ಗಾಂಧಿ ಕುಟುಂಬಕ್ಕೆ ಭಾರಿ ಹೊಡೆತ‌ ! ಮೋದಿ ಸರ್ಕಾರದಿಂದ ಕಠಿಣ ಕ್ರಮ..!

ಗಾಂಧಿ ಕುಟುಂಬಕ್ಕೆ ಮೋದಿ ಸರ್ಕಾರ ಭಾರಿ ಶಾಕ್ ನೀಡಿದೆ.
ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯ ಲೈಸೆನ್ಸ್ ಅನ್ನು ಕೇಂದ್ರ ಗೃಹ ಇಲಾಖೆಯು ರದ್ದು ಮಾಡಲು ಆದೇಶ ಮಾಡಿದೆ.

ಸರ್ಕಾರೇತರ ಸಂಸ್ಥೆಯಾದ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ , ವಿದೇಶಿ ಧನ ಸಹಾಯ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪ ಮಾಡಲಾಗಿದೆ. ಕಳೆದ ಜುಲೈ 2020 ರಲ್ಲಿ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ತನಿಖಾ ಸಮಿತಿ ವಿಚಾರಣೆಯ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.ಟ್ರಸ್ಟ್ ನ ಎಫ್ ಸಿಆರ್ ಎ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ರಾಜೀವ್ ಗಾಂಧಿ ಟ್ರಸ್ಟ್ ಗೆ ಮಾಹಿತಿಯನ್ನು ನೀಡಲಾಗಿದೆ.ಆದರೆ ಈ ಬಗ್ಗೆ ಆರ್ ಜಿ ಎಫ್ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಆರ್ ಜಿ ಎಫ್ ನ ಅಧ್ಯಕ್ಷರಾಗಿದ್ದಾರೆ. ಹಾಗೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ , ಸಂಸತ್ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇವರೆಲ್ಲಾ ಟ್ರಸ್ಟ್ ನ ಸದಸ್ಯರಾಗಿದ್ದಾರೆ.

ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ 1991 ರಲ್ಲಿ ಆರಂಭವಾಯಿತು.ಈ ಟ್ರಸ್ಟ್ ಅಂದಿನಿಂದ 2009 ರ ವರೆಗೆ ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೇ ಮಹಿಳೆಯರು ಮತ್ತು ಮಕ್ಕಳ ಅಂಗವೈಕಲ್ಯ ನೆರವು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ , ವಿಷಯಗಳಲ್ಲಿ ಕಾರ್ಯವಹಿಸಿದೆ. 2010 ರಲ್ಲಿ ಈ ಫೌಂಡೇಶನ್ ಪೂರ್ತಿಯಾಗಿ ಶಿಕ್ಷಣದ ಮೇಲೆ ಕೇಂದ್ರೀಕೃತವಾಗಿತ್ತು.
ಕಳೆದ ಜುಲೈ 2020 ರಲ್ಲಿ ಗಾಂಧಿ ಕುಟುಂಬದ ಈ ಫೌಂಡೇಶನ್ ವಿರುದ್ಧ ಕೇಂದ್ರ ಗೃಹ ಸಚಿವಾಲಯ ತನಿಖೆ ಮಾಡುವಂತೆ ಆದೇಶ ಮಾಡಿದೆ. ED ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಕೇಂದ್ರ ಸರ್ಕಾರ ರಚನೆ ಮಾಡಲಾಗಿತ್ತು.ಈ ತನಿಖೆ ಸಮಯದಲ್ಲಿ ಮನಿ ಲಾಂಡರಿಂಗ್ ಕಾಯ್ದೆ,ಆದಾಯ ತೆರಿಗೆ ಕಾಯ್ದೆ ಮತ್ತು ಎಫ್ ಸಿಆರ್ ಎ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪವಿತ್ತು. ಈ ಕಾರಣಕ್ಕಾಗಿ ಎಫ್ ಸಿಆರ್ ಎ ಲೈಸೆನ್ಸ್ ರದ್ದು ಮಾಡಲಾಗಿದೆ.

Leave A Reply

Your email address will not be published.