ಕಡಬ: ಹುತಾತ್ಮ ಕರಸೇವಕರ ಬಲಿದಾನದ ನೆನಪಿಗಾಗಿ ನಾಳೆ ಬೃಹತ್ ರಕ್ತದಾನ ಶಿಬಿರ!!

ಕಡಬ:ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕಡಬ ಪ್ರಖಂಡ ಹಾಗೂ ಸರಸ್ವತಿ ವಿದ್ಯಾಲಯ ಪ್ರೌಢ ಶಾಲಾ ದಶಮಾನೋತ್ಸವ ಸಮಿತಿ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಬಲಿಯಾದ ಹುತಾತ್ಮರ ಬಲಿದಾನದ ನೆನಪಿಗಾಗಿ ನಾಳೆ ನವೆಂಬರ್ 02 ರ ಬುಧವಾರ ಕಡಬದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಕಡಬದ ಸರಸ್ವತಿ ವಿದ್ಯಾಲಯ ವಿದ್ಯಾನಗರದಲ್ಲಿ ಆಯೋಜಿಸಲಾಗಿರುವ ಶಿಬಿರದ ಉದ್ಘಾಟನೆಯನ್ನು ಅಶ್ವಿನಿ ಫ್ಯಾನ್ಸಿ ಮತ್ತು ಫೂಟ್ ವೇರ್ ಮಾಲಕ ಶ್ರೀಧರ ಮಣಿಯಾಣಿ ನೆರವೇರಿಸಲಿದ್ದು, ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಗೋಪಾಲ ಗೌಡ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ,ವಿ.ಹಿಂ.ಪ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಮಾತೃಶಕ್ತಿ ದುರ್ಗಾವಾಹಿನಿಯ ಪ್ರಮುಖ್ ಪ್ರಮೀಳಾ ಲೋಕೇಶ್,ಸರಸ್ವತಿ ವಿದ್ಯಾಲಯ ಪ್ರೌಢ ಶಾಲಾ ದಶಮಾನೋತ್ಸವ ಸಮಿತಿಯ ಕೌಶಿಕ್ ಕೆ.ಎಸ್ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಮತ್ತಿತರರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ, ಶಿಬಿರವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Leave A Reply

Your email address will not be published.