Home Karnataka State Politics Updates BIGG NEWS : ಮಹಿಳೆಯ ಮೇಲೆ ಕಪಾಳಮೋಕ್ಷ ವಿವಾದ : ಸಚಿವ ವಿ ಸೋಮಣ್ಣ ರಾಜೀನಾಮೆಗೆ...

BIGG NEWS : ಮಹಿಳೆಯ ಮೇಲೆ ಕಪಾಳಮೋಕ್ಷ ವಿವಾದ : ಸಚಿವ ವಿ ಸೋಮಣ್ಣ ರಾಜೀನಾಮೆಗೆ ಹೈಕಮಾಂಡ್ ಸೂಚನೆ?

Hindu neighbor gifts plot of land

Hindu neighbour gifts land to Muslim journalist

ಬಿಜೆಪಿಯ ಗೌರವಾನ್ವಿತ ಹುದ್ದೆಯಲ್ಲಿರುವ ವಸತಿ ಸಚಿವ ವಿ.ಸೋಮಣ್ಣ ಅವರ ನಡೆಯಿಂದ ಬಿಜೆಪಿ ಪಾಳಯದಲ್ಲಿ ಇರಿಸು ಮುರಿಸಿನ ಸ್ಥಿತಿ ಎದುರಾಗಿದ್ದು, ಸಚಿವ ಇದೀಗ ಹೈ ಕಮಾಂಡ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿನ್ನೆ ತನ್ನ ಕಷ್ಟವನ್ನು ಹೇಳಿಕೊಳ್ಳಲು ಆಗಮಿಸಿದ ಮಹಿಳೆಯೊಬ್ಬರಿಗೆ, ವಸತಿ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ ವೀಡಿಯೋ ಸಖತ್ ವೈರಲ್ ಆಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದರ ಬೆನ್ನಲ್ಲೇ ಮಹಿಳೆಯ ಬಳಿ ಕ್ಷಮೆ ಕೇಳಿ ಪ್ರಹಸನಕ್ಕೆ ತೇಪೆ ಹಾಕುವ ಪ್ರಯತ್ನ ಕೂಡ ನಡೆದಿವೆ. ಈ ಪ್ರಕರಣದಲ್ಲಿ ಸಚಿವ ವಿ.ಸೋಮಣ್ಣ ( Minister V Somanna ) ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ( BJP High command ) ಸೂಚಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಚಾಮರಾಜನಗರದಲ್ಲಿ ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳಿದಂತ ಸಂದರ್ಭದಲ್ಲಿ ಪರಿಶಿಷ್ಟ ಮಹಿಳೆಯೊಬ್ಬರು ತಮಗೆ ನಿವೇಶನ ಹಂಚಿಕೆ ಆಗದೇ ಇರುವ ಕುರಿತು ಮನವಿ ಸಲ್ಲಿಸಿದ್ದು, ವಸತಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ ಸಚಿವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದಾರೆ.

ಮಹಿಳೆಯ ವರ್ತನೆಯಿಂದ ಸಿಡಿಮಿಡಿಗೊಂಡಂತ ವಸತಿ ಸಚಿವ ವಿ.ಸೋಮಣ್ಣ ಅವರು ದಿಢೀರ್ ಮಹಿಳೆಯ ಕೆನ್ನೆಗೆ ಬಾರಿಸಿ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರು ಸಚಿವರ ಈ ವರ್ತನೆಗೆ ಕುಪಿತ ರಾದರೆ, ವಿಪಕ್ಷಗಳು ಟೀಕೆಗಳ ಸುರಿಮಳೆ ಗೈದು ಆಕ್ರೋಶ ಹೊರಹಾಕಿದ್ದಾರೆ.

ಇನ್ನೇನು ಚುನಾವಣೆಯ ಸಮಯ ಸನಿಹವಾಗುತ್ತಿದ್ದಂತೆ ಹೊಸ ಪ್ರಮಾದ ಎದುರಾಗದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವಂತ ಬಿಜೆಪಿ ಹೈಕಮಾಂಡ್, ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತೆ ವಿ.ಸೋಮಣ್ಣ ಅವರಿಗೆ ಸೂಚಿಸಿದೆ ಎಂದು ಉನ್ನತ ಮೂಲಗಳಿಂದ ವರದಿಯಾಗಿದೆ.

ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳ ಮೋಕ್ಷ ಮಾಡಿದ ವೀಡಿಯೋ ವೈರಲ್ ಆಗುತ್ತಿದ್ದು, ಹೈ ಕಮಾಂಡ್ ನಿರ್ಣಯಕ್ಕೆ ಸಚಿವರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಸದ್ಯಕ್ಕೆ ಜನರ ಮುಂದಿರುವ ಪ್ರಶ್ನೆಯಾಗಿದೆ.