BIG NEWS : KSRTC ಬಸ್ ಲಗೇಜ್ ನಿಯಮದಲ್ಲಿ ಬದಲಾವಣೆ !!!
ಜನರ ಸಂಚಾರಕ್ಕೆ ನೆರವಾಗುವ ಕೆ ಎಸ್ ಆರ್ ಟಿ ಸಿಯು ಹೊಸ ನಿಯಮಾವಳಿ ಜಾರಿಗೆ ಮುಂದಾಗಿದೆ. ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ತರಲಾಗಿದೆ.
ಇದರ ಕುರಿತಾದ ಪರಿಷ್ಕೃತ ಸುತ್ತೋಲೆಯಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ ಲಗೇಜ್ ಗಳನ್ನು ಒಯ್ಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ನಾಯಿಗೆ ಪುಲ್ ಟಿಕೆಟ್, ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿಯ ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಯ ಅನ್ವಯ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವುದರ ಜೊತೆಗೆ ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಿದೆ.
ಈ ಸಂಬಂಧ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಹಿತ, ಪ್ರಯಾಣಿಕ ರಹಿತ ಲಗೇಜ್ ಸಾಗಣೆ ಬಗ್ಗೆ ಅವಕಾಶ ಕಲ್ಪಿಸಲಾಗಿದೆ. ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಲಗೇಜ್ ಸಾಗಾಣೆಯ ನಿಯಮಾವಳಿಗಳನ್ನು ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ, ವಿಧಿಸಲಾಗುತ್ತಿದ್ದಂತಹ ದರದಲ್ಲಿ ಬದಲಾವಣೆ ಮಾಡಲಾಗಿದೆ.
ಇನ್ಮುಂದೆ ನಾಯಿ, ನಾಯಿ ಮರಿಗೆ ಅರ್ಧ ಟಿಕೇಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸಾಮಾನ್ಯ, ವೇಗದೂತ, ನಗರ, ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ.
ಈ ಮೊದಲು ಅವಕಾಶಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ಯುವ ಪ್ರಯಾಣಿಕರಿಗೆ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ ಹೊರತುಪಡಿಸಿ, ಉಳಿದ ಲಗೇಜ್ ಗೆ ದರ ವಿಧಿಸಲಾಗುತ್ತಿತ್ತು.
ಇದೀಗ ನಿಯಮದಲ್ಲಿ ಮಾರ್ಪಾಡು ಮಾಡಲಾಗಿದ್ದು, ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಸೇರಿದಂತೆ ಬ್ಯಾಗ್, ಸೂಟ್ ಕೇಸ್, ಕಿಟ್ ಬ್ಯಾಗ್, ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು ಉಚಿತವಾಗಿ ಪರಿಮಿತಿಯ 30 ಕೆಜಿ ಒಳಗೆ ಪರಿಗಣಿಸುವಂತೆ ತಿಳಿಸಲಾಗಿದೆ.
( ದಿನಸಿ, ತೆಂಗಿನ ಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮುಕ್ಸರ್ ಗ್ರೈಂಡರ್ )ಮೊದಲಾದ ವಸ್ತುಗಳನ್ನು 30ಕೆಜಿ ಯ ಒಳಗೆ ಪರಿಗಣಿಸುವಂತೆ ತಿಳಿಸಲಾಗಿದೆ.
30 ಕೆಜಿಗೂ ಅಧಿಕವಿದ್ದಲ್ಲಿ ಉಚಿತ ಸಾಗಣೆಯ 30 ಕೆಜಿ ಹೊರತುಪಡಿಸಿ ಉಳಿದ ಲಗೇಜ್ ಗೆ ನಿಯಮಾವಳಿಯಂತೆ ಲಗೇಜ್ ದರ ವಿಧಿಸುವಂತೆ ತಿಳಿಸಲಾಗಿದೆ. ಇದನ್ನು ಹೊರತು ಪಡಿಸಿ ಸಾಮಾನ್ಯ ಸ್ಥಾಯಿ ಆದೇಶ, ತಿದ್ದುಪಡಿ ಆದೇಶ, ಇತಾರೆ ಆದೇಶಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.