ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ

Share the Article

ಸುಬ್ರಹ್ಮಣ್ಯ, ಅ.30: ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂಬವರು ಅ.29 ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾರತಿ ಅವರ ಪತಿ ದೂರು ನೀಡಿದ್ದು ಅ.29 ಮದ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಹೋಗಿ ಅವರ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಎಂಬವರ ಚಿಕಿತ್ಸೆಯ ಬಗ್ಗೆ ಕಾಣಿಯೂರು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪತಿಯ ತಾಯಿ ಮತ್ತು ಅತ್ತೆಗೆ ಚಿಕಿತ್ಸೆ ಕೊಡಿಸಿ ವಾಪಸ್ಸು ರಾತ್ರಿ ಮನೆಗೆ ಬಂದ ವೇಳೆ ದೂರುದಾರರ ಪತ್ನಿ ಮನೆಯಲ್ಲಿ ಇಲ್ಲದೇ ಇರುವುದು ಕಂಡುಬಂದಿದೆ. ಬಳಿಕ ತಂದೆ ಹಾಗೂ ಮಕ್ಕಳಲ್ಲಿ ವಿಚಾರಿಸಿದಾಗ ಅವರು ಎಲ್ಲಿಯೋ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾಳೆ ಎಂದು ತಿಳಿಸಿದ್ದು, ಬಳಿಕ ಮಹಿಳೆಯ ಪೋನ್ ಕರೆ ಮಾಡಿದಾಗ ಪೋನ್ ಸ್ವೀಚ್ ಆಫ್ ಆಗಿರುತ್ತದೆ.

ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದಾಗ ಎಲ್ಲಿಯೂ ಕಂಡು ಬಂದಿಲ್ಲ ಎಂದು ಮಹಿಳೆಯ ಪತಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply