗಳನ್ನು ನೀಡುವ ಈ ಯೋಜನೆಯೊಂದಿಗೆ ಮೂರು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.