CET : ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ | ಹೆಚ್ಚಿನ ವಿವರ ಇಲ್ಲಿದೆ

ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಈಗಾಗಲೇ ನಡೆದ ಯುಜಿಸಿಇಟಿ-2022ರ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದೆ.

 

ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ, ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಯುಜಿಸಿಇಟಿ-2022 ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಸಿಇಟಿಯಲ್ಲಿ ರ‌್ಯಾಂಕ್ ಪಡೆದ ಅಭ್ಯರ್ಥಿಗಳು ಅಧಿಕೃತ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ನಲ್ಲಿ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು.

ಅಣಕು ಸೀಟು ಹಂಚಿಕೆಯನ್ನು ಸಿಇಟಿ ಫಲಿತಾಂಶಗಳ ಆಧಾರದ ಅನ್ವಯ ಕಾಲೇಜು ಮತ್ತು ಸಂಸ್ಥೆಗಳ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಲಿದ್ದು, ಫಲಿತಾಂಶದ ನಂತರವು ಅಭ್ಯರ್ಥಿಗಳು ತಮ್ಮ ಅಣಕು ಸೀಟು ಹಂಚಿಕೆಯಲ್ಲಿ ಬದಲಾವಣೆ ಮಾಡಲು ಅವಕಾಶವಿದೆ.

ಯುಜಿಸಿಇಟಿ -2022 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಚೆಕ್ ಮಾಡುವ ವಿಧಾನ ಹೀಗಿದೆ;

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಬೇಕು. ಬಳಿಕ ಕೆಇಎ ವೆಬ್‌ಸೈಟ್‌ ಮುಖಪುಟದಲ್ಲಿ ಯುಜಿಸಿಇಟಿ- 2022 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮಗೆ ಕೆಇಎ ಮತ್ತೊಂದು ಪುಟ ಓಪನ್ ಆಗುತ್ತದೆ. ಆ ಪುಟದಲ್ಲಿ ಯುಜಿಸಿಇಟಿ-2022 ರ ನಂಬರ್ ನೀಡಿ ‘Submit’ ಎಂಬಲ್ಲಿ ಕ್ಲಿಕ್ ಮಾಡಬೇಕು.

ಆಗ ನಿಮಗೆ ಸ್ಕ್ರೀನ್ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ. ಕೊನೆಗೆ ಅಗತ್ಯ ಕ್ರಮಗಳನ್ನು ಸೀಟು ಹಂಚಿಕೆಗೆ ಕೈಗೊಳ್ಳಬಹುದಾಗಿದೆ. ಅಭ್ಯರ್ಥಿಗಳ ಆಯ್ಕೆಗಳು, ಮತ್ತವರ ಕೆಸಿಇಟಿ ಕಾರ್ಯಕ್ಷಮತೆ ಮತ್ತು ಸೀಟುಗಳ ಲಭ್ಯತೆಯ ಆಧಾರದ ಮೇಲೆ ಕೆಸಿಇಟಿ-2022 ರ ಸೀಟು ಹಂಚಿಕೆಯಾಗಲಿದ್ದು, ಸೀಟು ಹಂಚಿಕೆಯಾದ ನಂತರ ಸೀಟುಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಆಯ್ಕೆಗಳನ್ನು ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಈಗಾಗಲೇ ತಮ್ಮಿಷ್ಟದ ಸಂಸ್ಥೆಗಳು ಮತ್ತು ವಿಷಯಗಳನ್ನು ಕೆಸಿಇಟಿ- 2022 ಪೋರ್ಟಲ್‌ ಅನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಂತಿಮ ಕೆಸಿಇಟಿ ಸೀಟು ನಿಯೋಜನೆ ಮಾಡುವ ಪರೀಕ್ಷಾ ಪ್ರಾಧಿಕಾರವು ಈಗಾಗಗಲೇ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಇದೇ ಅ. 21 ರಂದು ಪ್ರಕಟಿಸಿದೆ.

ಈ ಫಲಿತಾಂಶಗಳು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಪ್ರಾಧಿಕಾರವು ಅಂತಿಮ ಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ.

ಇನ್ನು ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಅಲ್ಲಿಯೇ ಕೆಸಿಇಟಿ ಸೀಟು ಹಂಚಿಕೆಯ ಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ.

ಅಭ್ಯರ್ಥಿಗಳು ತಮ್ಮ ಸೀಟು ನಿಯೋಜನೆಯ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಪಟ್ಟಿ ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪತ್ರವನ್ನು ಅಕ್ಟೋಬರ್ 29 ರಿಂದ ನವೆಂಬರ್ 2ರೊಳಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಪ್ರಕ್ರಿಯೆಯ ಬಳಿಕ ನಿಯಮದ ಅನ್ವಯ ಅಗತ್ಯ ದಾಖಲೆ ಮತ್ತು ಪ್ರಮಾಣಪತ್ರಗಳ ಸಹಿತವಾಗಿ ಸೀಟು ಮತ್ತು ಗೊತ್ತುಪಡಿಸಿದ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗಿದೆ.

Leave A Reply

Your email address will not be published.