ಮತ್ತೆ ಬರುತ್ತಿದೆ ‘ ಮಾಯಾಮೃಗ ‘ | ಧಾರಾವಾಹಿ ಲೋಕದ ಅಚ್ಚರಿ ಟಿ ಎನ್ ಸೀತಾರಾಂ ಧಾರಾವಾಹಿ ಶುರು
ಬರೋಬ್ಬರಿ 25 ವರ್ಷಗಳ ಹಿಂದಿನ ‘ಮಾಯಾಮೃಗ’ ಧಾರವಾಹಿಯು ಈಗ ‘ಮತ್ತೆ ಮಾಯಾಮೃಗ’ ದ ಮೂಲಕ ಕಿರುತೆರೆಗೆ ಬಂದಿದೆ. ಸುದೀರ್ಘ ಸಮಯದ ನಂತರ ನಮ್ಮನ್ನು ಮನರಂಜಿಸಲು ಮತ್ತೆ ಬಂದಿದ್ದಾರೆ .
ಸಂಜೆ ಆಯಿತೆಂದರೆ ಸಾಕು ವ್ಯಾಪಾರಿಗಳು, ಕಂಪೆನಿ ಆಫೀಸರ್ ಗಳು, ವಾಹನ ಚಾಲಕರು, ಮಕ್ಕಳು , ವೃದ್ಧರು, ಹೆಂಗಳೆಯರು ಮಾತ್ರವಲ್ಲದೆ ಗಂಡಸರು ತಮ್ಮ ಕೆಲಸವನ್ನು ಬಿಟ್ಟು ಅರ್ಧ ಗಂಟೆ ಮುಂಚೆಯೆ ಟಿ.ವಿ. ಎದುರು ಪ್ರತ್ಯಕ್ಷವಾಗಿರುತ್ತಿದ್ದರು.
ಅಷ್ಟು ಜನಪ್ರಿಯವಾದ ‘ಮಾಯಾಮೃಗ’ ಧಾರವಾಹಿಯು ಅಂದು ಸಾಲು ಸಾಲು ದಾಖಲೆ ಬರೆದು ಮೆಗಾ ಹಿಟ್ ಆಗಿದೆ. ಎಲ್ಲರ ಮನೆ ಮಾತಾಗಿದ್ದ ಮಾಯಾಮೃಗದ ಸೀಕ್ವೆಲ್ ಈಗ ಬಿಡುಗಡೆಯಾಗಿದೆ.
ಸಿನಿಮಾಗಳಲ್ಲಿ ಸೀಕ್ವೆಲ್ ಬರುವುದು ಸಾಮಾನ್ಯ . ಸೀರಿಯಲ್ ನಲ್ಲಿ ಸೀಕ್ವೆಲ್ ಅದರಲ್ಲೂ 25 ವರ್ಷಗಳ ನಂತರ ಅಂದರೆ ಇವರಿಗೊಂದು ಸವಾಲೇ ಸರಿ. ಈಗಿನ ಜನರ ಮನಸ್ಥಿತಿ ಅರ್ಥೈಸಿಕೊಂಡು ಕಥೆಯನ್ನು ಮುಂದುವರಿಸಬೇಕಿದೆ.
ಅಂದು ಮನೆಗೊಂದು ಟಿ.ವಿ. ಇದ್ದರೆ ಈಗ ರೂಮಿಗೊಂದು ಟಿ.ವಿ. ಮಕ್ಕಳ ಕೈಯಲ್ಲಿ ಮೊಬೈಲ್ ಇಂತಹ ಸಂಧರ್ಭದಲ್ಲಿ ಎಲ್ಲರೂ ಧಾರವಾಹಿಯನ್ನು ನೋಡುವಂತೆ ಮಾಡಬೇಕಿದೆ. ಈಗ ಹಳೆ ಪಾತ್ರದಾರಿಗಳ ಕಥೆ ಮಾಡಲು ಸಾಧ್ಯವಿಲ್ಲ ಇವರ ಮುಂದಿನ ಜನರೇಷನ್ ನ ಕಥೆ ಹೇಳಬೇಕು.
ಹಳೆ ಪಾತ್ರಗಳು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಯುವ ಪೀಳಿಗೆಗೆ ಕಥೆ ಹೇಳಲು ಹೊಸ ಪಾತ್ರಗಳನ್ನು ಪರಿಚಯಿಸಿದ್ದಾರೆ. ಮಾಯಾಮೃಗದಲ್ಲಿ ಏಳೆಂಟು ಪ್ರಮುಖ ಪಾತ್ರಗಳಿವೆ ಮತ್ತು ಆ ಪಾತ್ರದಾರಿಗಳಿಗೆ ಈಗ ವಯಸ್ಸಾಗಿ ಬಿಟ್ಟಿದೆ.
ಹಾಗಾಗಿ ” ಮತ್ತೆ ಮಾಯಾಮೃಗ’ದಲ್ಲೂ ಜನರೇಶನ್ ಗ್ಯಾಪ್ ಇರಲಿದ್ದು, ಇದರಲ್ಲೂ ಹಳೇ ಪಾತ್ರಗಳು ಮುಂದುವರೆಯಲಿದೆ ಎಂದು ಟಿ.ಎನ್.ಸೀತಾರಾಮ್ ರವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯ ಮುಂದುವರೆದ ಭಾಗ ‘ಮತ್ತೆ ಮಾಯಾಮೃಗ’ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.ಈ ತಿಂಗಳ ಕೊನೆಯಲ್ಲಿ ಅಂದರೆ ಅಕ್ಟೋಬರ್ 31 ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಟಿ.ಎನ್. ಸೀತಾರಾಮ್ ,ನಾಗೇಂದ್ರ ಶಾ, ಪಿ.ಶೇಷಾದ್ರಿ ಈ ಮೂವರ ಸಹಭಾಗಿತ್ವದಲ್ಲಿ ಮೂಡಿಬಂದ ಮಾಯಾಮೃಗ ದ ಮುಂದುವರಿದ ಭಾಗ ಮತ್ತೆ ‘ಮಾಯಾಮೃಗ’ದ ಬಗ್ಗೆ ಸೀಕ್ವೆಲ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
25 ವರ್ಷಗಳ ಲಾಂಗ್ ಜನರೇಷನ್ ಗ್ಯಾಪ್ ನಂತರ ಕಥೆ ಹೇಗೆಲ್ಲಾ ಮೂಡಿ ಬರಬಹುದೆಂದು ಕಾತುರದಿಂದ ಸೀರಿಯಲ್ ಪ್ರಿಯರು ಕಾಯುತ್ತಿದ್ದಾರೆ.