Microsoft Surface laptop SE : ವಿದ್ಯಾರ್ಥಿಗಳಿಗೆಂದೇ ಬಿಡುಗಡೆಯಾಗುತ್ತಿದೆ ಅತಿ ಕಡಿಮೆ ಬೆಲೆಯ ಮೈಕ್ರೋಸಾಫ್ಟ್ ಲ್ಯಾಪ್‌ಟಾಪ್!!!
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ಅಲ್ಲದೆ ಶಿಕ್ಷಣ ಸಹ ತಂತ್ರಜ್ಞಾನ ಮೂಲಕವೇ ನಡೆಸಲಾಗುತ್ತಿದೆ. ಅಂದರೆ ಯಾವ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಇಲ್ಲದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಇದೀಗ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬಹಳಷ್ಟು ಅಭಿವೃದ್ಧಿಯಾಗುವುದನ್ನು ನಾವು ಗಮನಿಸಬಹುದು. ಇಲ್ಲಿ ಪ್ರತಿಯೊಂದು ತಂತ್ರಜ್ಞಾನಗಳು ಅಪ್‌ಡೇಟ್ ಆಗುತ್ತಿರುತ್ತದೆ. ಈ ರೀತಿ ಬೆಳವಣಿಗೆಯಿಂದ ಗ್ರಾಹಕರು ಕೂಡ ತಮ್ಮ ತಂತ್ರಜ್ಞಾನಗಳ ಬಳಕೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಿಂದ ಲಾಕ್‌ಡೌನ್ ಆದಾಗಿನ ನಂತರ ಈ ಲ್ಯಾಪ್‌ಟಾಪ್ ಸ್ಮಾರ್ಟ್‌ಫೋನ್‌ನಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಕಾಲೇಜುಗಳು ಮತ್ತು ಕಚೇರಿಗಳು ಎಲ್ಲಾ ಕೆಲಸಗಳನ್ನು ಮನೆಯಿಂದಲೇ ಮಾಡಲಾಗುತ್ತಿದೆ.
ಆದರೆ ಎಲ್ಲರಿಗೂ ಅಧಿಕ ಬೆಲೆ ಪಾವತಿಸಿ ಲ್ಯಾಪ್‌ಟಾಪ್ ಕೊಳ್ಳಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮೈಕ್ರೋಸಾಫ್ಟ್ ಶಾಲಾ ವಿದ್ಯಾರ್ಥಿಗಳಿಗಾಗಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಕಡಿಮೆ ದರದಲ್ಲಿ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.
ಮೈಕ್ರೋಸಾಫ್ಟ್ ಲ್ಯಾಪ್‌ಟಾಪ್‌ನ ವಿಶೇಷತೆಗಳು:
4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಈ ಇತ್ತೀಚಿನ ಮೈಕ್ರೋಸಾಫ್ಟ್ ಲ್ಯಾಪ್‌ಟಾಪ್‌ನ ಭಾರತದಲ್ಲಿ ಸುಮಾರು 18,400 ರೂಪಾಯಿಗೆ ಖರೀದಿಸಬಹುದು. ಅದೇ ಸಮಯದಲ್ಲಿ, ಅದರ ಎರಡನೇ ವರ್ಷನ್ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಅನ್ನು ಒಳಗೊಡಿದೆ.
ಈ ಲ್ಯಾಪ್‌ಟಾಪ್ ಅನ್ನು ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಮಾತ್ರ ತಯಾರಿಸಲಾಗಿದೆ. ಇತ್ತೀಚಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮ್, Windows 11 SE ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್ Chrome ಮತ್ತು Zoom ನಂತಹ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಇದರಲ್ಲಿ ಮೈಕ್ರೋಸಾಫ್ಟ್ ಸ್ಟೋರ್ ನಿಂದ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವಿಲ್ಲ. ಇದಲ್ಲದೆ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಕೂಡ ಇದರಲ್ಲಿ ಡೌನ್‌ಲೋಡ್ ಮಾಡಲಾಗುವುದಿಲ್ಲ.
• ಈ ಮೈಕ್ರೋಸಾಫ್ಟ್ ಲ್ಯಾಪ್‌ಟಾಪ್ 11.6-ಇಂಚಿನ ಡಿಸ್ಪ್ಲೇಯೊಂದಿಗೆ 1,366 x 768 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರಲಿದೆ ಎಂದು ಮಾಹಿತಿ ಲಭ್ಯವಾಗಿದೆ.
• ಇದರಲ್ಲಿ ಬಳಕೆದಾರರು 135 ಡಿಗ್ರಿಗಳಷ್ಟು ತೆರೆದ ಕೋನದ ಹಿಂಜ್ ಅನ್ನು ಸಹ ಪಡೆಯುತ್ತಾರೆ.
• Windows 11 SE ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್ ಗುಣಮಟ್ಟದ ಬ್ಯಾಟರಿಯೊಂದಿಗೆ ಬರುತ್ತದೆ.
• ಇದಲ್ಲದೆ ಒಮ್ಮೆ ಫುಲ್ ಚಾರ್ಜ್ ಮಾಡಿದರೆ, ಬಳಕೆದಾರರು ಈ ಲ್ಯಾಪ್‌ಟಾಪ್ ಅನ್ನು 16 ಗಂಟೆಗಳ ಕಾಲ ಬಳಸಬಹುದು ಎಂದು ಕಂಪನಿ ಹೇಳಿದೆ.
ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳು :
ವಿದ್ಯಾರ್ಥಿಗಳು ಆರಾಮವಾಗಿ ತರಗತಿಗಳಿಗೆ ಹಾಜರಾಗಲು ಸಕ್ರಿಯಗೊಳಿಸಲು, ಈ ಲ್ಯಾಪ್‌ಟಾಪ್ ವೀಡಿಯೊ ಕರೆಗಳಿಗಾಗಿ ವಿಶೇಷ 1MP ಮತ್ತು 720 ಪಿಕ್ಸೆಲ್‌ಗಳ HD ಕ್ಯಾಮೆರಾವನ್ನು ಹೊಂದಿದೆ.
• ಮೈಕ್ರೊಸಾಫ್ಟ್ ಲ್ಯಾಪ್‌ಟಾಪ್ Intel Celeron N4020 ಅಥವಾ N4120 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
• ಆಡಿಯೋಗಾಗಿ, ಒಂದೇ ಡಿಜಿಟಲ್ ಮೈಕ್ರೊಫೋನ್ ಜೊತೆಗೆ 2W ಸ್ಟೀರಿಯೋ ಸ್ಪೀಕರ್ ಅನ್ನು ಸಹ ನೀಡಲಾಗುತ್ತಿದೆ.
• ನೆಟ್‌ವರ್ಕ್ ಸಂಪರ್ಕಕ್ಕಾಗಿ, ವೈಫೈ, ಬ್ಲೂಟೂತ್, ಯುಎಸ್‌ಬಿ ಟೈಪ್-ಎ ಪೋರ್ಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಿಸಿ ಕನೆಕ್ಟರ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ.
ಈ ಲ್ಯಾಪ್‌ಟಾಪ್ ಮುಖ್ಯವಾಗಿ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.