Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ – ನಟ ಚೇತನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ

ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ರಿಷಬ್ ಶೆಟ್ಟಿ ಸಂದರ್ಶನ ಭರ್ಜರಿಯಾಗಿಯೇ ನಡೆಯುತ್ತಿದೆ. ಸಂದರ್ಶನ ನೀಡುವಾಗ ಕಾಂತಾರ ಸಿನಿಮಾದಲ್ಲಿ ಬಳಸಿರುವ ಭೂತಕೋಲ ಹಿಂದು ಸಂಸ್ಕೃತಿಯ ಆಚರಣೆ ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಆದರೆ ಭೂತಕೋಲ ಹಿಂದು ಆಚರಣೆಯಲ್ಲ ಎಂದು ಟ್ವೀಟ್ ಮಾಡಿದ್ದರು. ಚೇತನ್ ಅವರ ಈ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿ ಸ್ವತಃ ಚೇತನ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ವಿಚಾರ. ಭೂತಕೋಲವು ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಆದರೆ, ಇದು ನಿಜವಲ್ಲ. ಭೂತಕೋಲ ಆದಿವಾಸಿಗಳ ಸಂಸ್ಕೃತಿ, ಪಂಜುರ್ಲಿ, ಪಿಲಿ ಚಾಮುಂಡಿ ಅನ್ನೋದು ಮೂಲ ನಿವಾಸಿಗಳ ಸಂಸ್ಕೃತಿ, ಇದೆಲ್ಲಾ ಹಿಂದೂ ಧರ್ಮಮದ ಒಳಗೆ ಬರೋದು ಅನ್ನೋದು ತಪ್ಪು. ಹಿಂದೂ ಧರ್ಮ 3 ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿ
ಮತ್ತು ವೈದಿಕ ಪರಂಪರೆಯನ್ನ ಹೊಂದಿದೆ. ವೈದಿಕ ಪರಂಪರೆಗೆ ಅದರದ್ದೇ ಆದ ವಿಶೇಷತೆ ಇದೆ. ವೈದಿಕ ಮತ್ತು ಅವೈದಿಕ ಪರಂಪರೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಭೂತಕೋಲ, ಕೊರಗಜ್ಜ, ಮಂಟೇ ಸ್ವಾಮಿ… ಇವೆಲ್ಲಾ ಬಹುಜನ ಸಂಸ್ಕೃತಿ, ಭೂತಕೋಲ ಪರಿಸರ ಮತ್ತು ಪಕೃತಿ ಆರಾಧನೆ ಅನ್ನೋದು 75 ವರ್ಷದ ಹಿಂದಿನಿಂದ ಬಂದದ್ದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

“ಪಂಜುರ್ಲಿ ಅನ್ನೋದು ಸತ್ಯ. ಆದ್ರೆ ವರಾಹ ಅಂತ ಪೂಜೆ ಮಾಡೋದು, ವಿಷ್ಣುವಿನ ಅವತಾರ ಅಂತ ಬ್ರಾಹ್ಮಣ್ಯಕರಣವಾಗಿದೆ. ಈ ಮೂಲಕ ನಮ್ಮ ಮೂಲ ನಿವಾಸಿಗಳ ಪರಂಪರೆಯನ್ನ ಹಾಳು ಮಾಡಿದ ಹಾಗೆ ಆಗುತ್ತೆ. ಹಿಂದೂತ್ವ ಹೇರಿಕೆಯನ್ನ ಒಪ್ಪಿಕೊಳ್ಳೋಕೆ
ಆಗುತ್ತೆ. ಹಿಂದೂತ್ವ ಹೇರಿಕೆಯನ್ನ ಒಪ್ಪಿಕೊಳ್ಳೋಕೆ ಆಗೋಲ್ಲ. ವೈದಿಕತೆ ಪ್ರಶ್ನೆ ಮಾಡೋ ಬುದ್ಧನನ್ನ ವಿಷ್ಣುವಿನ ಒಂಬತ್ತನೆಯ ಅವತಾರ ಅಂದು ಬಿಟ್ರು. ವಿಷ್ಣು ಹಿಂದೂ ಧರ್ಮದ ದೇವರು, ಮೂಲ ನಿವಾಸಿಗಳ ದೇವರು ಅಲ್ಲ. ವರಾಹ ಅವತಾರ ಮೂಲ ನಿವಾಸಿ ಸಂಸ್ಕೃತಿಯ ಮೇಲೆ ಹೇರಿದ್ದಾರೆ. ಪಂಬಂಧ ಸಂಸ್ಕೃತಿಯ ಮೇಲೆ ವೈದಿಕತೆ ಹೇರಿಕೆ ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Leave A Reply

Your email address will not be published.