ಕ್ಯಾನ್ಸರ್‌ನಿಂದ ಕಣ್ಣನ್ನು ಕಳೆದುಕೊಂಡ ವ್ಯಕ್ತಿಯಿಂದ ತಯಾರಾಯ್ತು ಬ್ಯಾಟರಿ ಕಣ್ಣು!!
ಇಂದಿನ ಯುವಜನತೆಯಲ್ಲಿ ಪ್ರತಿಭೆಗಳಿಗೆ ಏನೂ ಕಮ್ಮಿ ಇಲ್ಲ. ಒಂದಲ್ಲ ಒಂದು ವಿಷಯದಲ್ಲಿ ಸಾಧನೆಯನ್ನು ಮಾಡುತ್ತಲೇ ಇದ್ದಾರೆ. ಪ್ರತಿಭೆಗಳಿಗೆ ಉತ್ತಮ ಹಾದಿಯನ್ನು ತೋರಿಸುತ್ತಿರುವುದು ಸೋಶಿಯಲ್ ಮೀಡಿಯಾ. ಹೌದು. ಅದೆಷ್ಟೋ ಜನರು ತಮ್ಮಲ್ಲಿರುವ ಟ್ಯಾಲೆಂಟ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದರ ಮೂಲಕ ಫೇಮಸ್ ಆಗಿದ್ದಾರೆ.
ಅದ್ರಂತೆ ಇದೀಗ ಒಬ್ಬ ಕ್ಯಾನ್ಸರ್ ವ್ಯಕ್ತಿಯ ಸಾಧನೆಯ ವಿಡಿಯೋ ವೈರಲ್ ಆಗಿದ್ದು, ಛಲ ಇದ್ದರೆ ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ಸಾಧಿಸಿ ತೋರಿಸುತ್ತಿದೆ. ಹೌದು. ಅಮೆರಿಕದ 33 ವರ್ಷದ ವ್ಯಕ್ತಿ ಬ್ರಿಯಾನ್ ಸ್ಟಾನ್ಲಿ ಎನ್ನುವವರು ಕ್ಯಾನ್ಸರ್‌ನಿಂದ ಕಣ್ಣನ್ನು ಕಳೆದುಕೊಂಡಿದ್ದರು. ಆದರೆ, ಇವರು ಒಂದು ಕಣ್ಣು ಹೋಯಿತು ಎಂದು ಹತಾಶೆಗೆ ಒಳಗಾಗದೆ ತನ್ನದೇ ಆದ ಕೃತಕ ಕಣ್ಣನ್ನು ಸೃಷ್ಟಿಸಿ ಕೊಂಡಿದ್ದು, ಬ್ಯಾಟರಿ ಕಣ್ಣನ್ನು ತಯಾರಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬ್ರಿಯಾನ್ ಸ್ಟಾನ್ಲಿ ತನ್ನ ಬುದ್ಧಿವಂತಿಕೆ, ಕೌಶಲ್ಯದಿಂದ ತನ್ನ ಕಣ್ಣುಗುಡ್ಡೆಯನ್ನು ಸಂಪೂರ್ಣವಾಗಿ ಬ್ಯಾಟರಿಯನ್ನಾಗಿ ಪರಿವರ್ತಿದುವ ಮೂಲಕ ಪ್ರಾಸ್ಥೆಟಿಕ್ ಐ ರಚಿಸಿದ್ದಾನೆ. ವ್ಯಕ್ತಿಯ ಕಣ್ಣುಗಳು ಥೇಟ್ ಟಾರ್ಚ್‌ನಂತೆ ಕಾಣುತ್ತವೆ. ಸ್ಟಾನ್ಲಿ ಕಣ್ಣನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡು ‘ಟೈಟಾನಿಯಂ ಸ್ಕಲ್ ಲ್ಯಾಂಪ್’ ಕತ್ತಲೆಯಲ್ಲಿ ಓದಲು ಸೂಕ್ತವಾಗಿದೆ ಎಂದು ಶೀರ್ಷಿಕೆ ಬರೆದು ಕೊಂಡಿದ್ದಾರೆ.
ಈ ಕಣ್ಣನ್ನು ಸ್ಟಾನ್ಲಿ ‘ಟೈಟಾನಿಯಂ ಸ್ಕಲ್ ಲ್ಯಾಂಪ್’ ಎಂದು ಹೆಸರಿಸಿದ್ದಾರೆ ಮತ್ತು ಇದು ಒಂದು ಚಾರ್ಜ್ ಅಥವಾ ಬ್ಯಾಟರ್‌ನಿಂದ 20 ಗಂಟೆಗಳ ಮೌಲ್ಯದ ಬೆಳಕನ್ನು ಪಡೆಯಬಹುದು ಎಂದು ಹೇಳಿದರು. ಈ ಬ್ಯಾಟರಿ ಬಿಸಿಯಾಗುವುದಿಲ್ಲ ಮತ್ತು ಅದರ ಬ್ಯಾಟರಿ ಬಾಳಿಕೆ 20 ಗಂಟೆಗಳಿರುತ್ತದೆ ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಆ ಕಣ್ಣಿನ ಬ್ಯಾಟರಿಯ ಬಣ್ಣವನ್ನು ಸಹ ಬದಲು ಮಾಡಲು ಸಾಧ್ಯವಾಗುತ್ತದೆ ಎಂದು ತಮ್ಮ ಟಾರ್ಚ್ ಕಣ್ಣಿನ ಬಗ್ಗೆ ಹೇಳಿದ್ದಾರೆ.
ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಕೇವಲ 2 ದಿನಗಳಲ್ಲಿ, 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಮಂದಿ ಬ್ರಿಯಾನ್ ಸ್ಟಾನ್ಲಿ ಬುದ್ಧಿವಂತಿಕೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನೀವೊಬ್ಬ ಉತ್ತಮ ಸಾಧಕ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಇದು ನಿಮ್ಮ ಸ್ವಂತ ಬೆಳಕಿನ ಮೂಲ ಎಂದಿದ್ದಾರೆ. ಇನ್ನೂ ಕೆಲವರು ನೀವು ಟಾರ್ಚ್ ಇಲ್ಲದೇ ಕತ್ತಲಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ತಮಾಷೆಯಾಗಿ ಬರೆದಿದ್ದಾರೆ. ಒಟ್ಟಾರೆ, ಈತನ ಸಾಧನೆಗೆ ಮೆಚ್ಚುಗೆಯ ಪೂರವೇ ಹರಿದುಬಂದಿದೆ.