ಖಾಸಗಿ ಫೋಟೋ ತೋರಿಸಿ ಮೇಕಪ್ ಮ್ಯಾನ್ ನಿಂದ ನಟಿಗೆ ಬ್ಲಾಕ್ ಮೇಲ್ | ಅನಂತರ ನಟಿ ಮಾಡಿದ್ದು ಶ್ಲಾಘನೀಯ!!!
ಸಿನಿಮಾ ನಟ ನಟಿಯರಂತೂ ಮೇಕಪ್ ಇಲ್ಲದೆ ಹೊರಹೋಗೋದೇ ಇಲ್ಲ. ಅದರಲ್ಲೂ ನಟಿಯರಲ್ಲಿ ಕೇಜಿಗಟ್ಟಲೆ ಮೇಕಪ್ ಬಳಿದುಕೊಳ್ಳುವವರೇ ಹೆಚ್ಚು. ಸಿನಿಮಾದಲ್ಲಿ ತನ್ನ ಪಾತ್ರ ಮಾಡಬೇಕಾದರೆ ನಟನೆ ಮಾತ್ರವಲ್ಲದೆ ಮೇಕಪ್ ಕೂಡ ಜನರ ಕಣ್ಮನ ಸೆಳೆಯಲು ಬೇಕಾಗುತ್ತದೆ. ನಟ-ನಟಿಯರಿಗೆಂದೇ ಮೇಕಪ್ ಮಾಡಲು ಮೇಕಪ್ ಮ್ಯಾನ್ ಗಳು ಕೂಡ ಇರುತ್ತಾರೆ. ಆದರೆ ಇಲ್ಲಿ ನಟ,ನಟಿಯರೇ ಆಶ್ಚರ್ಯ ಪಡುವಂತಹ ಘಟನೆಯೊಂದು ನಡೆದಿದೆ.
ನಟ,ನಟಿಯರು ಮೇಕಪ್ ಮ್ಯಾನ್ಗಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ ವಹಿಸಬೇಕಿದೆ. ಭುವನೇಶ್ವರಿ ನಗರ ನಿವಾಸಿ ಮಹಾಂತೇಶ್ (37) ಎಂಬಾತ ಮೇಕಪ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾತ , ಹಿರಿ ಮತ್ತು ಕಿರುತೆರೆ ನಟಿಯೊಬ್ಬರ ಅರೆನಗ್ನ ವೀಡಿಯೋ ಮುಂದಿಟ್ಟುಕೊಂಡು 30 ಲಕ್ಷ ರೂ.ಗೆ ಬ್ಲ್ಯಾಕ್ಮೇಲ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಟ್ಯಾಂಗೊ ಎಂಬ ಆ್ಯಪ್ನಲ್ಲಿ ತನ್ನ ಖಾತೆ ತೆರೆದು ಅರೆನಗ್ನ ವಿಡಿಯೋಗಳನ್ನ ಹಂಚಿಕೊಂಡಿದ್ದರು. ಈ ವಿಡಿಯೋಗಳನ್ನ ರೆಕಾರ್ಡ್ ಮಾಡಿಕೊಂಡಿದ್ದ ಓರ್ವ ಆಕೆಗೆ ಅದರ ತುಣುಕು ಹಾಗೂ ಫೋಟೋಗಳನ್ನು ಕಳುಹಿಸಿ, 30 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಇದ್ದರೆ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆಂದು ವಾಟ್ಸ್ಆ್ಯಪ್ ಮೂಲಕ ಬ್ಯಾಕ್ ಮೇಲ್ ಮಾಡಿದ್ದ , ಈ ಆರೋಪಿ ಬೇರೆ ಯಾರು ಅಲ್ಲ ನಟಿಯ ದೂರದ ಸಂಬಂಧಿಯಾಗಿದ್ದು, ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ. ಈ ಬಗ್ಗೆ ನಟಿ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ದೂರಿನ ಮೇರೆಗೆ ಬಂಧಿಸಿ ಆತನಿಂದ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ತಿಳಿಸಿದ್ದಾರೆ.