Hombale Films : ಸೂರ್ಯ ಜೊತೆ ಹೊಂಬಾಳೆ ಸಿನಿಮಾ | ಏನ್ರೀ ಈ ಸಿನಿಮಾ….ಸಾಮಾನ್ಯದಂತೂ ಅಲ್ವೇ ಅಲ್ಲ!!!

ಪ್ರಪಂಚದಲ್ಲಿ ಜನ ಜೀವನ ಸ್ಪರ್ಧೆ ರೀತಿಯಲ್ಲಿ ವೇಗವಾಗಿ ಸಾಗುತ್ತಿದೆ. ಜನರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಒಂದಿಷ್ಟು ಸಮಯ ಮನೋರಂಜನೆಗೆ ಮೀಸಲಿಟ್ಟು ಕಾಲ ಕಳೆಯುವುದು ಕ್ಮಮಿಯಿಲ್ಲ ಅನ್ನೋದು ಚಿತ್ರರಂಗದ ಬೆಳವಣಿಗೆ ಮೂಲಕ ತಿಳಿದುಕೊಳ್ಳಬಹುದು.

ಕೆಲವೇ ವರ್ಷಗಳಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಕರ್ನಾಟಕ ಹೊಂಬಾಳೆ ಫಿಲಮ್ಸ್‌ ಬೆಳೆದು ನಿಂತಿದೆ. ಮೊದಲಿಗೆ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದ ಹೊಂಬಾಳೆ, ಇದೀಗ ಬೇರೆ ಭಾಷೆಗಳಲ್ಲಿಯೂ ಸೂಪರ್ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತಿದೆ.

ಈಗಾಗಲೇ ಮಲಯಾಳಂನಲ್ಲಿ ಸಿನಿಮಾ ಘೋಷಿಸಿರುವ ಹೊಂಬಾಳೆ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾ ಮಾಡಲು ಸಜ್ಜಾಗಿದೆ. ವಿಶೇಷವೆಂದರೆ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆ ಹೊಂಬಾಳೆ ಸಿನಿಮಾ ಮಾಡಲು ಸಜ್ಜಾಗಿದೆಯಂತೆ.

1962 ರಲ್ಲಿ ಮೊದಲ ಬಾರಿಗೆ ಪಬ್ಲಿಷ್ ಆದ ‘ದಿ ಸ್ಟೀಲ್ ಕ್ಲಾವ್’ ಕಾಮಿಕ್ಸ್ ಅನ್ನು ಆಧರಿಸಿ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದ್ದು, ಅದ್ಧೂರಿ ಸಿನಿಮಾ ಇದಾಗಿರಲಿದೆ. ಸಿನಿಮಾದಲ್ಲಿ ನಾಯಕ ನಟರಾಗಿ ಸೂರ್ಯ ನಟಿಸಲಿದ್ದು, ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ ‘ಕಾಂತಾರ’!ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ ‘ಕಾಂತಾರ’!
ಸೂರ್ಯ ಜೊತೆಗೆ ಸಾಮಾನ್ಯ ಸಿನಿಮಾ ಮಾಡುತ್ತಿಲ್ಲ ಹೊಂಬಾಳೆ, ಬದಲಿಗೆ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಹಾಲಿವುಡ್‌ನಲ್ಲಿ ಮಾರ್ವೆಲ್ ಮಾದರಿಯಲ್ಲಿಯೇ ಕಾರ್ಟೂನ್ ಅನ್ನು ಸೂಪರ್ ಹೀರೋ ಸಿನಿಮಾ ಮಾಡಲು ಮುಂದಾಗಿದೆ ಹೊಂಬಾಳೆ.

ಹಾಗೂ ಇಂಗ್ಲೀಷ್ ಕಾರ್ಟೂನ್ ಅನ್ನು ತಮಿಳಿನಲ್ಲಿ ಸಿನಿಮಾ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ‘ದಿ ಸ್ಟೀಲ್ ಕ್ಲಾವ್’ ತಮಿಳುನಾಡಿನಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಕಾರ್ಟೂನ್. ತಮಿಳುನಾಡು ಮಾತ್ರವೇ ಅಲ್ಲದೆ ಕೇರಳ, ಆಂಧ್ರಗಳಲ್ಲಿಯೂ ಸ್ಟೀಲ್ ಕ್ಲಾವ್ ಸ್ಥಳೀಯ ಭಾಷೆಗಳಲ್ಲಿ ಸ್ಥಳೀಯ ಹೆಸರಿನಲ್ಲಿ ಬಹಳ ಜನಪ್ರಿಯವಾಗಿದೆ. ತಮಿಳಿನಲ್ಲಿ ‘ಇರುಂಬುಕೈ ಮಾಯಾವಿ’ ಎಂದು, ತೆಲುಗಿನಲ್ಲಿ ‘ಉಕ್ಕು ಕೈ ಮಾಯಾವಿ’ ಎಂಬ ಹೆಸರಿನಲ್ಲಿ ನಿರ್ಮಾಣದಲ್ಲಿತ್ತು.

ಇನ್ನು ಲೋಕೇಶ್ ಕನಕರಾಜನ್ ತಮಿಳಿನಲ್ಲಿ ಸರಣಿ ಹಿಟ್ ನೀಡಿರುವ ನಿರ್ದೇಶಕ. ಇದೀಗ ಸೂರ್ಯ ವಿಲನ್ ಆಗಿ ನಟಿಸುತ್ತಿರುವ ‘ವಿಕ್ರಂ’ ಸಿನಿಮಾದ ಮುಂದಿನ ಭಾಗದ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. ಸೂರ್ಯ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ತಮ್ಮ ಈಗಿನ ಸಿನಿಮಾಗಳಿಂದ ಬಿಡುವು ಪಡೆದುಕೊಂಡ ಬಳಿಕವಷ್ಟೆ ಕಾರ್ಟೂನ್ ಆಧರಿತ ಸಿನಿಮಾ ಸೆಟ್ಟೇರಲಿದೆ. ಹೊಂಬಾಳೆ ಒಟ್ಟೊಟ್ಟಿಗೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಮಾಹಿತಿ ಇದೆ.

Leave A Reply

Your email address will not be published.