Home latest Bigg Offer : ದೀಪಾವಳಿ ಭರ್ಜರಿ ಆಫರ್ | 11 ಸಾವಿರಕ್ಕೆ ಮನೆಗೆ ತನ್ನಿ ರಾಯಲ್...

Bigg Offer : ದೀಪಾವಳಿ ಭರ್ಜರಿ ಆಫರ್ | 11 ಸಾವಿರಕ್ಕೆ ಮನೆಗೆ ತನ್ನಿ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350!!!

Hindu neighbor gifts plot of land

Hindu neighbour gifts land to Muslim journalist

ರಾಯಲ್ ಎನ್ ಫೀಲ್ಡ್ ಅತ್ಯಂತ ಹಳೆಯ ಬೈಕ್ ತಯಾರಕ ಬ್ರ್ಯಾಂಡ್ ಆಗಿದ್ದು, ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆಯಾಗಿದೆ.

ರಾಯಲ್ ಎನ್‍ಫೀಲ್ಡ್ ಬೈಕ್‌ ಮೇಲೆ ಕುಳಿತು ರೈಡ್‌ ಮಾಡುವುದೆಂದರೆ ಹೆಚ್ಚಿನವರಿಗೆ ಅದೊಂದು ಕ್ರೇಜ್. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಡ್ರೀಮ್ ಬೈಕ್ ಮಾತ್ರವಲ್ಲದೆ ಯುವತಿಯರ ನೆಚ್ಚಿನ ಬೈಕ್ ಆಗಿದೆ.

ಈ ರಾಯಲ್ ಎನ್‍ಫೀಲ್ಡ್ ಬೈಕ್‌ಗಳು ತಮ್ಮ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಮನಸೂರೆಗೊಳಿಸಿ ಟ್ರೆಂಡ್ ಸೃಷ್ಟಿಸಿಕೊಂಡಿದೆ. ಬೆಳಕಿನ ಹಬ್ಬಕ್ಕೆ ಭರಪೂರ ತಯಾರಿಗಳು ನಡೆಯುತ್ತಿರುವ ನಡುವೆಯೆ ರಾಯಲ್ ಎನ್‌ಫೀಲ್ಡ್ ದೀಪಾವಳಿ ಹಬ್ಬದ ಪ್ರಯುಕ್ತ ಜನರಿಗೆ ವಿಶೇಷ ಕೊಡುಗೆ ಘೋಷಿಸಿದೆ.

ದೀಪಾವಳಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಬೈಕ್ ನೀಡಲು ರಾಯಲ್ ಎನ್‌ಫೀಲ್ಡ್ ಮುಂದಾಗಿದ್ದು, ಇದಕ್ಕಾಗಿ ಡೌನ್ ಪೇಮೆಂಟ್ ಬೆಲೆಯಲ್ಲಿ ಭಾರಿ ಕಡಿತಗೊಳಿಸಿ ಬೈಕ್ ಪ್ರಿಯರಿಗೆ ಖುಷಿ ಸುದ್ಧಿ ನೀಡಿದೆ.

ದೀಪಾವಳಿ ಹಬ್ಬಕ್ಕೆ ಮನೆಗೆ ತನ್ನಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನೋ ಟ್ಯಾಗ್‌ಲೈನ್ ಮೂಲಕ ರಾಯಲ್ ಎನ್‌ಫೀಲ್ಡ್ ಆಫರ್ ಘೋಷಿಸಿದೆ.

ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೈಲೆ1.90 ಲಕ್ಷ ರೂಪಾಯಿ(ಎಕ್ಸ್‌ಶೋ ರೂಂ), 2.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕ್ಲಾಸಿಕ್ 350 ಬೈಕ್ ಜಾವಾ ಸ್ಟಾಂಡರ್ಡ್, ಹೊಂಡಾ ಹೈನೆಸ್ CB350, ಬೆನೆಲ್ಲಿ ಇಂಪೀರಿಯಲ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ಕ್ಲಾಸಿಕ್ 350 ನಲ್ಲಿನ ಎಕ್ಸಾಸ್ಟ್ ನೋಡುಗರನ್ನು ಸೆಳೆಯುವಂತಹ ಸೌಂಡ್ ಹೊರಹಾಕುತ್ತದೆ. ಅತ್ಯುತ್ತಮವಾಗಿ ಧ್ವನಿಸುವ ಏಕ-ಸಿಲಿಂಡರ್ ರಾಯಲ್ ಎನ್‍ಫೀಲ್ಡ್ ಮಾದರಿಯಾಗಿದ್ದು, ಜನಸಾಮಾನ್ಯರಿಂದ ಮೆಚ್ಚುಗೆ ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಇತ್ತೀಚೆಗೆ ಅಪ್‌ಗ್ರೇಡ್ ವರ್ಶನ್ ಬಿಡುಗಡೆಯಾಗಿದೆ. ನೂತನ ಕ್ಲಾಸಿಕ್ ಬೈಕ್ 349 cc Jಸೀರಿಸ್ ಎಂಜಿನ್ ಹೊಂದಿದೆ. 20.2 Hp ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬೈಕ್ ಕರ್ಬ್ ತೂಕ 195 kg.

ದೀಪಾವಳಿ ಹಬ್ಬದ ವಿಶೇಷ ಆಫರ್‌ನಲ್ಲಿ ಗ್ರಾಹಕರು ಕೇವಲ 11,000 ರೂಪಾಯಿ ನೀಡಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬುಕ್ ಮಾಡಿಕೊಳ್ಳಬಹುದಾಗಿದ್ದು, ಇಷ್ಟೇ ಅಲ್ಲದೆ ಗ್ರಾಹಕರಿಗೆ ಸುಲಭ ಕಂತು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ಕೂಡ ಸಿಗಲಿದೆ.

ಈ ಆಫರ್ ಮೂಲಕ ಕಳೆದ ತಿಂಗಳ ದಾಖಲೆಯ ಮಾರಾಟವನ್ನು ಬ್ರೇಕ್ ಮಾಡಲು ರಾಯಲ್ ಎನ್‌ಫೀಲ್ಡ್ ಮುಂದಾಗಿದೆ.11,000 ರೂಪಾಯಿ ಪಾವತಿಸಿದ ಗ್ರಾಹಕರಿಗೆ ಇನ್ನೂ ಕೆಲ ಕೊಡುಗೆಗಳನ್ನು ರಾಯಲ್ ಎನ್‌ಫೀಲ್ಡ್ ನೀಡಿದೆ.

ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಿಂಗಳ ಕಂತು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. 11,000 ರೂಪಾಯಿ ಡೌನ್ ಪೇಮೆಂಟ್ ಮಾಡಿ ಬೈಕ್ ಖರೀದಿಸುವ ಗ್ರಾಹಕರು 68 ತಿಂಗಳು, 60 ತಿಂಗಳು, 48 ತಿಂಗಳು ಹಾಗೂ 36 ತಿಂಗಳ ಇಎಮ್‌ಐ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

60 ತಿಂಗಳ ಇಎಮ್‌ಐ ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು 4,557 ರೂಪಾಯಿ ಪಾವತಿಸಬೇಕು. ಇನ್ನು 48 ತಿಂಗಳು ಕಂತು ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು 5,341 ರೂಪಾಯಿ ಪಾವತಿಸಬೇಕು.

ಇನು 36 ತಿಂಗಳು ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು 6,666 ರೂಪಾಯಿ ಪಾವತಿಸಬೇಕು. ಇದರೊಂದಿಗೆ ಮತ್ತಷ್ಟು ಕಂತುಗಳ ಆಯ್ಕೆಯೂ ಲಭ್ಯವಿದೆ.

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಬೈಕ್ ಕೊಳ್ಳಲು ಬಯಸುವವರು ಆಫರ್ ಮೂಲಕ ಕೈಗೆಟಕುವ ಬೆಲೆಯಲ್ಲಿ ಕೊಳ್ಳಬಹುದಾಗಿದೆ.