ತಾಯಿಯ ಮೇಲೆರಗಿದ ಮಗ | ಮಲಮಗನಿಂದ ಗರ್ಭಿಣಿಯಾದ ತಾಯಿ ದಯಾಮರಣಕ್ಕೆ ಅರ್ಜಿ!!!
ತಾಯಿ ದೇವರಿಗೆ ಸಮಾನ ಅನ್ನೋ ಮಾತು ಈಗ ಎಲ್ಲೋ ಮರೆಮಾಚಿದಾಗೆ ಅನಿಸುತ್ತದೆ. ತಾಯಿ ಸತ್ತರೆ ಆಕೆಯ ಸ್ಥಾನಕ್ಕೆ ಬರುವ ಮಲತಾಯಿಯೂ ತಾಯಿಯಷ್ಟೇ ಪೂಜ್ಯನೀಯಳು. ಆದರೆ ಅಂತಹ ಮಲತಾಯಿಯ ಮೇಲೆಯೇ ಕಾಮುಕ ಮಲ ಮಗನೊಬ್ಬ (Step Son) ಕಾಮದ ದೃಷ್ಟಿ ಬೀರಿದ್ದಾನೆ. ಅಲ್ಲದೇ ತನ್ನ ತಾಯಿ ಸಮಾನಳು ಎನ್ನುವುದನ್ನೂ ನೋಡದೇ ಮಲತಾಯಿ ಮೇಲೆ ಆ ಮಲಮಗ ಅತ್ಯಾಚಾರ ಮಾಡಿದ್ದಾನೆ.
ಸಾಲದ್ದಕ್ಕೆ ಈ ತಾಯಿಯ ಮೇಲೆ ಆಕೆಯ ಪತಿಯ ಸ್ನೇಹಿತರೂ ಕೂಡ ಅತ್ಯಾಚಾರ ಮಾಡಿದ್ದಾರೆ. ಈ ಎಲ್ಲಾ ನೋವು ಹಿಂಸೆಯಿಂದ ನೊಂದ ಆಕೆ ತನ್ನ ಜೀವನವನ್ನೇ ಕೊನೆಗೊಳ್ಳಿಸಿಕೊಳ್ಳಲು ನಿರ್ಧಾರ ಮಾಡಿದ್ದಾಳೆ. ಅದಕ್ಕಾಗಿ ಭಾರತದ ರಾಷ್ಟ್ರಪತಿ (President of India) ದೌಪದಿ ಮುರ್ಮು (Draupadi Murmu) ಅವರಿಗೆ ಪತ್ರ (Letter) ಬರೆದಿದ್ದಾರೆ ಆ ಸಂತ್ರಸ್ತ (Victims) ಮಹಿಳೆ. ತನಗೆ ದಯಾಮರಣ (euthanasia) ನೀಡಿ ಅಂತ ಮನವಿ ಮಾಡಿದ್ದಾಳೆ. ಇಂತಹ ಒಂದು ಘೋರ ಘಟನೆ ನಡೆದಿರುವುದು ಚಂಡೀಗಡದಲ್ಲಿ (Chandigarh) ಇಂಥದ್ದೊಂದು ಘೋರ ಘಟನೆ ನಡೆದಿದ್ದು. ಈ ಘಟನೆ ಕುರಿತು ತಿಳಿದ ನಂತರ ಜನ ನಿಜಕ್ಕೂ ಹೌಹಾರಿದ್ದಾರೆ.
ತನ್ನ ಮಲಮಗನಿಂದ ನಿರಂತರ ಅತ್ಯಾಚಾರಕ್ಕೊಳಗಾದ ಮಹಿಳೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಮಲ ಮಗ ಅಲ್ಲದೇ, ಅವಳದ್ದೇ ಪತಿಯ ಸ್ನೇಹಿತರು ಅತ್ಯಾಚಾರವೆಸಗಿದ್ದಾಗಿ ಹೇಳಿದ್ದು, ಆ ಸಂತ್ರಸ್ತ ಮಹಿಳೆ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದು ‘ದಯಾಮರಣದಿಂದ ಸಾವಿಗೆ ಅನುಮತಿ ನೀಡುವಂತೆ ಕೋರಿ, ಮನವಿ ಮಾಡಿದ್ದಾರೆ.
ಚಂಡೀಗಡದ 30 ವರ್ಷದ ಮಹಿಳೆ 55 ವರ್ಷದ ರೈತನನ್ನು ವಿವಾಹವಾಗಿದ್ದು, ನಂತರ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಮಹಿಳೆ ಬಳಿಕ ತನ್ನ ತಾಯಿ, ಸಹೋದರ ಮತ್ತು ಆರು ವರ್ಷದ ಮಗನೊಂದಿಗೆ ಬರೇಲಿಯಲ್ಲಿ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ಆಕೆಯ ಮಲಮಗ ಅಕ್ರಮ ಸಂಬಂಧಕ್ಕಾಗಿ ಏಪ್ರಿಲ್‌ನಲ್ಲಿ ತನ್ನನ್ನು ಪೀಡಿಸಿದ್ದು ಮತ್ತು ಅಂದಿನಿಂದ ಪದೇ ಪದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಕ್ರಮ ಸಂಬಂಧಕ್ಕೆ ಒಪ್ಪದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಅಂತ ಬೆದರಿಕೆಯನ್ನು ಕೂಡಾ ಹಾಕಿದ್ದು, ಹೀಗಾಗಿ ಆರಂಭದಲ್ಲಿ ನಾನು ಭಯಪಟ್ಟೆ ಎಂಬುದಾಗಿ ಮಹಿಳೆ ಹೇಳಿದ್ದಾಳೆ.
ಹಾಗಾಗಿ ಮಲಮಗನ ನಿರಂತರ ಅತ್ಯಾಚಾರದಿಂದ ನಾನು ಗರ್ಭಿಣಿಯಾದೆ. ಡಿಎನ್ಎ ಪರೀಕ್ಷೆಗೆ ಹೋಗಲು ಬಯಸಿದಾಗ ನನ್ನ ಹೊಟ್ಟೆಗೆ ಹೊಡೆಯಲಾಯಿತು. ನಂತರ, ಪುರನ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ನನಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಮಹಿಳೆ ತನ್ನ ಮೇಲಾದ ಹಿಂಸೆಯನ್ನು ಸವಿವರವಾಗಿ ಹೇಳಿದ್ದಾರೆ.
ಇನ್ನು ಜುಲೈ 18 ರಂದು ನನ್ನನ್ನು ಬಲವಂತವಾಗಿ ಪತಿಯ ಸ್ನೇಹಿತನ ಫಾರ್ಮ್‌ಹೌಸ್‌ಗೆ ಕರೆದೊಯ್ದು, ಅಲ್ಲಿ ಆತನ ಸಂಬಂಧಿಕರೊಬ್ಬರು ಮತ್ತು ಇಬ್ಬರು ಸಹೋದ್ಯೋಗಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದರು ಅಂತ ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಅತ್ಯಾಚಾರ, ಲೈಂಗಿಕ ದೌರ್ಜನ್ಯದಿಂದ ನೊಂದಿರುವ ಸಂತ್ರಸ್ತೆ ದಯಾಮರಣಕ್ಕಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ‘ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನ್ಯಾಯ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದ, ನಿಮ್ಮ (ರಾಷ್ಟ್ರಪತಿ) ಅನುಮತಿಯೊಂದಿಗೆ ನನ್ನ ಜೀವನವನ್ನು ಅಂತ್ಯಗೊಳಿಸುತ್ತೇನೆ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾಗಿ ವರದಿಯಾಗಿದೆ.