ಕರಾವಳಿಯಲ್ಲಿ ಸಹ್ಯಾದ್ರಿ ಕೆಂಪು ಮುಖ್ತಿ ತಳಿ | ಅತಿ ಉಪಯುಕ್ತ ಈ ತಳಿ

ಪ್ರತಿ ಊರಿನಲ್ಲಿಯೂ ಕೂಡ ಜೀವನ ಶೈಲಿ ಆಹಾರ ಕ್ರಮ,ವಾತಾವರಣದ ಅನುಗುಣವಾಗಿ ಬೆಳೆಯುವ ಬೆಳೆಯಲ್ಲಿ ವಿಭಿನ್ನತೆ ಇರುವುದು ಸಹಜ.ಕರಾವಳಿಯ ಜೀವನ ಶೈಲಿಗೆ ಅನುಗುಣವಾಗಿ ಕುಚಲಕ್ಕಿಯನ್ನು ಆಹಾರ ಸೇವನೆ ಮಾಡುವ ಪದ್ಧತಿ ಹೆಚ್ಚಾಗಿ ರೂಡಿಯಲ್ಲಿದೆ.

ಕರಾವಳಿ ಪ್ರದೇಶಕ್ಕೆ ಪ್ರಥಮ ಬಾರಿಗೆ ಸಹ್ಯಾದ್ರಿ ಕೆಂಪು ಮುಖ್ತಿ ಎಂಬ ಭತ್ತದ ತಳಿಯನ್ನು ಪರಿಚಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ರೈತರು ಭತ್ತದ ನಾಟಿ ಮಾಡಿ ಪ್ರಯೋಗ ನಡೆಸಿದ್ದಾರೆ.

ಮೂರು ವರ್ಷಗಳ ಹಿಂದೆ ನೆರೆಯಲ್ಲೂ ಭರಪೂರ ಬೆಳೆ ನೀಡುವ ಸಹ್ಯಾದ್ರಿ ಪಂಚಮುಖಿ ಎಂಬ ಭತ್ತದ ತಳಿಯನ್ನು ಪರಿಚಯಿಸಲಾಗಿದ್ದು, ಅದು ಎಕರೆಗೆ 22ರಿಂದ 28 ಕ್ವಿಂಟಾಲ್‌ ತನಕ ಇಳುವರಿ ನೀಡುವ ಮೂಲಕ ಯಶಸ್ಸನ್ನು ಕಂಡಿದೆ.

ಅದೇ ಮಾದರಿಯಲ್ಲಿ ಹೊಸ ತಳಿ ಬೆಳೆಯುವತ್ತ ರೈತರು ಮುಖ ಮಾಡಿದ್ದಾರೆ. ಕರಾವಳಿಯಲ್ಲಿ ಸಾಮಾನ್ಯವಾಗಿ ಎಂ 04, ಕಜೆ ಜಯ, ಉಮಾ, ಜ್ಯೋತಿ ಮುಂತಾದ ತಳಿ ಬೆಳೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹ್ಯಾದ್ರಿ ಬ್ರಹ್ಮ ಎಂಬ ಹೊಸ ತಳಿ ಬೆಳೆಸಲಾಗುತ್ತಿದೆ.

ಸಹ್ಯಾದ್ರಿ ಪಂಚಮುಖಿ ಬಳಿಕ ಸಹ್ಯಾದ್ರಿ ಕೆಂಪು ಮುಖ್ತಿ ತಳಿ ಬಗ್ಗೆ ವಿಜ್ಞಾನಿಗಳು, ರೈತರು ಭರವಸೆ ಮೂಡಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ರೈತರಿಗೆ ಮಾಹಿತಿ ನೀಡುವ ಸಲುವಾಗಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಗದ್ದೆಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನಾಟಿ ಮಾಡಲಾಗಿದೆ.

ಸಹ್ಯಾದ್ರಿ ಕೆಂಪು ಮುಖ್ತಿ ತಳಿಯನ್ನು ಜಿಲ್ಲೆಯ ಪ್ರತಿಯೊಂದು ತಾಲೂಕಿನ ತಲಾ ಇಬ್ಬರು ಕೃಷಿಕರಿಗೆ ಬೀಜ ನೀಡಲಾಗಿದ್ದು,ಅದನ್ನು ರೈತರು ಬಿತ್ತನೆ ಮಾಡಿ ನಿರೀಕ್ಷಿತ ಫಸಲನ್ನು ಕಾಣುವ ಉತ್ಸಾಹದಲ್ಲಿದ್ದಾರೆ.

2020ರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ತಳಿ ಅಭಿವೃದ್ಧಿ ತಜ್ಞ ಡಾ.ದುಷ್ಯಂತ್‌ ಈ ಪ್ರಯೋಗದ ಕುರಿತಾಗಿ ಸಂಶೋಧನೆ ಮಾಡಿ ಮಲೆನಾಡು, ಕೊಡಗು, ಉತ್ತರ ಕನ್ನಡದಲ್ಲಿಯು ಕೂಡ ಪ್ರಯೋಗ ನಡೆಸಲಾಗಿದೆ.

