Home Interesting ನಿನ್ನ ಲ್ಯಾಪ್ ಟ್ಯಾಪ್ ಕದ್ದಿರುವೆ – ಕ್ಷಮಾಪಣೆ ಕೋರಿ ಕಳ್ಳನೋರ್ವನ ಇಮೇಲ್ !!!

ನಿನ್ನ ಲ್ಯಾಪ್ ಟ್ಯಾಪ್ ಕದ್ದಿರುವೆ – ಕ್ಷಮಾಪಣೆ ಕೋರಿ ಕಳ್ಳನೋರ್ವನ ಇಮೇಲ್ !!!

Hindu neighbor gifts plot of land

Hindu neighbour gifts land to Muslim journalist

ಕಾಲ ಬದಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹೌದು, ನಿಜ ಎಷ್ಟು ಬದಲಾಗಿದೆ ಎಂದರೆ ಕಳ್ಳರು ಈಗ ದಯಾ ಕರುಣಾಮಯಿಯಾಗುತ್ತಿದ್ದಾರೆ, ಅಲ್ಲದೆ ಪ್ರಾಮಾಣಿಕರಾಗಿದ್ದಾರೆ ಎಂದರೂ ಸುಳ್ಳಾಗದು. ವಿಚಿತ್ರವಾಗಿದೆ ಅಲ್ಲಾ ಕೇಳೋದಕ್ಕೆ. ಆದ್ರೆ ಇದು ನಿಜ ಇಲ್ಲೊಬ್ಬ ಕಳ್ಳ ಲ್ಯಾಪ್ ಟಾಪ್ ಕದ್ದು ಅದರಲ್ಲಿದ್ದ ಮಾಲೀಕನ ಇಮೇಲ್ ಗೆ ನಾನು ನಿಮ್ಮ ಲ್ಯಾಪ್ ಟಾಪ್ ಕದ್ದಿದ್ದೇನೆಂದು ಕ್ಷಮೆಯಾಚಿಸಿ ಮೇಲ್ ಕಳಿಸಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಝ್ವಾಲಿ ಟಿಕ್ಸೋ ಎಂಬಾತನ ಲ್ಯಾಪ್ ಟಾಪ್ ಅನ್ನು ಕಳ್ಳನೊಬ್ಬ ರಾತ್ರಿ ಕಳವು ಮಾಡಿದ್ದ. ನಂತರ ಮಾಲೀಕನ ಇಮೇಲ್‍ನ್ನು ಬಳಸಿ ಮಾಲೀಕನಿಗೆ ಮೇಲ್ ಮಾಡಿದ್ದಾನೆ. ಅಷ್ಟಕ್ಕೂ ಆ ಮೇಲ್ ನಲ್ಲಿ ಏನಿತ್ತು ಗೊತ್ತಾ?

ಬ್ರೋ ಹೌಜಿತ್, ನಾನುಜೀವನ ಸಾಗಿಸಲು ಕಷ್ಟಪಡುತ್ತಿದ್ದೇನೆ. ನನಗೆ ಹಣದ ಅವಶ್ಯಕತೆಯಿದ್ದ ಕಾರಣ ನಾನು ನಿಮ್ಮ ಲ್ಯಾಪ್ ಟಾಪ್ ಅನ್ನು ಕದಿಯುವ ಪರಿಸ್ಥಿತಿ ಬಂದಿತು. ನೀವು ಕೆಲಸದಲ್ಲಿ ಬ್ಯುಸಿರುವುದನ್ನು ನೋಡಿದೆ ಅದೇ ಸಂದರ್ಭದಲ್ಲಿ ನಾನು ನಿಮ್ಮ ಲ್ಯಾಪ್‍ಟಾಪ್‍ನ್ನು ಕಳ್ಳತನ ಮಾಡಿದೆ. ನಿಮಗೆ ಯಾವುದಾದರೂ ಅಗತ್ಯವಿರುವ ಫೈಲ್‍ಗಳಿದ್ದರೆ ದಯವಿಟ್ಟು ನನಗೆ ಸೋಮವಾರ 12 ಗಂಟೆಗೆ ಮೊದಲು ತಿಳಿಸಿ. ನಾನು ಆ ಫೈಲ್‍ನ್ನು ನಿಮಗೆ ಕಳುಹಿಸುತ್ತೇನೆ. ಏಕೆಂದರೆ ಈಗಾಗಲೇ ನಿಮ್ಮ ಲ್ಯಾಪ್‍ಟಾಪ್‍ನ್ನು ಮಾರಾಟ ಮಾಡಲು ಗಿರಾಕಿಯನ್ನು ಹುಡುಕಿದ್ದೇನೆ. ಲ್ಯಾಪ್‍ಟಾಪ್ ಕದ್ದಿರುವುದಕ್ಕೆ ನನ್ನನ್ನು ಕ್ಷಮಿಸಿ ಎಂದು ಇಮೇಲ್ ಮೂಲಕ ಕ್ಷಮೆ ಕೋರಿದ್ದಾನೆ.

ಝ್ವಾಲಿ ಟಿಕ್ಸೋ ಈ ಇಮೇಲ್‍ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಗೆ ಯಾರಾದರೂ ಕೆಲಸ ನೀಡಲು ಸಾಧ್ಯವಾದರೆ, ದಯವಿಟ್ಟು ನೀಡಿ ಎಂದು ಬರೆಯುವ ಮೂಲಕ ಕಳ್ಳನಿಗೆ ಸಹಾಯ ಮಾಡುವ ಯೋಚನೆಯಲ್ಲಿದ್ದಾರೆ.