ಎಲೆಕ್ಟ್ರಿಷಿಯನ್ ನ ಶ್ವಾಸಕೋಶದಲ್ಲಿ ಕಂಡು ಬಂದ ನಟ್ !
ಎಲೆಕ್ಟ್ರೀಷಿಯನೊಬ್ಬರು ಹೋಗಿ ಹೋಗಿ ನಟ್ ಒಂದನ್ನು ನುಂಗಿದ್ದು ವೈದ್ಯ ಲೋಕಕ್ಕೆ ಅಚ್ಚರಿ ಜತೆಗೆ ತಲೆಬಿಸಿ ಮೂಡಿಸಿದ್ದಾರೆ. ಇವರು ಯಾವುದೇ ಗಿನ್ನಿಸ್ ರೆಕಾರ್ಡ್ ಬರೆಯಲು ಹೋದವರಲ್ಲಾ, ಬದಲಿಗೆ ತಾನು ಕೆಲಸ ಮಾಡುತ್ತಿದ್ದ ಸಮಯದಲ್ಲಿ ನಟ್ ಅದು ಹೇಗೋ ಶ್ವಾಸಕೋಶಕ್ಕೆ ಪ್ರಯಾಣ ಬೆಳೆಸಿದೆ.
ಹಾಗೆ ನಟ್ ನುಂಗಿ ಪ್ರಾಣವನ್ನು ಇನ್ನೇನು ಕಳೆದು ಕೊಳುವ ಹಂತಕ್ಕೆ ತಲುಪಿದ ವ್ಯಕ್ತಿ ಕೊಯಮತ್ತೂರಿನ ಎಲೆಕ್ಟ್ರೀಷಿಯನ್ ಸಂಶುದ್ಧೀನ್ ಎಂಬಾತ.
ನಟ್ ದೇಹದ ಒಳಕ್ಕೆ ತಲುಪಿದ ತಕ್ಷಣವೆ ಆ ವ್ಯಕ್ತಿಯನ್ನು ಅಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ
ಕಿವಿ, ಮೂಗು, ಗಂಟಲು ವಿಭಾಗದಲ್ಲಿ ಇವರನ್ನು ಪರೀಕ್ಷಿಸಿ ಎಕ್ಸ್-ರೆ ನಡೆಸಿದಾಗ ಈ ವೇಳೆಯಲ್ಲಿ ಶ್ವಾಸಕೋಶದಲ್ಲಿ ನಟ್ ಇರುವುದು ತಿಳಿದು ಬಂತು. ಅಲ್ಲದೆ ಆ ನಟ್ ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದು ಬಂದಿತ್ತು.
ತಕ್ಷಣವೇ ಚುರುಕುಗೊಂಡ ವೈದ್ಯರ ತಂಡವು ಎಲೆಕ್ಟ್ರೀಷಿಯನ್ ಸಂಶುದ್ಧೀನ್ ನನ್ನು ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಿದರು. ಕಿವಿ ,ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರಣವನ್, ಅಲಿಸುಲ್ತಾನ್, ಮಣಿಮೋಳಿ ಸೆಲ್ವನ್ ಮತ್ತು ಮದನಗೋಪಾಲನ್ ಎಂಬ ವೈದ್ಯರ ತಂಡವು ಎಲೆಕ್ಟ್ರೀಷಿಯನ್ ನ ಪ್ರಾಣವನ್ನು ಉಳಿಸಿದ್ದಾರೆ.
ಎಲೆಕ್ಟ್ರೀಷಿಯನರಿಗೆ ಸಾಮಾನ್ಯವಾಗಿ ಒಂದು ಅಭ್ಯಾಸ ಇರುತ್ತೆ. ಬಾಯಲ್ಲಿ ಟೂಲ್ಸ್ ಹಿಡ್ಕೊಂಡು ಕೆಲಸ ಮಾಡುವುದು. ಈ ಎಲೆಕ್ಟ್ರೀಷಿಯನ್ ಕೆಲ್ಸ ಮಾಡುತ್ತಾ ಇರುವಾಗ, ಬಾಯಲ್ಲಿ ಬಹುಶಃ ನಟ್ ಒಂದನ್ನು ಹಿಡ್ಕೊಂಡ್ ಇದ್ದ ಅನ್ನಿಸುತ್ತೆ. ಅದು ಶ್ವಾಸಕೋಶದೊಳಗೆ ಹೋಗಿದೆ. ತಕ್ಷಣ ಕೆಮ್ಮಲು ಪ್ರಯತ್ನಿಸಿದ ಇವರಿಗೆ ನಟ್ ನಿಂದಾಗಿ ಉಸಿರುಗಟ್ಟಲು ಪ್ರಾರಂಭವಾಗಿದೆ. ತಕ್ಷಣ ವೈದ್ಯಕೀಯ ಸಹಾಯ ದೊರೆತ ಕಾರಣದಿಂದ ವ್ಯಕ್ತಿ ಬಚಾವಾಗಿದ್ದಾರೆ.