ಬೆಳೆಯ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನೂ ಆಯಾ ಜಿಲ್ಲೆಗಳ ರೈತರು ವ್ಯಕ್ತ ಪಡಿಸಿದ್ದಾರೆ. ಕಳೆದ ವರ್ಷ ಹಿಂಗಾರು ಮಳೆ ಸಂದರ್ಭ ಸಹ್ಯಾದ್ರಿ ಕೆಂಪು ಮುಖ್ತಿ ತಳಿ ಜತೆಗೆ ಪ್ರತೀಕ್ಷಾ ಎಂಬ ಮತ್ತೊಂದು ಹೊಸ ತಳಿಯನ್ನು ಪರಿಚಯಿಸಲಾಗಿತ್ತು. ಮುಂಗಾರು ಬಳಿಕ ಸುಗ್ಗಿ, ಕೊಳಕೆಗೆ ಹೆಚ್ಚಿನ ರೈತರು ಗದ್ದೆ ಖಾಲಿಯಾಗಿರುವುದರಿಂದ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ .

ಕಡಿಮೆ ಅವಧಿಯಲ್ಲಿ ಬೆಳೆಯುವ ಬೆಳೆ ಬಗ್ಗೆ ರೈತರ ಬೇಡಿಕೆ ಹೆಚ್ಚಿದ್ದು, ಪುತ್ತೂರು ಆರ್ಯಾಪುವಿನ ರೈತರೊಬ್ಬ ಕೊಯ್ಲುಮಾಡಿದ್ದು, ಅವರಲ್ಲಿ ಬೀಜ ಲಭ್ಯವಿದೆ ಎಂದು ವರದಿಯಾಗಿದೆ.. ಇದರ ಜೊತೆಗೆ ಮುಂಗಾರಿನಲ್ಲಿ ನಾಟಿ ಮಾಡಲು ಸಮಯ ಸಿಗದೆ, ಆಗಸ್ಟ್‌ ವರೆಗೆ ವಿಳಂಬವಾದರೂ, ನಂತರ ಈ ತಳಿ ಬೆಳೆಸಬಹುದಾಗಿದೆ.

ಸಹ್ಯಾದ್ರಿ ಕೆಂಪು ಮುಖ್ತಿ ಎಂಬುದು ಕೆಂಪು ಕಜೆ ಅಕ್ಕಿ ತಳಿಯಾಗಿದ್ದು, ಇದಕ್ಕೆ ಕಣೆ ಕೀಟ, ಕೊಳವೆ ಕೀಟದ ಹಾವಳಿ ತಲೆದೋರುವುದಿಲ್ಲ ಭತ್ತದ ಗಿಡ ಅತೀವ ಮಳೆ ಉಂಟಾದರೂ ಕೂಡ ತಡೆದು ನಿಲ್ಲುತ್ತದೆ .

ಇದರ ಜೊತೆಗೆ ಅಧಿಕ ಇಳುವರಿಯನ್ನೂ ಪಡೆಯಬಹುದು. ಒಳ್ಳೆಯ ಇಳುವರಿ ಬಂದಾಗ ರೈತರಿಂದಲೇ ಬೀಜ ಉತ್ಪಾದನೆ ಮಾಡಿ, ಮುಂದಿನ ವರ್ಷ ಬೇರೆ ರೈತರಿಗೆ ವಿತರಿಸಲಾಗುತ್ತದೆ ಎಂದು ಕೃಷಿ ಸಹ್ಯಾದ್ರಿ ಕೆಂಪು ಮುಖ್ತಿ ಎಂಬುದು ಕೆಂಪು ಕಜೆ ಅಕ್ಕಿ ತಳಿಯಾಗಿದ್ದು, ಇದಕ್ಕೆ ಕಣೆ ಕೀಟ, ಕೊಳವೆ ಕೀಟದ ಕಾಟ ಇರುವುದಿಲ್ಲ. ಮಳೆ ಬಂದರೂ ಭತ್ತದ ಗಿಡ ತಡೆದು ನಿಲ್ಲುತ್ತದೆ.

ಅಧಿಕ ಇಳುವರಿ ಬರುತ್ತದೆ. ಚೆನ್ನಾಗಿ ಇಳುವರಿ ಬಂದಾಗ, ರೈತರಿಂದಲೇ ಬೀಜ ಉತ್ಪಾದನೆ ಮಾಡಿ, ಮುಂದಿನ ವರ್ಷ ಬೇರೆ ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಟಿ.ಜೆ.ರಮೇಶ್‌ ಹೇಳಿದ್ದಾರೆ.

ಬೇರೆ ಭತ್ತ ಮಾರಿದರೆ ಕ್ವಿಂಟಾಲ್‌ಗೆ ಎರಡು ಸಾವಿರ ರೂ. ಸಿಗುವುದು ಕೂಡ ವಿರಳ.. ಭತ್ತದ ಬೀಜ ಮಾಡಿ ಮಾರಿದರೆ ಕೆ.ಜಿ.ಗೆ 80 ರೂ. ಲಭಿಸಿ, ಆದಾಯ ಹೆಚ್ಚಾಗುತ್ತದೆ. ಮಂಗಳೂರು ಮೂಲದ ರೈತರೊಬ್ಬರು ನಾಟಿ ಮಾಡಿ ಉತ್ತಮ ಇಳುವರಿ ತೆಗೆದಿದ್ದಾರೆ.

Leave A Reply

Your email address will not be published.